ಭಾರತಕ್ಕೆ ಕೊರೋನಾಘಾತ : 24 ಗಂಟೆಯಲ್ಲಿ 2.64 ಲಕ್ಷ ಮಂದಿಗೆ ಪಾಸಿಟಿವ್, 315 ಸಾವು..!

Social Share

ನವದೆಹಲಿ,ಜ.14- ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2.64 ಲಕ್ಷ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 315 ಮಂದಿ ಕೊನೆಯುಸಿರೆಳೆದಿದ್ದಾರೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬೆಳಗ್ಗೆ ಬಿಡುಗಡೆ ಮಾಡಿರುವ ವರದಿ ಪ್ರಕಾರ ನಿನ್ನೆಗೆ ಹೋಲಿಸಿದರೆ ಸೋಂಕಿತರ ಪ್ರಮಾಣ ಶೇ.6.7ರಷ್ಟು ಹೆಚ್ಚಳವಾಗಿದೆ.
ಸಕ್ರಿಯ ಪ್ರಕರಣಗಳು ಕೂಡ ಹೆಚ್ಚಾಗುತ್ತಿದ್ದು, ಇಡೀ ದೇಶದಲ್ಲೇ ಮಹಾರಾಷ್ಟ್ರ ಅಂತ್ಯಂತ ಕೊರೊನಾದಿಂದ ಬಾದಿತವಾಗಿರುವ ರಾಜ್ಯವೆಂದು ತಿಳಿದು ಬಂದಿದ್ದು, ನಂತರದ ಸ್ಥಾನದಲ್ಲಿ ದೆಹಲಿ ಮತ್ತು ಕೇರಳ ತಲುಪಿದೆ.
ಕೊರೊನಾದ ಜತೆಗೆ ಓಮಿಕ್ರಾನ್ ಕೂಡ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಲಿದ್ದು, ಆದರೆ ಮುಂದಿನ ತಿಂಗಳ ವೇಳೆಗೆ ಕಡಿಮೆಯಾಗಬಹುದು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಭಾರತದಲ್ಲಿ ಮೂರನೆ ಅಲೆ ಪ್ರವೇಶಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಸತತ ಮೂರು ವರ್ಷಗಳಿಂದ ಸೋಂಕಿನಿಂದಲೇ ದೇಶದ ಜನರು ಸಂಕಷ್ಟಕ್ಕೀಡಾಗುತ್ತಿದ್ದು, ಆದರೂ ಜನರು ಸಾಕಷ್ಟು ಎಚ್ಚೆತ್ತುಕೊಂಡು ಈ ಬಾರಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಲಸಿಕೆ ಪಡೆಯದವರಿಗೆ ಸೋಂಕು ಬಾತವಾಗುವ ಸಾಧ್ಯತೆ ಇರುವುದರಿಂದ ಲಸಿಕೆ ನೀಡಿಕೆ ಪ್ರಮಾಣವನ್ನು ಹೆಚ್ಚಿಸಬೇಕು ಮತ್ತು ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಲಾಕ್‍ಡೌನ್ ಮಾದರಿಯಲ್ಲಿ ಜನ ಸಂಚಾರವನ್ನು ನಿಷೇಸಬೇಕೆಂದು ಕೆಲವು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಇದರ ನಡುವೆ ದೇಶದ ಹಲವು ರಾಜ್ಯಗಳಲ್ಲಿ ನೈಟ್‍ಕಫ್ರ್ಯೂ ಜಾರಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಲಾಕ್‍ಡೌನ್ ಆಗುವ ಭೀತಿ ಎದುರಾಗಿದೆ.

Articles You Might Like

Share This Article