ಜಮೀನಿನಲ್ಲಿ ಮೇಯ್ದಿದ್ದಕ್ಕೆ 20 ಕುರಿಗಳನ್ನು ವಿಷವಿಟ್ಟು ಕೊಂದ ಕಟುಕ..!

Kuri--1

ರಾಯಚೂರು, ಜೂ.4-ಖಾಲಿ ಜಮೀನಿನಲ್ಲಿ ಕುರಿಗಳು ಮೇಯುತ್ತವೆ ಎಂಬ ಕ್ಷುಲ್ಲಕ ಕಾರಣಕ್ಕೆ ವಿಷ ಪ್ರಾಶನ ಹಾಕಿ ಸಾಯಿಸಿರುವ ಘಟನೆ ಲಿಂಗಸೂರು ತಾಲ್ಲೂಕಿನ ರೋಡಲಬಂಡ ಗ್ರಾಮದಲ್ಲಿ ನಡೆದಿದೆ.  ತವಗ ಗ್ರಾಮದ ಮಲ್ಲಣ್ಣ ಎಂಬುವರ ಜಮೀನಿಗೆ ಕುರಿಗಳು ಮೇಯಲು ಹೋಗುತ್ತಿದ್ದವು. ಇದರಿಂದ ಸಿಟ್ಟುಗೆದ್ದ ಮಲ್ಲಣ್ಣ ಅಕ್ಕಿ ಸಜ್ಜೆಯಲ್ಲಿ ವಿಷ ಬೆರೆಸಿ ಹೊಲದಲ್ಲಿಟ್ಟಿದ್ದ. ಅದನ್ನು ಸೇವಿಸಿದ ಚಂದ್ರಪ್ಪ ಎಂಬುವರಿಗೆ ಸೇರಿದ 20 ಕುರಿಗಳು ಸಾವನ್ನಪ್ಪಿವೆ.

Sri Raghav

Admin