ಏರ್ ಶೋ ವೇಳೆ ವಿಮಾನಗಳ ಡಿಕ್ಕಿ, 7 ಮಂದಿ ಸಾವು

Social Share

ಡಲ್ಲಾಸ್(ಅಮೆರಿಕ) , ನ.13 – ಟೆಕ್ಸಾಸ್‍ನ ಡಲ್ಲಾಸ್ ನಲ್ಲಿ ಏರ್ ಶೋನಲ್ಲಿ ಎರಡು ವಿಮಾನಗಳು ಡಿಕ್ಕಿ ಹೊಡೆದು ಪತನಗೊಂಡು 7 ಮಂದಿ ಸಾವನ್ನಪ್ಪಿದ್ದಾರೆ.

ಎರಡನೇ ವಿಶ್ವಯುದ್ಧದ ಸ್ಮರಣಾರ್ಥ ನಡೆದ ವೈಮಾನಿಕ ಪ್ರದರ್ಶನದಲ್ಲಿ 2ನೇ ವಿಶ್ವಯುದ್ಧ ಕಾಲದ ಎರಡು ವಿಮಾನಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಏಳು ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.

ಬೋಯಿಂಗ್ ಬಿ-17 ಫ್ಲೈಯಿಂಗ್ ಫೋಟ್ರ್ರೆಸ್ ಬಾಂಬರ್ ವಿಮಾನ ಮತ್ತು ಬೆಲ್ ಪಿ-63 ಕಿಂಗ್‍ಕೋಬ್ರಾ ವಿಮಾನ ಡಲ್ಲಾಸ್ ಎಕ್ಸಿಕ್ಯೂಟಿವ್ ಏರ್‍ಪೋರ್ಟ್‍ನಲ್ಲಿ ನಡೆದ ಏರ್‍ಶೋನಲ್ಲಿ ಭಾಗಿಯಾಗಿದ್ದವು. ಆದ್ರೆ ಮಧ್ಯಾಹ್ನ ಪ್ರದರ್ಶನದ ವೇಳೆ ಎರಡೂ ಯುದ್ಧವಿಮಾನಗಳ ರೆಕ್ಕೆ ಪರಸ್ಪರ ತಗುಲಿ ಅವಘಡ ಸಂಭವಿಸಿದೆ ಎಂದು ಫೆಡರಲ್ ಏವಿಯೇಷನ್ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕ್ ಗಡಿಯಲ್ಲಿ ಡ್ರೋನ್ ಹಾರಾಟ ದ್ವಿಗುಣ

ಅಪಘಾತ ನಂತರ ಘಟಕ ಸ್ಥಳಕ್ಕೆ ಆಗಮಿಸಿದ ತುರ್ತು ಪರಿಹಾರ ಪಡೆ ಕಾರ್ಯಾಚರಣೆ ನಡೆಸಿ ಮೃತ ದೇಹ ಪತ್ತೆ ಹಚ್ಚಿದ್ದಾರೆ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಇನ್ನಷ್ಟು ಸಿಬ್ಬಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಎರಡೂ ವಿಮಾನಗಳ ನಡುವೆ ಪರಸ್ಪರ ಘರ್ಷಣೆಯಾದಾಗ ನೆರೆದಿದ್ದ ಪ್ರೇಕ್ಷಕರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ನೋಡು ನೋಡುತ್ತಿದ್ದಂತೆಯೇ ವಿಮಾನಗಳು ನೆಲಕುರುಳಿ ದಟ್ಟ ಹೊಗೆ ಆವರಿಸಿತು , ಕೆಲ ಮಂದಿ ವಿಮಾನ ನಿಲ್ದಾಣದಿಂದ ಹೊರಗೆ ದೌಡಾಯಿಸಿದರು.

ಸಮಾಜ ಸೇವಕ ಮರೂರು ಹನುಮಂತಯ್ಯನವರ ಯಶೋಗಾಥೆ

ಇನ್ನು ಯುದ್ಧವಿಮಾನ ಅವಘಡಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ . ಎರಡು ವಿಮಾನಗಳು ಬೆಂಕಿ ಜ್ವಾಲೆಯಿಂದ ಛಿದ್ರವಾಗಿದೆ

Articles You Might Like

Share This Article