BIG NEWS: ನ್ಯಾಟೊ ಸದಸ್ಯ ಪೊಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ

Social Share

ವಾರ್ಸಾ,ನ.16- ರಷ್ಯಾ ನಿರ್ಮಿತ ಕ್ಷಿಪಣಿಗಳು ಉಕ್ರೇನ್ ಗಡಿಯಲ್ಲಿರುವ ಪೊಲೆಂಡ್ ಹಳ್ಳಿಗಳ ಮೇಲೆ ಅಪ್ಪಳಿಸಿದ್ದು, ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಪೊಲೆಂಡ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಲುಕಾಜ್ ಜಸಿನಾ ಇದನ್ನು ದೃಢಪಡಿದ್ದಾರೆ. ಕ್ಷಿಪಣಿ ದಾಳಿಯ ಬಗ್ಗೆ ವಿವರಣೆ ನೀಡುವಂತೆ ರಷ್ಯಾದ ರಾಯಭಾರಿಗೆ ಪೊಲೆಂಡ್ ತಾಕೀತು ಮಾಡಿದೆ.

ನ್ಯಾಟೊ ಸದಸ್ಯ ದೇಶವಾಗಿ ಪೊಲೆಂಡ್ ಸೇರಿದ ಕೆಲವೇ ದಿನಗಳ ನಂತರ ಈ ಘಟನೆ ನಡೆದಿದ್ದು ರಷ್ಯಾ ದಾಳಿಯು ಉಕ್ರೇನ ನಿಂದಾಚೆಗೆ ವಿಸ್ತರಿಸಬಹುದು ಎಂಬ ಆತಂಕ ಶುರುವಾಗಿದೆ. ಈ ನಡುವೆ ಉಕ್ರೇನ್ ಗಡಿಯಲ್ಲಿರುವ ಸೇನಾ ನೆಲೆಗಳಲ್ಲಿ ಪೊಲೆಂಡ್ ಕಟ್ಟೆಚ್ಚರ ಘೋಷಿಸಿದೆ.

ಅಮೇರಿಕ ಸಂಸತ್‌ನಲ್ಲಿ ಟ್ರಂಪ್’ಗೆ ಹೆಚ್ಚಿದ ಬಲ

ದಾಳಿ ಪಡೆಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು, ಸಶಸ್ತ್ರಪಡೆಯ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಪೊಲೆಂಡ್ ಸರ್ಕಾರವು ಆದೇಶ ಹೊರಡಿಸಿದೆ. ಇಂಡೊನೇಷ್ಯಾದ ರಾಜಧಾನಿ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಸದಸ್ಯ ರಾಷ್ಟ್ರಗಳ ಸಮಾವೇಶದಲ್ಲಿಯೂ ಪೊಲೆಂಡ್ ದಾಳಿ ಚರ್ಚೆಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಐರೋಪ್ಯ ಒಕ್ಕೂಟದ ಅಧ್ಯಕ್ಷ ಚಾಲ್ಸರ್ï ಮೈಕೆಲ, ದಾಳಿಯ ಬಗ್ಗೆ ತಿಳಿದು ಆಘಾತವಾಯಿತ ಎಂದು ಹೇಳಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುವಲ್ ಮಾಕ್ರೋನ್ ತಕ್ಷಣ ಮಾತುಕತೆಗೆ ಮುಂದಾಗಬೇಕು ಎಂದು ತಾಕೀತು ಮಾಡಿದ್ದಾರೆ. ಏನಾಗಿದೆ ಎಂಬ ಬಗ್ಗೆ ವಿಸ್ತೃತ ವರದಿ ಪಡೆದುಕೊಂಡ ನಂತರ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಅಮೆರಿಕಹೇಳಿದೆ.

ಭಾರತದ ಸರಣಿಗೆ ಕಿವೀಸ್ ತಂಡ ಪ್ರಕಟ

ಉಕ್ರೇನ್ ರಾಜಧಾನಿ ಕೀವ್ ನಗರ ಸೇರಿದಂತೆ ಉಕೇನ್‍ನ ವಿವಿಧೆಡೆ ರಷ್ಯಾ ಕ್ಷಿಪಣಿ ದಾಳಿ ಮುಂದುವರಿಸಿದ್ದು, ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಅಸ್ತವ್ಯಸ್ತಗೊಂಡಿದ್ದು ಇಡೀ ದೇಶ ಕತ್ತಲಲ್ಲಿ ಮುಳುಗಿದೆ.

Articles You Might Like

Share This Article