ಪಾಟ್ನಾ,ಜ.19-ಬ್ಯಾಂಕ್ ದರೋಡೆ ಮಾಡಲು ಬಂದ ಶಸ್ತ್ರ ಸಜ್ಜಿತ ದರೋಡೆಕೋರರೊಂದಿಗೆ ಹೋರಾಡಿ ಅವರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿರುವ ಬಿಹಾರದ ಇಬ್ಬರು ಮಹಿಳಾ ಕಾನ್ಸ್ಟೆಬಲ್ ಧೈರ್ಯಕ್ಕೆ ದೇಶದೆಲ್ಲೆಡೆ ಶಹಬ್ಬಾಸ್ಗಿರಿ ವ್ಯಕ್ತವಾಗಿದೆ.
ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್ನ ಭದ್ರತಾ ಸಿಬ್ಬಂದಿಗಳಾದ ಜೂಹಿ ಕುಮಾರಿ ಹಾಗೂ ಶಾಂತಿಕುಮಾರಿ ಅವರುಗಳೇ ದರೋಡೆಕೋರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದ ಧೈರ್ಯಶಾಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳು.
ನಿನ್ನೆ ಬ್ಯಾಂಕ್ಗೆ ಮೂವರು ಶಸ್ತ್ರಸಜ್ಜಿತ ದರೋಡೆಕೋರರು ಬಲವಂತವಾಗಿ ನುಗ್ಗಲು ಪ್ರಯತ್ನಿಸಿದಾಗ ಅವರನ್ನು ತಡೆದ ಜೂಹಿ ಹಾಗೂ ಶಾಂತಿ ಬ್ಯಾಂಕ್ ಪಾಸ್ಬುಕ್ ತೋರಿಸುವಂತೆ ಪಟ್ಟು ಹಿಡಿದರು. ಆಗ ದರೋಡೆಕೋರರು ಪಾಸ್ಬುಕ್ ಬದಲು ಪಿಸ್ತೂಲ್ ತೆಗೆದು ಅವರನ್ನು ಬೆದರಿಸಲು ನೋಡಿದರು. ಅ ಸಂದರ್ಭದಲ್ಲಿ ಜೀವಕ್ಕೆ ಹೆದರದೆ ದರೋಡೆಕೋರರೊಂದಿಗೆ ಹೋರಾಡಿ ಅವರನ್ನು ಹಿಮ್ಮೆಟ್ಟಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ನ್ಯೂಜಿಲೆಂಡ್ ಪ್ರಧಾನಿ ಸ್ಥಾನಕ್ಕೆ ಜಸಿಂದಾ ಆರ್ಡೆರ್ನ್ ರಾಜಿನಾಮೆ
ಮೊದಲು ನಮ್ಮ ಬಳಿ ಇದ್ದ ರೈಫಲ್ಗಳನ್ನು ಕಸಿದುಕೊಳ್ಳಲು ದರೋಡೆಕೋರರು ಮುಂದಾದರೂ ಆಗ ನಾವು ನಮ್ಮ ಪ್ರಾಣ ಹೋದರು ಬ್ಯಾಂಕ್ ದೋಚಲು ಬಿಡಬಾರದು, ನಮ್ಮ ರೈಫಲ್ಗಳನ್ನು ನೀಡಬಾರದು ಎಂದು ತೀರ್ಮಾನಿಸಿ ಅವರೊಂದಿಗೆ ಹೋರಾಟ ನಡೆಸಿದೇವೆ ಒಂದು ಹಂತದಲ್ಲಿ ದರೋಡೆಕೋರರು ಜೂಹಿ ಅವರ ಮೇಲೆ ಗುಂಡು ಹಾರಿಸಲು ಯತ್ನಿಸಿದರೂ ನಾವು ಧೃತಿಗೆಡಲಿಲ್ಲ ಎಂದು ಶಾಂತಿ ಹೇಳಿಕೊಂಡಿದ್ದಾರೆ.
ಮಹಿಳಾ ಭದ್ರತಾ ಸಿಬ್ಬಂದಿಗಳ ಹೋರಾಟದಿಂದ ಬೆದರಿದ ದರೋಡೆಕೋರರು ಬಂದ ದಾರಿಗೆ ಸುಂಕವಿಲ್ಲದಂತೆ ಪರಾರಿಯಾಗಿದ್ದಾರೆ. ಪರಾರಿಯಾಗಿರುವ ದರೋಡೆಕೋರರ ಬಂಧನಕ್ಕೆ ಪೊಲೀಸರು ವ್ಯಾಪಕ ಶೋಧ ಮುಂದುವರೆಸಿದ್ದಾರೆ.
ವ್ಯಾನ್ಗೆ ಡಿಕ್ಕಿ ಹೊಡೆದ ಟ್ರಕ್, ಒಂಬತ್ತು ಮಂದಿ ಸಾವು
ನಮ್ಮ ಮಹಿಳಾ ಕಾನ್ಸ್ಟೆಬಲ್ಗಳು ಅಸಾಧಾರಣ ಧೈರ್ಯ ಪ್ರದರ್ಶಿಸಿ ದರೋಡೆಕೋರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಯಾವುದೇ ಗುಂಡಿನ ದಾಳಿ ನಡೆದಿಲ್ಲ. ತಮ್ಮ ಧೈರ್ಯದ ಮೂಲಕ ಬ್ಯಾಂಕ್ ರಾಬರಿ ತಪ್ಪಿಸಿರುವ ಮಹಿಳಾ ಕಾನ್ಸ್ಟೆಬಲ್ಗಳಿಗೆ ಬಹುಮಾನ ನೀಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ತಿಳಿಸಿದ್ದಾರೆ.
2 Women, Police, Stopped, Bank , Robbery, Bihar,