ಭುವನೇಶ್ವರ್, ಅ. 10 – ಫುಟ್ಬಾಲ್ ಪಂದ್ಯ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಿಡಿಲು ಬಡಿದು ಆಟಗಾರ ಸೇರಿ ಇಬ್ಬರು ಸಾವನ್ನಪ್ಪಿ ಸುಮಾರು 21ಮಂದಿ ಗಾಯಗೊಂಡಿರುವ ಘಟನೆ ಒಡಿಶಾದ ಸುಂದರ್ಗಢ್ ಜಿಲ್ಲೆಯ ನುಗಾಂವ್ ಬ್ಲಾಕನ್ ಬನೆಲಾಟಾದಲ್ಲಿ ನಡೆದಿದೆ.
ಮೃತರಲ್ಲಿ ಒಬ್ಬರು ಫುಟ್ಬಾಲ್ ಆಟಗಾರರಾಗಿದ್ದರೆ, ಗಾಯಗೊಂಡವರಲ್ಲಿ ಹೆಚ್ಚಿನವರು ಪ್ರೇಕ್ಷಕರು ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯ ರಾಜಧಾನಿಯಿಂದ ಸುಮಾರು 350 ಕಿಮೀ ದೂರದಲ್ಲಿರುವ ನುಗಾಂವ್‍ನಲ್ಲಿ ಸ್ಥಳೀಯ ಕ್ಲಬ್‍ಗಳ ನಡುವೆ ಫುಟ್ಬಾಲ್ ಪಂದ್ಯ ನಡೆಯುತ್ತಿತ್ತುಆಕಾಶದಲ್ಲಿ ಮೋಡ ಕವಿದಿದ್ದರೂ ಮಳೆ ಬರುತ್ತಿರಲಿಲ್ಲ ದಿಢೀರನೆ ಗುಡುಗು ಸಿಡಿಲು ಸನ್ನಿವೇಶ ಸೃಷ್ಠಿಯಾಯಿತು.
ಮೈದಾನಕ್ಕೆ ಸಿಡಿಲು ಬಡಿದು ಒಮ್ಮಲೆ ನೆರದಿದ್ದ ಪ್ರೇಕ್ಷಕರು ಕೂಗಿಕೊಂಡರು ಗಾಯಗೊಂಡವರನ್ನು ಹತಿಬರಿ ಸಮುದಾಯ ಆರೋಗ್ಯ ಕೇಂದ್ರ ಕರೆದೊಯ್ಯುವಾಗ ಇಬ್ಬರು ಮೃತಪಟ್ಟಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಗೊಂಡವರಲ್ಲಿ 17 ಜನರನ್ನು ರೂರ್ಕೆಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏತನ್ಮಧ್ಯೆ, ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸೃಷ್ಠಿಯಾಗಿದ್ದು ಇನ್ನೆರಡು ದಿನ ರಾಜ್ಯದಲ್ಲಿ ಭರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.