ತನಿಖೆ ನಿರ್ಲಕ್ಷ್ಯ : ಇಬ್ಬರು NCB ಅಧಿಕಾರಿಗಳ ಅಮಾನತು

ಮುಂಬೈ .ಏ.14- ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕಂಟ್ರೋಲ್ (ಎನ್‍ಸಿಬಿ) ಇಂದು ತನಿಖೆ ನಿರ್ಲಕ್ಷ್ಯಕ್ಕಾಗಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಬಾಲಿವುಡ್ ನಟ ಶಾರುಕ್ ಖಾನ್ ಪುತ್ರನ ಡ್ರಗ್ಸ್ ಪ್ರಕರಣದ ತನಿಖಾ ತಂಡದಲ್ಲಿದ್ದ ಅಧೀಕ್ಷಕ ವಿವಿ ಸಿಂಗ್ ಮತ್ತು ಗುಪ್ತಚರ ಅಧಿಕಾರಿ ಆಶಿಶ್ ರಂಜನ್ ಪ್ರಸಾದ್ ಅವರು ನಡೆಸಿದ ತನಿಖೆಯಲ್ಲಿ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಅಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್- 3, ರಂದು ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನ ಮೇಲೆ ಎಸಿಬಿ ದಾಳಿಯ ಸಂದರ್ಭದಲ್ಲಿ ಆರ್ಯನ್ ಖಾನ್ ಸೇರಿ ಇತರ 19 ಮಂದಿಯನ್ನು ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ (ಎನ್ಡಿಪಿಎಸï) ಕಾಯ್ದೆಯಡಿಯಲ್ಲಿ ನಿಷೇತ ವಸ್ತುಗಳ ಸ್ವಾೀನ, ಸೇವನೆ, ಮಾರಾಟ/ಖರೀದಿ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಸ್ತುತ ಆರ್ಯನ್ ಮತ್ತು ಇತರ 17 ಮಂದಿಗೆ ಜಾಮೀನು ಸಿಕ್ಕಿದೆ ಮತ್ತು ಇಬ್ಬರು ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಆದರೆ ಇಬ್ಬರು ಅಧಿಕಾರಿಗಳ ಅಮಾನತು ಕ್ರೂಸರ್ ಡ್ರಗ್ಸ್ ಕೇಸಿಗೆ ಸಂಬಂಸಿಲ್ಲ , ಇದು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಸಾಕ್ಷಿ ಪ್ರಭಾಕರ್ ಸೈಲ್ ಅವರ ವಿರುದ್ಧ ಕಾರ್ಯವಿಧಾನದ ಲೋಪ ಮತ್ತು ಸುಲಿಗೆ ಆರೋಪದ್ದು ಎಂದಿದ್ದಾರೆ.

ಮುಂಬೈನ ಎನ್‍ಸಿಬಿ ವಲಯ ಕಚೇರಿಯಲ್ಲಿ ಅವರು ನಡೆಸಿದ ತನಿಖೆಯಲ್ಲಿ ಕರ್ತವ್ಯ ಲೋಪ ಕ್ಕಾಗಿ ಸಿಂಗ್ ಮತ್ತು ಪ್ರಸಾದ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನ ವಲಯ ನಿರ್ದೇಶಕರು ಅಥವಾ ಎನ್ಸಿಬಿ ಘಟಕದ ಮುಖ್ಯಸ್ಥರು ಮತ್ತು ಪ್ರಾದೇಶಿಕ ನಿರ್ದೇಶಕ (ಉಪ ನಿರ್ದೇಶಕ ಜನರಲ್ ನೈಋತ್ಯ) ಅಶೋಕ್ ಮುತಾ ಜೈನ್ ಅವರು ಮಾಡಿದ ವರದಿ ಮತ್ತು ಶಿಫಾರಸಿನ ಆಧಾರದ ಮೇಲೆ ಅವರ ಅಮಾನತು ಆದೇಶಗಳನ್ನು ಎನ್‍ಸಿಬಿ ಮಹಾನಿರ್ದೇಶಕ ಎಸïಎನ್ ಪ್ರಧಾನ್ ಅನುಮೋದಿಸಿದ್ದಾರೆ.

Sri Raghav

Admin