ಭೂಪಾಲ್,ಆ.6- ವೇಗವಾಗಿ ಬಂದ ಟ್ರಕ್ ಕನ್ವಾರಿಯಾ (ಶಿವ ಭಕ್ತರು)ಗಳ ಮೇಲೆ ಹರಿದು ಇಬ್ಬರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನೆಯಲ್ಲಿ ಇಂದು ನಡೆದಿದೆ. ಮಧ್ಯಪ್ರದೇಶದ ರಂಗವಾಸಾ ನಿವಾಸಿಗಳಾದ ಬದ್ರಿಲಾಲ್ ಪಾಟಿದಾರ್ ಮತ್ತು ಮನೀಶ್ ದುಬೈ ಸಾವನ್ನಪ್ಪಿರುವ ಯಾತ್ರಿಗಳು.
ಟ್ರಕ್ ಹರಿದ ಪರಿಣಾಮ ಪಾಟಿದಾರ್ ದೇಹ ನಜ್ಜುಗುಜ್ಜಾಗಿದ್ದು, ಮನೀಶ್ ದುಬೆ ಕಾಲು ತುಂಡಾಗಿ ಸಾವನ್ನಪ್ಪಿದ್ದಾರೆ. ಒಟ್ಟು 21 ಯಾತ್ರಿಗಳು ಯಾತ್ರೆ ಕೈಗೊಂಡಿದ್ದರು. ಈ ಪೈಕಿ 16 ಮಂದಿ ತಮ್ಮ ಗಮ್ಯಸ್ಥಾನವನ್ನು ತಲುಪಿದ್ದಾರೆ. ಉಳಿದ ಐದು ಮಂದಿ ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಇವರತ್ತ ನುಗ್ಗಿ ಈ ಅವಘಡ ಸಂಭವಿಸಿದೆ.
ಬರ್ವಾಹ್ನ ಖೇಡಿ ಘಾಟ್ನಲ್ಲಿ ನರ್ಮದಾ ನದಿಯಿಂದ ಮಡಿಕೆಗಳಿಂದ ನೀರು ತುಂಬಿಸಿ ನಡೆದುಕೊಂಡು ಹೋಗುತ್ತಿದ್ದಾಗ ಟ್ರಕ್ ಅಪಘಾತಕ್ಕೀಡಾಯಿತು ಎಂದು ಮೃತರ ಸಹಚರ ರಾದ ಆನಂದ್ ಚೌಧರಿ ತಿಳಿಸಿದ್ದಾರೆ.
ಟ್ರಕ್ನಡಿ ಸಿಲುಕಿ ನಜ್ಜುಗುಜ್ಜಾದ ಬದ್ರಿಲಾಲ್ ಪಾಟಿದಾರ್ ಮತ್ತು ಮನೀಶ್ ದುಬೈ ಅವರ ಮೃತದೇಹಗಳನ್ನು ಹೊರತೆಗೆಯಲು ಎರಡು ಕ್ರೇನ್ಗಳನ್ನು ಬಳಸಲಾಗಿದೆ. ಶವಗಳನ್ನು ಬರ್ವಾ ಸಿವಿಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅವರ ಸಂಬಂಕರಿಗೆ ಹಸ್ತಾಂತರಿಸಲಾಗಿದೆ.