ಧುಬ್ರಿ, ಆ.20- ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿದ ಇಬ್ಬರಿಗೆ ಅಸ್ಸಾಂನ ಜಿಲ್ಲಾ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಸ್ಸಾಂನ ಮಂಕಚರ್ ಜಿಲ್ಲೆಯ ದಕ್ಷಿಣ ಸಲ್ಮಾರದ ಜಿಲ್ಲಾ ನ್ಯಾಯಾಲಯ ಅಕ್ರಮ ನುಸುಳುಕೋರರಾದ ನಿರಂಜನ್ ಘೋಶ್ ಮತ್ತು ಅಬ್ದುಲ್ ಹೈ ಎಂಬುವರಿಗೆ ಐದು ವರ್ಷ ಶಿಕ್ಷೆ ಮತ್ತು ತಲಾ 10 ಸಾವಿರ ರೂಪಾಯಿ ದಂಡ ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದರೆ ಮತ್ತೆ ಆರು ತಿಂಗಳ ಕಾಲ ಶಿಕ್ಷೆ ಅನುಭವಿಸಲು ಸೂಚಿಸಲಾಗಿದೆ.
2021ರ ಮಾರ್ಚ್ 6ರಂದು ಅಬ್ದುಲ್ ಹೈ ಅವರನ್ನು ಮಂಕಚರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿತ್ತು. ಈತ ಬೆಹುಲ್‍ಚಾರ್ ಪ್ರದೇಶದಿಂದ ಬಾಂಗ್ಲಾದಿಂದ ಭಾರತಕ್ಕೆ ನುಸಳುವ ಯತ್ನ ನಡೆಸಿದ್ದ ಎಂಬ ಆರೋಪಗಳಿದ್ದವು.
ಅದೇ ವರ್ಷ ಮೇ 25ರಂದು ನಿರಂಜನ್ ಘೋಷ್‍ರನ್ನು ಪೊಲೀಸರು ಗಡಿಯಲ್ಲಿ ಬಂಧಿಸಿದ್ದರು.
ಇಬ್ಬರನ್ನು ನ್ಯಾಯಾಲಯ ಬಾಂಗ್ಲಾ ಪ್ರಜೆಗಳು ಎಂದು ಖಚಿತ ಪಡಿಸಿಕೊಂಡು, ಸೂಕ್ತ ಅನುಮತಿ ಮತ್ತು ದಾಖಲೆಗಳಿಲ್ಲದೆ ನುಸಳಿದ್ದ ಕಾರಣಕ್ಕೆ ಶಿಕ್ಷೆ ವಿಧಿಸಿದೆ ಎಂದು ಸರ್ಕಾರಿ ಅಭಿಯೋಜಕ ಬಿಸ್ವಜಿತ್ ಮಹಂತ ತಿಳಿಸಿದ್ದಾರೆ.