ಜನ ವಸತಿ ಪ್ರದೇಶಗಳ ಮೇಲೆ ರಷ್ಯಾ ದಾಳಿ, ಉಕ್ರೇನ್‍ನ 20 ಲಕ್ಷಕ್ಕೂ ಹೆಚ್ಚು ಜನರ ಮಹಾವಲಸೆ

Social Share

ಮಾಸ್ಕೋ, ಮಾ.9- ಉಕ್ರೇನ್‍ನ ಮೇಲೆ ರಷ್ಯಾ ದಾಳಿ ಎರಡನೇ ವಾರವೂ ಮುಂದುವರೆದಿದ್ದು, ಮಂಗಳವಾರ ರಾತ್ರಿ ರಷ್ಯಾದ ವಿಮಾನವು ಉಕ್ರೇನ್‍ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ಮತ್ತು ಕೈವ್‍ನ ಪಶ್ಚಿಮದಲ್ಲಿರುವ ಝೈಟೊಮಿರ್‍ನ ಸುತ್ತ ಮುತ್ತಲಿನ ವಸತಿ ಪ್ರದೇಶಗಳ ಮೇಲೆ ಬಾಂಬ್ ದಾಳಿ ತೀವ್ರಗೊಂಡಿದೆ.
ಜನ ವಸತಿ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ದೇಶ ತೊರೆದಿದ್ದಾರೆ. ನಿನ್ನೆ ಒಂದೇ ದಿನ 20 ಲಕ್ಷ ಕ್ಕೂ ಹೆಚ್ಚು ಜನರು ಅಕ್ಕಪಕ್ಕದ ರಾಷ್ಟ್ರಗಳಿಗೆ ವಲಸೆ ಹೋಗಿದ್ದಾರೆ. ಇದು ಎರಡನೇ ಮಹಾ ಯುದ್ಧದ ನಂತರ ಯೂರೋಪಿನಲ್ಲಿ ದೊಡ್ಡ ನಿರಾಶ್ರಿತರ ಬಿಕ್ಕಟ್ಟು ಬೆಳೆಯುತ್ತಿದೆ.
ಉಕ್ರೇನಿಯನ್ ನಗರಗಳಲ್ಲಿನ ಆಮಾನವೀಯ ಪರಿಸ್ಥಿತಿ ಉಂಟಾಗಿದ್ದು, ಬೀದಿಗಳಲ್ಲಿ ಬಿದ್ದಿರುವ ಶವಗಳನ್ನು ಸಹ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ, ನಾಗರಿಕರ ಸಾಮೂಹಿಕ ಸ್ಥಳಾಂತರ ಮುಂದುವರೆದಿದ್ದೆ. ಉಕ್ರೇನಿಯನ್ ಮಿಲಿಟರಿ ಅಧಿಕಾರಿಯೊಬ್ಬರು ದೇಶಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ
ವಾಯು ರಕ್ಷಣಾ ವ್ಯವಸ್ಥೆಗಳ ಅಗತ್ಯವಿದೆ ಎಂದು ಹೇಳಿದರು.
ಇತ್ತ ಪ್ಲಾನೆಟ್ ಲ್ಯಾಬ್ಸ್ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರಗಳಲ್ಲಿ ಬೆಲಾರಸ್‍ನ ಮಚುಲಿಶ್ಚಿ ಏರ್ ಬೇಸ್‍ನಲ್ಲಿ ರಷ್ಯಾದ ಹೆಲಿಕಾಪ್ಟರ್‍ಗಳ ಸಂಗ್ರಹವನ್ನು ತೋರಿಸಿದ್ದು, ಕೈವ್‍ನ ಉತ್ತರಕ್ಕೆ ರಷ್ಯಾದ ಸೇನೆಯು ಪ್ರವಾಹದ ರೀತಿ ಮುನ್ನಗುತ್ತಿದೆ.
ನಿನ್ನೆಯ ಕದನ ವಿರಾಮಕ್ಕೆ ಒಪ್ಪಿಕೊಂಡು ಸುಮಿಯಿಂದ 5,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಉಕ್ರೇನಿಯನ್ ಉಪಪ್ರಧಾನಿ ಐರಿನಾ ವೆರೆಶ್ಚುಕ್ವೆ ಹೇಳಿದ್ದಾರೆ. ಆದರೆ ರಷ್ಯಾದ ಸೇನೆ ಬೇರೆ ಲೆಕ್ಕವನ್ನೇ ನೀಡಿದ್ದು, 723 ಜನರನ್ನು ನಗರದಿಂದ ಸ್ಥಳಾಂತರಿಸಲಾಗಿದೆ ಮತ್ತು ಅವರಲ್ಲಿ ಹೆಚ್ಚಾಗಿ ಭಾರತದ ಪ್ರಜೆಗಳು ಎಂದು ಗುರುತಿಸಲಾಗಿದೆ, ಉಳಿದಂತೆ ಚೀನಾ, ಜೋರ್ಡಾನ್ ಮತ್ತು ಟುನೀಶಿಯಾದ ಪ್ರಜೆಗಳು ಎಂದು ಹೇಳಿದ್ದು, ಉಕ್ರೇನಿಯನ್ನರ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ.
ರಷ್ಯಾ ಆಕ್ರಮಣ ಪ್ರಾರಂಭಿಸಿ ಸುಮಾರು ಎರಡು ವಾರಗಳಲ್ಲಿ, ಅವರ ಪಡೆಗಳು ಉಕ್ರೇನ್ ದಕ್ಷಿಣ ಮತ್ತು ಕರಾವಳಿ ಅನ್ನು ವಶಪಡಿಸಿಕೊಂಡಿವೆ.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ದೇಶವು ತನ್ನ ನಗರಗಳು ಮತ್ತು ನದಿ ತೀರಗಳಲ್ಲಿ ರಷ್ಯಾದ ಆಕ್ರಮಣದ ವಿರುದ್ಧ ಹೋರಾಡುತ್ತದೆ ಎಂದು ಪ್ರತಿಜ್ಞೆ ಮಾಡಿದ್ದು, ನಾವು ದೇಶದ ನೆಲವನ್ನು ಬಿಟ್ಟುಕೊಡುವುದಿಲ್ಲ, ನಾವು ಕಳೆದುಕೊಳ್ಳುವುದಿಲ್ಲ ಎಂದು ಅವರು ಬ್ರಿಟನ್‍ನ ಹೌಸ್ ಆಫ್ ಕಾಮನ್ಸ್‍ಗೆ ವೀಡಿಯೊ ಮೂಲಕ ಹೇಳಿದ್ದಾರೆ.

Articles You Might Like

Share This Article