ಕೋವಿಡ್ ಚಿಕಿತ್ಸೆಗೆ ಮತ್ತೆರಡು ಔಷಧಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಅಂಗೀಕಾರ

Social Share

ಪ್ಯಾರಿಸ್, ಜ.14- ವಿಶ್ವಾದ್ಯಂತ ರೂಪಾಂತರಿ ಓಮಿಕ್ರಾನ್ ಮತ್ತು ಕೋವಿಡ್ ಸೋಂಕು ತೀವ್ರಗೊಳ್ಳುತ್ತಿರುವ ನಡುವೆಗೆ ಸಮಾಧಾನಕರ ವಿಷಯವೊಂದು ಹೊರ ಬಿದ್ದಿದೆ. ವಿಶ್ವ ಆರೋಗ್ಯ ಸಂಸ್ಥೆ ಹೊಸದಾಗಿ ಎರಡು ಚಿಕಿತ್ಸಾ ಔಷಧಿಗಳಿಗೆ ಅನುಮೋದನೆ ನೀಡಿದೆ.
ಈ ಮೂಲಕ ಕೋವಿಡ್ ವಿರುದ್ಧದ ಹೋರಾಟಕ್ಕೆ ಲಸಿಕೆಯ ಜೊತೆಗೆ ಎರಡು ಹೊಸ ಶಸ್ತ್ರಾಸ್ತ್ರಗಳು ಲಭ್ಯವಾದಂತಾಗಿದೆ. ಮುಂದಿನ ಮಾರ್ಚ್ ವೇಳೆಗೆ ಯೂರೋಪ್‍ನ ಅರ್ಧ ಭಾಗವನ್ನು ರೂಪಾಂತರಿ ಓಮಿಕ್ರಾನ್ ಆವರಿಸಿಕೊಳ್ಳಲಿದೆ ಎಂಬ ಅಂದಾಜಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಹೊಸ ಔಷಧಿಗಳನ್ನು ಶಸ್ತ್ರಾಗಾರಕ್ಕೆ ಸೇರಿಸಲಾಗಿದೆ.
ಬ್ರಿಟಿಷ್ ಮೆಡಿಕಲ್ ಜನರಲ್ (ಬಿಎಂಜೆ) ತಜ್ಞರು ಸಂವಾತಕ್ಕೆ ನಿಯಂತ್ರಣಕ್ಕೆ ಬಳಕೆ ಮಾಡುವ ಬಾರಿಸಿಟಿನಿಬ್ ಜೊತೆ ಕಾರ್ಟಿಕೊಸ್ಟೆರಾಯ್ಡ್ ಔಷಧಿಗಳನ್ನು ಗಂಭೀರ ಸ್ವರೂಪದ ಮತ್ತು ಕಠಿಣ ಪರಿಸ್ಥಿತಿಯಲ್ಲಿರುವ ಕೋವಿಡ್ ರೋಗಿಗಳಿಗೆ ನೀಡಬಹುದು. ಇದರಿಂದ ಚೇತರಿಕೆ ಪ್ರಮಾಣವೂ ಹೆಚ್ಚಾಗಲಿದೆ ಮತ್ತು ವೆಂಟಿಲೇಟರ್ ಬಳಕೆಯೂ ತಗ್ಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಗಂಭೀರವಲ್ಲದ ಕೋವಿಡ್‍ನಿಂದ ಬಳಲುವರು, ಹಿರಿಯ ನಾಗರಿಕರು, ಮಧುಮೇಹ ಸೇರಿದಂತೆ ಇನ್ನಿತರ ಜೀವನ ಶೈಲಿ ರೋಗಗಳಿಂದ ಬಳಲುತ್ತಿರುವವರಲ್ಲಿ ಈ ಔಷಧಿಗಳು ಪ್ರತಿಕಾಯ ಶಕ್ತಿಯನ್ನು ಹೆಚ್ಚಿಸಲಿವೆ. ಸೋಟ್ರೋವಿಮಾಬ್ ಫಲಾನುಭವಿಗಳು ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇಲ್ಲ ಮತ್ತು ಹೆಚ್ಚಿನ ಅಪಾಯವನ್ನು ತಡೆಗಟ್ಟಲಿದೆ. ಹೊಸ ರೂಪಾಂತರಿ ಓಮಿಕ್ರಾನ್ ವಿರುದ್ಧವೂ ಸೋಟ್ರೋವಿಮಾಬ್ ಔಷಧಿ ಪರಿಣಾಮಕಾರಿ ಎಂದು ಹೇಳಲಾಗಿದೆ.
2020ರ ಸೆಪ್ಟಂಬರ್ ವೇಳೆಗೆ ಮೂರು ಚಿಕಿತ್ಸೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿತ್ತು. ಈಗ ಹೊಸದಾಗಿ ಎರಡು ಔಷಧಿಗಳಿಗೆ ಅನುಮೋದನೆ ನೀಡಿದೆ. ಚಾರಿಸಿಟಿನಿಬ್ ಮತ್ತು ಸೋಟ್ರೋವಿಮಾಬ್ ಔಷಗಳ ಪೈಕಿ ಎರಡು ಲಭ್ಯವಿದ್ದಾಗ, ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ವೈದ್ಯರ ಅನುಭವ ಮತ್ತು ಆರ್ಥಿಕ ವೆಚ್ಚ ಆಧರಿಸಿ ನಿರ್ಧಾರ ತೆಗೆದುಕೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ.

Articles You Might Like

Share This Article