20 ವರ್ಷಗಳ ನಂತರ ನೇಪಾಳದಲ್ಲಿ ಸ್ಥಳೀಯಸಂಸ್ಥೆಗಳ ಚುನಾವಣೆ, ಶಾಂತಿಯುತ ಮತದಾನ

Nepalk--01

ಕಠ್ಮಂಡು,ಮೇ 14- ಹಲವು ರಾಜಕೀಯ ವಿದ್ಯಮಾನಗಳಿಂದ ಭಾರೀ ಸುದ್ದಿಯಾಗಿದ್ದ ನೆರೆಯ ರಾಷ್ಟ್ರ ನೇಪಾಳದಲ್ಲಿ 20 ವರ್ಷಗಳ ನಂತರ ಸ್ಥಳೀಯ ಚುನಾವಣೆ ನಡೆಯುತ್ತಿದ್ದು , 283 ಸ್ಥಾನಗಳ ಪೈಕಿ 281 ಸ್ಥಳೀಯ ಘಟಕಗಳಲ್ಲಿ ಶಾಂತಿಯುತ ಮತದಾನ ನಡೆದಿದೆ. ಮೇಯರ್, ಉಪಮೇಯರ್, ವಾರ್ಡ್ ಮುಖ್ಯಸ್ಥ ಹಾಗೂ ಕಾರ್ಪೊರೇಟರ್ ಸೇರಿದಂತೆ ವಿವಿಧ ಮುನ್ಸಿಪಾಲಿಟಿ ಕ್ಷೇತ್ರಗಳಲ್ಲಿ ಒಟ್ಟು 50 ಸಾವಿರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 4.9 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದೇ ಹಂತದ ಮತದಾನ 1, 2, 5 ಮತ್ತು 7 ಪ್ರಾಂತ್ಯಗಳಲ್ಲಿ ಜೂನ್ 14ರಂದು ನಡೆಯಲಿದೆ ಎಂದು ಆಯೋಗ ತಿಳಿಸಿದೆ.1997ರಲ್ಲಿ ಸ್ಥಳೀಯ ಚುನಾವಣೆ ನಡೆದಿತ್ತು. ಬಳಿಕ ನೇಪಾಳದಲ್ಲಿ ಸರ್ಕಾರ ಹಾಗೂ ಎಡಪಂಥೀಯರ ನಡುವೆ ಭಾರೀ ಘರ್ಷಣೆಯಾಗಿತ್ತು. ಹೀಗಾಗಿ ಚುನಾವಣೆ ಮುಂದೂಡಲಾಗಿತ್ತು. 2006ರಲ್ಲಿ ಸರ್ಕಾರ ಹಾಗೂ ಎಡಪಂಥೀಯರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿದ ನಂತರ ಇದೀಗ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin