ಪಣಜಿ .ಜ.3- ಮುಂಬೈ-ಗೋವಾ ನಡುವೆ ಸಂಚರಿಸುವ ಕಾರ್ಡೆಲಿಯಾ ಕ್ರೂಸ್‍ರ್ ಹಡಗಿನ ಸಿಬ್ಬಂದಿಯೊಬ್ಬರಿಗೆ ಕರೋನ ವೈರಸ್ ಇರುವುದು ಖಚಿತಗೊಂಡ ನಂತರ ಸುಮಾರು 2,000 ಪ್ರಯಾಣಿಕರು ಬಂದರಿನಲ್ಲೇ ಉಳಿಯುವಂತಾಗಿದೆ.
ರಜಾ ದಿನದ ಸಂಭ್ರಮಕ್ಕಾಗಿ ಪ್ರವಾಸಿಗರು ಕಡಲ ಪಯಣ ಮಾಡುತ್ತಾರೆ ಹೊಸ ವರ್ಷ ಖುಷಿಯಲ್ಲಿ ಸುಮಾರು 2,000 ಪ್ರಯಾಣಿಕರು ಈ ಹಡಗು ಏರಿದ್ದರು ಸಿಬ್ಬಂದಿಗೆ ಕೊರೊನಾ ಕಣಿಸಿಕೊಂಡಿರುವುದರಿಂದ ಆರೋಗ್ಯ ಅಧಿಕಾರಿಗಳು ಎಲ್ಲರನ್ನು ಪರೀಕ್ಷಿಸುತ್ತಿದ್ದಾರೆ. ಫಲಿತಾಂಶಕ್ಕಾಗಿ ಪ್ರಯಾಣಿಕರು ಉತ್ಸುಕತೆಯಿಂದ ಕಾಯುತ್ತಿದ್ದಾರೆ ಮೂಲಗಳು ತಿಳಿಸಿವೆ.
ಅಧಿಕಾರಿಗಳು ಎಲ್ಲಾ ಪ್ರಯಾಣಿಕರನ್ನು ಕ್ರೂಸ್ ಹಡಗಿನಲ್ಲಿಯೇ ಇರುವಂತೆ ಕೇಳಿಕೊಂಡಿದ್ದಾರೆ. ವಾಸ್ಕೋ ಮೂಲದ ವೈದ್ಯಕೀಯ ಸಂಶೋಧನಾ ಆಸ್ಪತ್ರೆಯ ಮೂಲಕ ಎಲ್ಲಾ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ .ಕೆಲವರು ಹಡಗಿನಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ ಸಂಜೆ ವೇಳೆಗೆ ವರದಿ ಬರಲಿದ್ದು ಅದರಂತೆ ಪ್ರಯಾಣಿಕರನ್ನು ಕಳುಹಿಸಿಕೊಡಲಾಗುವುದು ಎಂದು ಅಕಾರಿಗಳು ತಿಳಿಸಿದ್ದಾರೆ
