ಕಿತ್ತೊಯ್ತು 18 ಕೋಟಿ ರಸ್ತೆ, ಸೂಪರ್ ಆಗಿದೆ 4 ಲಕ್ಷದ ರಸ್ತೆ

Social Share

ಬೆಂಗಳೂರು,ಅ.21- ಟೆಂಡರ್ ಶ್ಯೂರ್ ಮಾದರಿಯಲ್ಲಿ ಕೇವಲ 4 ಲಕ್ಷ ರೂ. ವೆಚ್ಚ ಮಾಡಿ ನಿರ್ಮಿಸಿರುವ 5 ರಸ್ತೆಗಳು ಐದು ವರ್ಷ ಕಳೆದರೂ ಅತ್ಯಂತ ಸುಸ್ಥಿತಿಯಲ್ಲಿವೆ. ಆದರೆ, ಟೆಂಡರ್ ಶ್ಯೂರ್ ಯೋಜನೆಯಡಿ 18 ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಿರುವ 700 ಮೀಟರ್ ಉದ್ದದ ರಸ್ತೆ ಮೂರುವರೆ ವರ್ಷದಲ್ಲೇ ಹಾಳಾಗಿರುವುದಕ್ಕೆ ಇದೀಗ ಪುರಾವೆ ದೊರೆತಿದೆ.

18 ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸ ಲಾಗಿರುವ ಚರ್ಚ್ ಸ್ಟ್ರೀಟ್ ರಸ್ತೆ ಕೇವಲ 3 ವರ್ಷಗಳಲ್ಲೇ ಕಿತ್ತು ಬಂದಿದೆ. ಆದರೆ, ಯಡಿಯೂರು ವಾರ್ಡ್‍ನಲ್ಲಿ ಅದೇ ಟೆಂಡರ್ ಶ್ಯೂರ್ ಯೋಜನೆಯಡಿ ಕೇವಲ 4 ಲಕ್ಷ ರೂ. ವೆಚ್ಚ ಮಾಡಿ ನಿರ್ಮಿಸಿರುವ 5 ರಸ್ತೆಗಳು 5 ವರ್ಷಗಳಾದರೂ ಸುಸ್ಥಿತಿಯಲ್ಲಿವೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‍ಸಿಂಗ್ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ದಾಖಲೆ ಒದಗಿಸಿದ್ದಾರೆ.

ಟೆಂಡರ್ ಶ್ಯೂರ್ ಹಾಗೂ ವೈಟ್ ಟಾಪಿಂಗ್ ಯೋಜನೆಗಳು ಬೆಂಗಳೂರು ನಾಗರಿಕರ ತೆರಿಗೆ ಹಣವನ್ನು ಸಂಪೂರ್ಣವಾಗಿ ಲೂಟಿ ಹೊಡೆಯುವ ಯೋಜನೆಗಳಾಗಿವೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ.

ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಯಶಸ್ವಿಗೆ ಒಕ್ಕಲಿಗರ ಸಂಘ ಮನವಿ

ಚರ್ಚ್ ಸ್ಟ್ರೀಟ್‍ನಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆ ನಿರ್ಮಾಣವಾದ ಒಂದೇ ತಿಂಗಳಲ್ಲಿ ಆಗ ಸುರಿದ ಬಾರಿ ಮಳೆಗೆ ಸಂಪೂರ್ಣ ರಸ್ತೆ ಜಲದಿಂದ ಆವೃತವಾಗಿದ್ದ ವರದಿಗಳೂ ಸಹ ಮಾಧ್ಯಮಗಳಲ್ಲಿ ವರದಿ ಯಾಗಿರುತ್ತದೆ. ಹಾಗೆಯೇ, ಕಳೆದ ನಾಲ್ಕೈದು ದಿನಗಳ ಹಿಂದೆಯೂ ರಸ್ತೆ ಕಿತ್ತು ಬಂದಿರುವುದು ಕಂಡು ಬಂದಿದೆ.

ಆದರೆ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ ತಲಾ ಕೇವಲ 04 ಲಕ್ಷ ರೂಪಾಯಿಗಳಷ್ಟು ಅತ್ಯಂತ ಕಡಿಮೆ ಮೊತ್ತದಲ್ಲಿ ತಲಾ 100 ರಿಂದ 120 ಮೀಟರ್ ಉದ್ದದ 05 ರಸ್ತೆಗಳನ್ನು ಅದೇ ಟೆಂಡರ್ ಶ್ಯೂರ್ ಮಾದರಿಯಲ್ಲೇ ಅಭಿವೃದ್ಧಿಪಡಿಸಿ ಈಗಾಗಲೇ ಐದಾರು ವರ್ಷಗಳೇ ಕಳೆದಿದ್ದರೂ ಸಹ ಈ ರಸ್ತೆಗಳ ಒಂದು ಇಂಚಿನಷ್ಟು ಭಾಗವೂ ಸಹ ಹಾಳಾಗಿಲ್ಲ.

ಪುನೀತ್ ಪರ್ವಕ್ಕೆ ಕ್ಷಣಗಣನೆ, ಅರಮನೆ ಮೈದಾನದಲ್ಲಿ ಸೆಲೆಬ್ರೆಟಿಗಳ ಸಮಾಗಮ

ಆಶ್ಚರ್ಯವೆಂದರೆ, ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಇಂತಹ ಕಳಪೆ ಗುಣಮಟ್ಟದ ರಸ್ತೆಯನ್ನು ನಿರ್ಮಿಸಿ 18 ಕೋಟಿ ರೂಪಾಯಿಗಳಷ್ಟು ಹಣದ ಪೈಕಿ ಶೇ. 90 ರಷ್ಟು ಹಣವನ್ನು ಲೂಟಿ ಮಾಡಲಾಗಿರುವುದು ಅತ್ಯಂತ ಸ್ಪಷ್ಟವಾಗಿದ್ದರೂ ಸಹ ಮತ್ತು ಇದೂ ಸಾಲದೆಂಬಂತೆ ಸದರಿ ರಸ್ತೆಯೂ ಸೇರಿದಂತೆ ಅದೇ ಮಾದರಿಯ ರಸ್ತೆಗಳ ವಾರ್ಷಿಕ ನಿರ್ವಹಣೆಯ ಗುತ್ತಿಗೆಯನ್ನು. 4,80,00,000 ರೂ.ಗಳಿಗೆ ನೀಡಿರುವುದೂ ಸಹ ಸಾರ್ವಜನಿಕರ ತೆರಿಗೆ ಹಣವನ್ನು ರಾಜಾರೋಷವಾಗಿ ಲೂಟಿ ಹೊಡೆಯುವ ಕಾರ್ಯವಾದಂತಲ್ಲವೆ ಎಂದು ಅವರು ಪ್ರಶ್ನಿಸಿದ್ದಾರೆ.

ಪೊಲೀಸ್ ನೇಮಕಾತಿಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ : ಸಿಎಂ

ಹಾಗಾಗಿ ಕೆಲವೇ ಲಕ್ಷಗಳಲ್ಲಿ ನಿರ್ಮಿಸ ಬಹುದಾದ ರಸ್ತೆಗೆ 18 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ವ್ಯಯಿಸಿರುವ ಪಾಲಿಕೆಯ ಯೋಜನೆ ಕೇಂದ್ರ ಇಲಾಖೆಯ ಅಂದಿನ ಅಧಿಕಾರಿಗಳ ವಿರುದ್ಧ ಮತ್ತು ಅಧಿಕಾರಿಗಳ ಜೊತೆ ಶಾಮೀಲಾಗಿ ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಿರುವ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಈ ಪ್ರಕರಣದ ತನಿಖೆಯನ್ನು ಸಿಐಡಿ ಅಥವಾ ಲೋಕಾಯುಕ್ತಕ್ಕೆ ವಹಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಬೇಕೆಂದು ರಮೇಶ್ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.

Articles You Might Like

Share This Article