ಕ್ಯಾಲಿಫೋರ್ನಿಯಾದಲ್ಲಿ ಮತ್ತೊಂದು ಶೂಟ್‍ಔಟ್, ಇಬ್ಬರ ಸಾವು

Social Share

ಲಾಸ್ ಏಂಜಲೀಸ್, ಜುಲೈ 12 – ಮುಂಜಾನೆ ದಕ್ಷಿಣ ಕ್ಯಾಲಿಫೋರ್ನಿಯಾದ ಮಳಿಗೆಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ಇಲ್ಲಿ ಪ್ರಸಿದ್ದ 7-ಇಲೆವೆನ್ ಮಳಿಗೆ ಸಾಲಿನಲ್ಲಿ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡಿನ ದಾಳಿ ಎಂದು ಶಂಕಿಸಲಾಗಿದ್ದು.

ದರೋಡೆಯ ಪ್ರಯತ್ನ ನಂತರ ಗುಂಡಿನ ದಾಳಿ ನಡೆದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನ್ಯಾಷನಲ್ 7-ಇಲೆವೆನ್ ಬ್ರ್ಯಾಂಡ್ ತನ್ನ 95 ನೇ ವಾರ್ಷಿಕೋತ್ಸವಕ್ಕಾಗಿ ಉಚಿತವಾಗಿ ಮದ್ಯ ವಿತರಿಸಲಾಗಿತ್ತು ಮುಂಜಾನೆ 1.30 ರ ನಡುವೆ ಈ ಘಟನೆ ನಡೆದಿದೆ ಎಂದು ರಿವಸೈಡ್ ಪೊಲೀಸ್ ಇಲಾಖೆಯ ವಕ್ತಾರ ಅಧಿಕಾರಿ ರಿಯಾನ್ ರೈಲ್ಸ್‍ಬ್ಯಕ್ ಹೇಳಿದ್ದಾರೆ.

ಬಂದೂಕುಧಾರಿ ಮಳಿಗೆಗೆ ನುಗ್ಗಿ ಗುಮಾಸ್ತನನ್ನು ಥಳಿಸಿ ಬಂದೂಕನ್ನು ದರೋಡೆ ಮಾಡಿ ಆದರಿಂದಲೆ ಗುಂಡು ಹಾರಿಸಿ ಪರಾರಿಯಾಗಿದ್ದನು ಎಂದು ತಿಳಿಸಿದ್ದಾರೆ. ಎರಡನೇ ಗುಂಡಿನ ದಾಳಿಯು ಸುಮಾರು 24 ಮೈಲಿ (39 ಕಿಲೋಮೀಟರ್) ದೂರದಲ್ಲಿ ಸಾಂಟಾಅನಾದಲ್ಲಿ ಸುಮಾರು 3:20 ಗಂಟೆಗೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾರ್ಕಿಂಗ್ ಸ್ಥಳದಲ್ಲಿ ಒಬ್ಬ ವ್ಯಕ್ತಿ ಗುಂಡೇಟಿನಿಂದ ಸತ್ತಿರುವುದು ಕಂಡುಬಂದಿದೆ. ಇಲ್ಲಿ ಕೂಡ ದರೋಡೆ ಯತ್ನ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Articles You Might Like

Share This Article