ಶಾಜಾಪುರ, ಫೆ.2 – ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಆಲಾ ಉಮ್ರೋಡ್ ಗ್ರಾಮದಲ್ಲಿ ಇಬ್ಬರು ಸಹೋದರಿಯರು ತಮ್ಮ ಮನೆಯ ಬಳಿ ಆಟವಾಡುತ್ತಿದ್ದಾಗ ಆಕಸ್ಮಕವಾಗಿ ಚರಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ .
ಮೃತರನ್ನು ಪೂನಂ (7) ಮತ್ತು ಆಕೆಯ ಸಹೋದರಿ ಆಯುಷಿ (5) ಎಂದು ಕೊತ್ವಾಲಿ ಪೊಲೀಸ್ ಠಾಣೆ ಅಕಾರಿಗಳು ತಿಳಿಸಿದ್ದಾರೆ.
ಆಟವಾಡುತ್ತಿದ್ದಾಗ ಆಯುಷಿ ಚರಂಡಿಗೆ ಬಿದ್ದಿದ್ದು ನಂತರ ಹ್ನಿ ಸಹೋದರಿಯನ್ನು ಉಳಿಸಲು ಪೂನಂ ಚರಂಡಿಗೆ ಹಾರಿದ್ದಾಳೆ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.
ಇದನ್ನು ನೋಡಿದ ಇತರ ಮಕ್ಕಳು ಸಹಾಯ ಮಾಡುವಂತೆ ಕಿರುಚಿಕೊಂಡಿದ್ದಾರೆ ಸ್ಥಳದಲ್ಲೇ ಬಳಿಯೇ ಇದ್ದಂತ ಕೆಲವರು ಏನಾಯಿತು ಎಂದು ಬಂದು ನೋಡುವಷ್ಟರಲ್ಲಿ ಇಬ್ಬರೂ ಬಾಲಕೀಯರು ಕೊನೆಯುಸಿರೆಳೆದಿದ್ದಾರೆ.
ಗ್ರಾಮಸ್ಥರೇ ಚರಂಡಿಯಿಂದ ಶವವನ್ನು ಹೊರತೆಗೆದು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು ಎಂದು ಅಧಿಕಾರಿಗಳು ತಿಳಿಸಿದರು.ಈ ದುರಂತಕ್ಕೆ ಇಡೀ ಗ್ರಮವೇ ಶೊಕದಲ್ಲಿ ಮುಳುಗಿದೆ.ಸಂಸದರ ಮನೆಯೂ ಇದೇ ಗ್ರಾಮದಲ್ಲಿದೆ.
