2 ಲಕ್ಷಕ್ಕಿಂತ ಹೆಚ್ಚು ಹಣ ಇರುವ ಖಾತೆಗಳ ವಿವರ ನೀಡುವಂತೆ ಬ್ಯಾಂಕ್ ಗಳಿಗೆ ಆರ್ಬಿಐ ಸೂಚನೆ..!

RBI-01

ನವದೆಹಲಿ .ಡಿ.17 : ನೋಟ್ ಬ್ಯಾನ್ ನಂತರ ಕಾಲಧನಿಕರನ್ನು ಕಟ್ಟಿಹಾಕಲು ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಈ ಸರ್ಕಾರ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಿಟ್ಟಿದ್ದು ಎರಡು ಲಕ್ಷ ಅಥವಾ ಅದಕ್ಕಿಂತ ಮೇಲ್ಪಟ್ಟು ಹಣವನ್ನು ಬ್ಯಾಂಕ್ ಖಾತೆಗಳ ವಿವರ ಬ್ಯಾಂಕ್ ಗಳಿಗೆ ಆರ್ಬಿಐ ಸೂಚಿಸಿದೆ.  ನ.8ರ ಬಳಿಕದಲ್ಲಿ ಎರಡು ಲಕ್ಷ ರೂ. ಅಥವಾ ಹೆಚ್ಚಿನ ಹಣ ಜಮೆಯಾಗಿರುವ ಖಾತೆಗಳನ್ನು ಗುರುತಿಸಿ ವರದಿ ಮಾಡುವಂತೆ ಬ್ಯಾಂಕುಗಳಿಗೆ ಆರ್‌ಬಿಐ ಸೂಚಿಸಿದೆ. ಇಂತಹ ಖಾತೆಗಳ ಬಗ್ಗೆ ಆದಾಯ ತೆರಿಗೆ ಇಲಾಖಾಧಿಕಾರಿಗಳು ತನಿಖೆ ನಡೆಸಲಿದ್ದಾರೆ.

ಇಂತಹ ಶಂಕಿತ ಖಾತೆಗಳ ವ್ಯವಹಾರವನ್ನು ಗುರಿ ಇರಿಸಿ ಕಪ್ಪು ಹಣದ ವಿರುದ್ಧ ಹೋರಾಡುವುದು ಸರಕಾರದ ಮುಂದಿನ ಕ್ರಮವಾಗಿದೆ. ಈ ಸಂಬಂಧ ಆರ್‌ಬಿಐ, ಮೊದಲ ಮೂರು ವರ್ಗಗಳ ಮಹಾನಗರ, ನಗರ ಹಾಗೂ ಪಟ್ಟಣಗಳಲ್ಲಿನ ಬ್ಯಾಂಕುಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ ಎನ್ನಲಾಗಿದೆ.

Sri Raghav

Admin