ರಷ್ಯಾ ಕ್ಷಿಪಣಿ ಮಳೆಗೆ 19ಕ್ಕೂ ಹೆಚ್ಚು ಮಂದಿ ಬಲಿ

Social Share

ಕ್ಯಿವ್, ಅ.12- ಕಳೆದೆರಡು ದಿನಗಳಿಂದ ರಷ್ಯಾ ಉಕ್ರೇನ್ ಮೇಲೆ ಕ್ಷಿಪಣಿ ಮಳೆಗರೆಯುತ್ತಿದ್ದು, 19ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ವಿಶ್ವಸಂಸ್ಥೆ ಮತ್ತು ಜಿ-7 ರಾಷ್ಟ್ರಗಳು ರಷ್ಯಾ ನಡೆಯನ್ನು ಯುದ್ಧಾಪರಾಧ ಎಂದು ವಿಶ್ಲೇಷಿಸಿವೆ.

ರಷ್ಯಾದ ಬಿರುಮಳೆ ಶೈಲಿಯ ದಾಳಿ ನಂತರವೂ ಉಕ್ರೇನಿಗರು ಹೆದರದೆ ನಾವು ಹೋರಾಡುತ್ತೇವೆ ಎಂದಿರುವುದು ಜಗತ್ತಿನ ಅಚ್ಚರಿಗೆ ಕಾರಣವಾಗಿದೆ. ವಾರಾಂತ್ಯದಲ್ಲಿ ರಷ್ಯಾ-ಕ್ರೇಮಿಯನ್ ನಡುವಿನ ಸೇತುವೆಯನ್ನು ಸ್ಪೋಟಿಸಲಾಗಿತ್ತು. ಅದಕ್ಕೆ ಉಕ್ರೇನ್‍ನ ವಿಶೇಷ ಸೇವೆಯ ದಳವೇ ಮಾಸ್ಟರ್ ಮೈಂಡ್ ಎಂದು ಭಾವಿಸಿದ ರಷ್ಯಾ ಅಧ್ಯಕ್ಷ ವಾಲ್ಡಿಮಿರ್ ಪುಟೀನ್ ಉಕ್ರೇನ್ ಮೇಲಿನ ದಾಳಿಯನ್ನು ತ್ರೀವ್ರಗೊಳಿಸಿದ್ದಾರೆ.

ಪರಿಣಾಮ ಕಳೆದ ಎರಡು ದಿನಗಳಿಂದ ಉಕ್ರೇನ್ ರಾಜಧಾನಿ ಕ್ಯಿವ್ ಸೇರಿದಂತೆ ನಗರ ಪ್ರದೇಶಗಳಿಗೆ 100ಕ್ಕೂ ಹೆಚ್ಚು ಕ್ಷಿಪಣಿಗಳು ಅಪ್ಪಳಿಸಿವೆ. ಹಲವಾರು ದ್ರೋಣ್‍ಗಳು ದಾಳಿ ನಡೆದಿವೆ. ಕನಿಷ್ಟ 19 ಮಂದಿ ಸಾವನ್ನಪ್ಪಿರುವ ವರದಿಗಳಾಗಿವೆ. ಉಕ್ರೇನ್ ಪಡೆಗಳು ಒಂದಷ್ಟು ಕ್ಷಿಪಣಿಗಳು, ದ್ರೋಣ್‍ಗಳನ್ನು ಹೊಡೆದುರಳಿಸಿವೆ.

ರಣ ಭೀಕರ ಪರಿಸ್ಥಿತಿಯ ಹೊರತಾಗಿಯೂ ಕ್ಯಿವ್‍ನ ನಿವಾಸಿಗಳು ದೇಶಾಭಿಮಾನ ಪ್ರದರ್ಶಿಸಿದ್ದಾರೆ. ರಷ್ಯಾದ ದಾಳಿ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ಸಿಟ್ಟನ್ನು ಹೆಚ್ಚಿಸಿದೆ. ನಾವು ಕೂಡ ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಸಂಚಾರಿ ದೀಪಗಳ ನಿರ್ವಹಣೆ ಮಾಡುವ 67 ವರ್ಷದ ವೋಲ್ಡಿಮಿರ್ ವ್ಯಾಸ್ಲೇಂಕೋ ಹೇಳಿದ್ದಾರೆ.

ನಿರಂತರ ದಾಳಿಯಿಂದಾಗಿ ಹಲವು ಕಡೆ ವಿದ್ಯುತ್ ವ್ಯವಸ್ಥೆ ಹಾಳಾಗಿದೆ, ಕತ್ತಲು ಆವರಿಸಿದೆ. ಅಧಿಕಾರಿಗಳು ಜನರಿಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದು, ಅಗತ್ಯದಲ್ಲಿ ಇಂಧನ ಮತ್ತು ನೀರನ್ನು ದಾಸ್ತಾನು ಮಾಡಿಕೊಳ್ಳುವಂತೆ ಸಲಹೆ ಮಾಡಿದ್ದಾರೆ.

ಹೊಸ ಬೆಳವಣಿಗೆಗಳ ಬಗ್ಗೆ ಉಕ್ರೇನ್ ಅಧ್ಯಕ್ಷ ವಾಲ್ಡಮೀರ್ ಝಲೆನ್ಸ್ಕಿ, ಜಿ-7 ರಾಷ್ಟ್ರಗಳ ನಾಯಕರ ಜೊತೆ ವರ್ಚುವಲ್ ಸಭೆ ನಡೆಸಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿ ರಷ್ಯಾ ಉಕ್ರೇನ್‍ನ ಜನವಸತಿ ಪ್ರದೇಶದ ಮೇಲೆ ಆಕ್ರಮಣ ಮಾಡಿದೆ. ನಾವು ಬಹಳಷ್ಟನ್ನು ಹೊಡೆದುರಳಿಸಿದ್ದೇವೆ. ಪ್ರಸ್ತುತ ನಮಗೆ ಅತ್ಯಾಧುನಿಕ ಮತ್ತು ಪರಿಣಾಮಕಾರಿ ಆಯುಧಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

ಉಕ್ರೇನ್ ತೈಲಗಾರಗಳ ಮೇಲೆ ದಾಳಿ ನಡೆಸಿರುವ ರಷ್ಯಾ, ತಾನು ಲಾಭ ಮಾಡಿಕೊಳ್ಳುತ್ತಿದೆ. ಐ-7 ರಾಷ್ಟ್ರಗಳು ಈ ದಾಳಿಗೆ ಕ್ಷೀಪ್ರ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಪೆಂಟಗನ್ ಇತ್ತೀಚೆಗೆ ಎರಡು ಎನ್‍ಎಎಸ್‍ಎಂಸ್ ಅತ್ಯಾಧುನಿಕ ಕ್ಷಿಪಣಿ ನಿರೋಧಕಕಗಳನ್ನು ಒದಗಿಸುವುದಾಗಿ ಘೋಷಿಸಿತ್ತು. ಇನ್ನೆರಡು ವಾರಗಳಲ್ಲಿ ಅವು ಉಕ್ರೇನ್ ತಲುಪಲಿವೆ. ಕ್ಯಿವ್‍ಗೆ ಇವು ಬಹಳ ದಿನಗಳ ಬೇಡಿಕೆಯಾಗಿದ್ದವು. ಕ್ಷಿಪಣಿ ದಾಳಿಯನ್ನು ಪ್ರತಿರೋಸುವ ದೂರ ಮತ್ತು ಮಧ್ಯಮ ಗುರಿಯ ರಕ್ಷಣಾ ಸಾಮಾಗ್ರಿಗಳನ್ನು ಒದಗಿಸಲಾಗುತ್ತಿದೆ.

ಅಮೆರಿಕಾ ಅಧ್ಯಕ್ಷ ಜೋ ಬಿಡೇನ್ ದೂರವಾಣಿಯಲ್ಲಿ ಮಾತನಾಡಿದ್ದು, ಉಕ್ರೇನ್ ಜೊತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬೆಂಬಲದೊಂದಿಗೆ ನಿಲ್ಲುವ ಪ್ರತಿಜ್ಞೆಯನ್ನು ಪುನರುಚ್ಚರಿಸಿದ್ದಾರೆ. ಆಕ್ರಮಣದಿಂದ ರಕ್ಷಣೆ ಮಾಡಿಕೊಳ್ಳಲು ಅಗತ್ಯ ಇರುವ ಎಲ್ಲಾ ಸಲಕರಣೆಗಳನ್ನು ಮತ್ತು ಸೌಲಭ್ಯಗಳನ್ನು ಒದಗಿಸುವುದಾಗಿ ಹೇಳಿದ್ದಾರೆ.

Articles You Might Like

Share This Article