2019ರಲ್ಲಿ ವಿಶ್ವದ ಅತ್ಯಂತ ಎತ್ತರದ ಕಟ್ಟಡ ನಿರ್ಮಾಣ ಪೂರ್ಣ

Tollest--01

ಜೆಡ್ಡಾ, ಮೇ 12-ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡದವನ್ನು ಪೂರ್ಣಗೊಳಿಸುವ ಗಡುವನ್ನು ಹಿಂದೂಡಲಾಗಿದ್ದು, 2019ರಲ್ಲಿ ಈ ಭವ್ಯ ಮುಗಿಲೆತ್ತರದ ಗೋಪುರ ತಲೆಎತ್ತಲಿದೆ.   ವಿಶ್ವ ದಾಖಲೆಯ ಈ ಕಟ್ಟಡದ ನಿರ್ಮಾಣವನ್ನು ಆರು ವರ್ಷಗಳ ಹಿಂದೆಯೇ ಆರಂಭಿಸಲಾಗಿತ್ತು. ಈ ಗಗನಚುಂಬಿ ಕಟ್ಟಡವು ಒಂದು ಕಿಲೋಮೀಟರ್‍ನಷ್ಟು (3,300 ಅಡಿಗಳು) ಎತ್ತರವಿರಲಿದೆ. ಇದು ಬುರ್ಜ್ ಖಾಲಿಫಾ ಕಟ್ಟಡವನ್ನು (ಪ್ರಸ್ತುತ ವಿಶ್ವದ ಅತ್ಯಂತ ಎತ್ತರದ ಗೋಪುರ) ಕುಬ್ಜಗೊಳಿಸಲಿದೆ.ಕೆಂಪು ಸಮುದ್ರದ ಸನಿಹದಲ್ಲೇ ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಸ್ಥಳಕ್ಕೆ ಭೇಟಿ ನೀಡಿದ ಮಾಲೀಕರೂ ಆದ ಸೌದಿ ರಾಜಕುಮಾರ ಅಲ್ವಾಲೀದ್ ಬಿನ್ ತಲಾಲ್ ಪರಿಶೀಲಿಸಿದರು. ಯೋಜನೆ ವಿಳಂಬವಾಗಿರುವುದನ್ನು ಒಪ್ಪಿಕೊಂಡ ಅವರು 2019ರೊಳಗೆ ಇದನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.

Sri Raghav

Admin