ಕೆನಡಾ,ಜು.26- ಕೆನಡಾದ ವ್ಯಾಂಕೋವರ್ನಲ್ಲಿ ಭಾರೀ ಗುಂಡಿನ ದಾಳಿ ನಡೆದಿದ್ದು , ಇಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದಾರೆ. ಪ್ರತಿ ದಾಳಿಯಲ್ಲಿ ಶಂಕಿತ ದಾಳಿಕೋರನೂ ಕೂಡ ಸಾವನ್ನಪ್ಪಿದ್ದಾನೆ.
ಲಾಂಗ್ಲಿ ಮತ್ತು ಲಾಂಗ್ಲಿ ಟೌನ್ಶಿಪ್ನ 5 ಸ್ಥಳಗಳಲ್ಲಿ ದಾಳಿಕೋರರು ದಾಳಿ ನಡೆಸಿದ್ದು, ನಿರಾಶ್ರಿತರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಆದರೆ ಪೊಲೀಸ್ ಅಧಿಕಾರಿಗಳು ಇದನ್ನು ಖಚಿತಪಡಿಸಿಲ್ಲ. ಪೊಲೀಸ್ ಅಧಿಕಾರಿಗಳು ಶಂಕಿತರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ. ಈ ಜನರ ನಡುವೆ ಏನಾದರೂ ಸಂಪರ್ಕವಿದೆಯೇ ಅಥವಾ ಇಲ್ಲವೇ ಎಂದು ಕಂಡುಹಿಡಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಲಾಂಗ್ಲಿ ಪೊಲೀಸ್ ಮುಖ್ಯಸ್ಥ ಗಾಲಿಬ್ ಭಯಾನಿ ತಿಳಿಸಿದ್ದಾರೆ.
ಲ್ಯಾಂಗ್ಲಿ ನಗರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಕುರಿತು ಮಾತನಾಡಿದ ರಾಯಲ್ ಕೆನಡಿಯನ್ ಮೌಟೇನ್ ಪೊಲೀಸ್ ವಕ್ತಾರ ಸಾರ್ಜೆಂಟ್ ರೆಬೆಕಾ ಪಾಸ್ರ್ಲೋ, ಈ ವ್ಯಕ್ತಿಗಳು ಯಾರು ಮತ್ತು ಏಕೆ ಗುಂಡಿನ ದಾಳಿ ನಡೆಸಿದ್ದಾರೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಈ ಜನರು ನಿರಾಶ್ರಿತರಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಡೇವಿಡ್ ಲೀ ತಿಳಿಸಿದ್ದಾರೆಂದು ಹೇಳಿದ್ದಾರೆ.