ಭಾರತ-ಅಮೇರಿಕ ನಡುವೆ ಅತ್ಯುತ್ತಮ ಸಂಬಂಧವಿದೆ : ಶ್ವೇತಭವನದ ಉನ್ನತಾಧಿಕಾರಿ

Social Share

ನವದೆಹಲಿ,ನ.21- ಅಮೆರಿಕಾ ಮತ್ತು ಭಾರತ ನಡುವೆ ಅತ್ಯುತ್ತಮ ಸಂಬಂಧವಿದೆ. ಇದು ಮುಂದಿನ ದಿನಗಳಲ್ಲೂ ಮುಂದುವರೆಯಲಿದೆ ಎಂದು ಶ್ವೇತಭವನದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

2022ರಲ್ಲಿ ಭಾರತ ಮತ್ತು ಅಮೆರಿಕಾ ನಡುವಿನ ಬಾಂಧವ್ಯ ಉತ್ತಮ ಮಟ್ಟದಲ್ಲಿತ್ತು. ಇದು 2023ರಲ್ಲೂ ಮುಂದುವರೆಯಲಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಹಲೆಗಾರ ಜಾನ್ ಫೈನರ್ ಅಭಿಪ್ರಾಯಪಟ್ಟಿದ್ದಾರೆ.

ಇಂಡೋನೆಷ್ಯಾದ ಬಾಲಿಯಲ್ಲಿ ಮುಕ್ತಾಯಗೊಂಡ ಜಿ-20 ಶೃಂಗಸಭೆಯಲ್ಲಿ ಎಲ್ಲಾ ರಾಷ್ಟ್ರಗಳ ನಡುವೆ ಒಮ್ಮತ ಮೂಡಿಸುವಲ್ಲಿ ಯಶಸ್ವಿಯಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ತಮ್ಮ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಫೈನರ್ ನೆನಪಿಸಿಕೊಂಡಿದ್ದಾರೆ.

ಸರಣಿ ಅಪಘಾತ: 38 ಮಂದಿಗೆ ಗಾಯ, 40 ವಾಹನಗಳು ಜಖಂ

ಜಗತ್ತಿನಲ್ಲಿ ಅತ್ಯಂತ ಪರಿಣಾಮಕಾರಿ ಸಂಬಂದ ಸಿಗಬಹುದೇ ಎಂದು ಹುಡುಕಾಡುತ್ತಿದ್ದ ಬೈಡೆನ್ ಅವರಿಗೆ ಮೋದಿ ಅವರಲ್ಲಿ ಅಂತಹ ಸಂಬಂಧ ಕಾಣಿಸಿಕೊಂಡಿರುವುದು ಎರಡು ರಾಷ್ಟ್ರಗಳ ನಡುವಿನ ಮೈತ್ರಿಯನ್ನು ಮತ್ತಷ್ಟು ಸುಭದ್ರಗೊಳಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

2022 huge, year, US-India, 2023 going, even, bigger, White House,

Articles You Might Like

Share This Article