200 ಆನೆಗಳ ತೂಕದ ದೈತ್ಯ ಉಪಗ್ರಹ ಉಡಾವಣೆಗೆ ಕ್ಷಣಗಣನೆ

Spread the love

GSLV-Mark-III

ಚೆನ್ನೈ, ಜೂ.4– ಪೂರ್ಣಕಾಯದ 200 ಆನೆಗಳ ತೂಕದ ಅಂದರೆ 640 ಟನ್‍ಗಳ ಭಾರದ ದೈತ್ಯ ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಸೂಪರ್‍ಪವರ್ ಶಕ್ತಿ ಹೊಂದಿರುವ ಜಿಎಸ್‍ಎಲ್‍ವಿ ಮಾರ್ಕ್-3 ಉಡ್ಡಯನ ವಾಹಕದಿಂದ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನಾಳೆ ಸಂಜೆ 5.30ಕ್ಕೆ ಉಡ್ಡಯನ ಮಾಡಲಾಗುವುದು. ಇದರೊಂದಿಗೆ ಮತ್ತೊಂದು ವ್ಯೋಮ ಸಾಹಸಕ್ಕೆ ಭಾರತ ಸಜ್ಜಾಗಿದೆ.  ಇಸ್ರೋ ಇದುವರೆಗೆ ಅಭಿವೃದ್ದಿಗೊಳಿಸಿದ ರಾಕೆಟ್‍ಗಳಲ್ಲೇ ಇದು ಅತ್ಯಂತ ಬೃಹದಾಕಾರವಾಗಿದೆ. ಸ್ವದೇಶಿ ನಿರ್ಮಿತ ರಾಕೆಟ್ 4 ಟನ್ ತೂಕದ ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಗೆ ಸೇರಿಸುವ ಸಾಮಥ್ರ್ಯ ಹೊಂದಿದೆ.ಈ ರಾಕೆಟ್ ಉಡಾವಣೆ ಯಶಸ್ವಿಯಾದರೆ, ಇಂಥ ತಂತ್ರಜ್ಞಾನ ಹೊಂದಿದ ಅಮೆರಿಕ, ರಷ್ಯಾ ಮತ್ತು ಐರೋಪ್ಯ ದೇಶಗಳ ಸಾಲಿಗೆ ಭಾರತ ಸೇರ್ಪಡೆಯಾಗಲಿದೆ.
ಭವಿಷ್ಯದಲ್ಲಿ ಭಾರತ ಕೈಗೊಳ್ಳಲು ಉದ್ದೇಶಿಸಿರುವ ಮಾನವಸಹಿತ ಅಂತರಿಕ್ಷ ಯಾತ್ರೆಗೂ ಇದು ಸಹಕಾರಿಯಾಗಲಿದೆ.   ಸಂಪರ್ಕ ಕ್ರಾಂತಿ: ಹಲವಾರು ವಿಶ್ವವಿಕ್ರಮಗಳಿಗೆ ಮುನ್ನುಡಿ ಬರೆದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋದ ಮುಂದಿನ ಯೋಜನೆಯಾದ ಜಿಸ್ಯಾಟ್-19 ಮತ್ತು ಜಿಸ್ಯಾಟ್-11 ಉಪಗ್ರಹ ಉಡಾವಣೆಯು ಸಂಪರ್ಕ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದ್ದು, ಭಾರತವನ್ನು ಡಿಜಿಟಲ್ ಸಬಲೀಕರಣಗೊಳಿಸಲು ನೆರವಾಗಲಿದೆ. ಅಲ್ಲದೇ ಹಿಂದೆಂದೂ ಕಾಣದ ಅತ್ಯಂತ ವೇಗದ ಇಂಟರ್‍ನೆಟ್ ಸೇವೆಗಳನ್ನು ಸಹ ಒದಗಿಸಲಿದೆ.ಬೃಹತ್ ರಾಕೆಟ್‍ನ ಮೆಗಾ ಪ್ರಯೋಗವು ಇಸ್ರೋದ ಮುಂದಿನ ಯೋಜನೆಗಳಿಗೂ ಪೂರಕವಾಗಲಿದೆ ಹಾಗೂ ಭಾರತದ ಸಂಪರ್ಕ ಉಪಗ್ರಹದಲ್ಲಿ ಮಹತ್ವದ ಪರಿವರ್ತನೆಗೆ ಕಾರಣವಾಗಲಿದೆ ಎಂದು ಅಹಮದಾಬಾದ್‍ನ ಬಾಹ್ಯಾಕಾಶ ಅನ್ವಯಿಕಗಳ ಕೇಂದ್ರದ ನಿರ್ದೇಶಕ ತಪನ್ ಮಿಶ್ರಾ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin