ಫತೇಪುರ್,ಮಾ.14-ಜಾತ್ರೆಯಿಂದ ಹಿಂತಿರುಗುತ್ತಿದ್ದ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಹುಸೇನಗುಂಜ್‍ನಲ್ಲಿ ಸಂಭವಿಸಿದೆ.
ಜಾತ್ರೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಇಬ್ಬರು ಬಾಲಕಿಯರ ಮೇಲೆ ಆರು ಮಂದಿ ಕಾಮುಕರು ದಾಳಿ ನಡೆಸಿ ಮೃಗೀಯ ರೀತಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸ್ ಅೀಧಿಕ್ಷಕ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಆರು ಕಾಮುಕರನ್ನು ಬಂಧಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಕಳೆದ ಮಾರ್ಚ್ 5 ರಂದು ಅಲಿಗಢ ಜಿಲ್ಲೆಯಲ್ಲಿ 15 ವರ್ಷದ ಬಾಲಕಿಯ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳಾ ಸಿಬ್ಬಂದಿಯೊಂದಿಗೆ ಸಿಕ್ಕಿ ಬಿದ್ದ ಐಪಿಎಸ್ ಅಧಿಕಾರಿ
ಘಟನೆಯ ವಿವರಗಳನ್ನು ಹಂಚಿಕೊಂಡ ಅಲಿಗಢ ಎಸ್‍ಪಿ (ನಗರ), ಕುಲದೀಪ್ ಸಿಂಗ್ ಗುಣವತ, 15 ವರ್ಷದ ಬಾಲಕಿ ತನ್ನ ಗ್ರಾಮದ ಐದು ಜನರ ವಿರುದ್ಧ ಮಾರ್ಚ್ 4 ರಂದು ದೂರು ನೀಡಿದ್ದಾಳೆ, ಮಾರ್ಚ್ 3 ರಂದು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಳು.
2 minor, girls, gang, raped, Fatehpur,