ಮುಂಬೈ,ಜ.22- ಕೇಂದ್ರ ಮುಂಬೈನ ವಸತಿ ಕಟ್ಟಡದ 18ನೇ ಮಹಡಿಯಲ್ಲಿ ಇಂದು ಬೆಳಗ್ಗೆ ಉಂಟಾದ ಭಾರಿ ಅಗ್ನಿ ಅನಾಹುತದಲ್ಲಿ ಕನಿಷ್ಠ 7 ಮೃತಪಟ್ಟು ಇತರ 17 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೋವಾಲಿಯಾ ಟ್ಯಾಂಕ್‍ನ ಗಾಂ ಆಸ್ಪತ್ರೆ ಎದುರಿನ ಕಮ್ಲಾ ಕಟ್ಟಡದಲ್ಲಿ ಬೆಳಗ್ಗೆ ಸುಮಾರು 7 ಗಂಟೆಯಲ್ಲಿ ಬೆಂಕಿ ಹೊತ್ತುಕೊಂಡಿತು ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯ ಅಧಿಕಾರಿ ಹೇಳಿದ್ದಾರೆ. ಇದು ನೆಲಮಹಡಿ ಮತ್ತು 20 ಅಂತಸ್ತುಗಳುಳ್ಳ ಕಟ್ಟಡ. 18ನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಾಹಿತಿ ಲಭಿಸಿದೊಡನೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
13 ಅಗ್ನಿ ಶಾಮಕ ವಾಹನಗಳು, ಏಳು ವಾಟರ್ ಜೆಟ್ಟೀಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಇದನ್ನು ಮೂರನೆ ಹಂತದ (ಭಾರಿ) ಅಗ್ನಿಯ ವರ್ಗವಾಗಿ ಪರಿಗಣಿಸಲಾಗಿದೆ ಎಂದು ಅವರು ನುಡಿದಿದ್ದಾರೆ. ಗಾಯಾಳುಗಳ ಪೈಕಿ 15 ಮಂದಿಯನ್ನು ಸಮೀಪದ ಭಾಟಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇತರ ನಾಲ್ಕು ಜನರನ್ನು ನಾಯರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರು ಆಸ್ಪತ್ರೆಗೆ ತರುವಾಗಲೇ ಅಸುನೀಗಿದ್ದರು ಎಂದು ವೈದ್ಯರು ತಿಳಿಸಿದರು. ಉಳಿದಿಬ್ಬರ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂಬುದಾಗಿ ಅಕಾರಿ ತಿಳಿಸಿದ್ದಾರೆ.
15 ಗಾಯಾಳುಗಳಲ್ಲಿ 12 ಜನರನ್ನು ಜನರಲ್ ವಾರ್ಡ್‍ಗೆ ದಾಖಲಿಸಲಾಗಿದೆ. ಇತರ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಅವರು ತುರ್ತು ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಕಿ ನಂದಿಸುವ ಮತ್ತು ರಕ್ಷಣಾ ಕಾರ್ಯಮುಂದುವರೆದಿದೆ ಎಂದು ಅವರು ವಿವರಿಸಿದ್ದಾರೆ.
