ಬೆಂಗಳೂರು,ಆ.7-ನಗರದಲ್ಲಿ ಇಂದು ಮುಂಜಾನೆ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಅಗ್ನಿ ಅವಘಡ ಸಂಭವಿಸಿ ಮೂವರು ಗಾಯಗೊಂಡಿದ್ದು, ಮೂರು ವಾಹನಗಳು ಬೆಂಕಿಗೆ ಆಹುತಿ ಯಾಗಿವೆ.
ಡಿಜೆಹಳ್ಳಿ: ಶ್ಯಾಂಪುರ ಮುಖರಸ್ತೆ, 2ನೇ ಕ್ರಾಸ್, ಕೆಂಪಯ್ಯ ಲೇಔಟ್‍ನ ಮನೆಯ ಕೊಠಡಿಯಲ್ಲಿ ಸಂಗ್ರಹಿಸಿ ಡಲಾಗಿದ್ದ ಸುಗಂಧ ದ್ರವ್ಯಗಳು, ಸ್ಯಾನಿಟೈಸರ್‍ಗೆ ಬೆಂಕಿ ಹೊತ್ತಿಕೊಂಡಿದೆ.ಮನೆಯಲ್ಲಿದ್ದ ಜಾನ್ಸನ್ ಮತ್ತು ಸಂತೋಷ್ ಎಂಬುವರಿಗೆ ಸುಟ್ಟ ಗಾಯಗಳಾಗಿವೆ. ದಿಲ್ ಷಾ ಎಂಬ ಮಹಿಳೆ ಮೆಟ್ಟಿಲು ಇಳಿಯುತ್ತಿದ್ದಾಗ ಜಾರಿಬಿದ್ದು ಗಾಯಗೊಂಡಿದ್ದಾರೆ.
ಈ ಮೂವರನ್ನು ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಮನೆಯ ಕೊಠಡಿಯೊಂದರಲ್ಲಿ ಸಂಗ್ರಹಿಸಿಡಲಾಗಿದ್ದ ಶಾಂಪೂ, ಸುಗಂಧ ದ್ರವ್ಯಗಳು, ಸ್ಯಾನಿಟೈಸರ್ ಸೇರಿದಂತೆ ಇತರೆ ವಸ್ತುಗಳಿಗೆ ಬೆಳಗಿನ ಜಾವ 1 ಗಂಟೆ ಸುಮಾರಿನಲ್ಲಿ ಬೆಂಕಿ ತಾಗಿದ್ದರಿಂದ ಮನೆಯ ಪೂರ್ತಿ ಬೆಂಕಿ ಆವರಿಸಿಕೊಂಡು ಜಾನ್ಸನ್ ಹಾಗೂ ಸಂತೋಷ್‍ಗೆ ಸುಟ್ಟ ಗಾಯಗಳಾಗಿವೆ.
ಸುದ್ದಿ ತಿಳಿದು ಡಿಜೆಹಳ್ಳಿ ಠಾಣೆ ಪೊಲೀಸರು, ಅಗ್ನಿಆಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಜೆಪಿನಗರ: ಸಾರಕ್ಕಿಯ ಸಿಲ್ವರ್ ಲೇನ್ ಅಪಾರ್ಟ್‍ಮೆಂಟ್‍ನಲ್ಲಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ಒಂದು ಕಾರು ಹಾಗು 2 ಸ್ಕೂಟರ್‍ಗಳಿಗೆ ಬೆಂಕಿ ತಾಗಿ ಭಾಗಶಃ ಹಾನಿಗೊಳಗಾಗಿವೆ. ಸುದ್ದಿ ತಿಳಿದು ಜೆಪಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಿಡಿ ವಾಹನಗಳಿಗೆ ತಾಗಿ ಅವಘಡ ಸಂಭವಿಸಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ ಈ ಎರೂ ಪ್ರಕರಣಗಳನ್ನು ಆಯಾಯ ಠಾಣೆ ಪೊಲೀಸರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.