ಬೆಂಗಳೂರು,ಡಿ.11- ಮುಂದಿನ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹೈಕಮಾಂಡ್ ತಯಾರಿ ನಡೆಸಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಲಿದ್ದು ಮಹತ್ವದ ಸಭೆ ನಡೆಯಲಿದೆ. ಹಾಲಿ ಶಾಸಕರ ಪೈಕಿ ಮೂರ್ನಾಲ್ಕು ಮಂದಿಗೆ ಈ ಬಾರಿ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳಿವೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ದೃವನಾರಾಯಣ್, ಸಲಿಂ ಅಹಮದ್ ಅವರನ್ನು ಹೈಕಮಾಂಡ್ ದೆಹಲಿಗೆ ಆಹ್ವಾನಿಸಿದೆ.
ಅದಕ್ಕಾಗಿ ಕಾಂಗ್ರೆಸ್ ಸಂಭವನೀಯ ಪಟ್ಟಿಯನ್ನು ಈಗಾಗಲೇ ಸಿದ್ಧ ಪಡಿಸಿಕೊಂಡಿದ್ದು, ಹೈಕಮಾಂಡ್‍ಗೆ ಸಲ್ಲಿಸಲಾಗುವುದು. ಇತ್ತೀಚೆಗೆ ಅರ್ಜಿ ಆಹ್ವಾನಿಸಿದಾಗ ಕೆಲವು ಕ್ಷೇತ್ರಗಳಿಗೆ 14 ಮಂದಿಯವರೆಗೂ ಅರ್ಜಿ ಹಾಕಿದ್ದಾರೆ.
ಕೆಲವು ಕ್ಷೇತ್ರಗಳಿಗೆ ಅರ್ಹರಲ್ಲದವರು ಅರ್ಜಿ ಸಲ್ಲಿಸಿದ್ದು, ಪ್ರಬಲ ಸ್ಪರ್ಧೆ ನೀಡುವ ಸಾಧ್ಯತೆ ಇರುವವರು ಹಿಂದೆ ಸರಿದಿದ್ದಾರೆ. ಇದು ಹೊಸ ತಲೆ ನೋವಾಗಿದೆ. ಅರ್ಜಿ ಸಲ್ಲಿಸುವಾಗ ಎರಡು ಲಕ್ಷ ರೂಪಾಯಿ ಬಾಂಡ್ ಸಲ್ಲಿಸಿರುವವರು ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ಬೇರೆಯವರಿಗೆ ಟಿಕೆಟ್ ನೀಡಿದ್ದೆ ಆದರೆ, ಬಂಡಾಯ ಚಟುವಟಿಕೆಗಳು ತೀವ್ರಗೊಳ್ಳುವ ಸಾಧ್ಯತೆ ಇದೆ.
ಪ್ರಸ್ತುತ ರಾಜ್ಯ ಕಾಂಗ್ರೆಸ್ ಸಿದ್ದ ಪಡಿಸಿರುವ ಪಟ್ಟಿಯ ಪ್ರಕಾರ ಸಂಭವನೀಯ ಪಟ್ಟಿ ಹೀಗಿದೆ.
ಬಿಬಿಎಂಪಿ ವ್ಯಾಪ್ತಿಯ ಕ್ಷೇತ್ರಗಳ ಪೈಕಿ ಗಾಂಧಿನಗರ- ದಿನೇಶ್ ಗುಂಡೂರಾವ್, ಬ್ಯಾಟರಾಯನಪುರ- ಕೃಷ್ಣಬೈರೇಗೌಡ, ಸರ್ವಜ್ಞನಗರ- ಕೆ.ಜೆ.ಜಾರ್ಜ್, ಬಿಟಿಎಂ ಲೇಔಟ್- ರಾಮಲಿಂಗಾರೆಡ್ಡಿ, ಜಯನಗರ- ಸೌಮ್ಯಾ ರೆಡ್ಡಿ, ಹೆಬ್ಬಾಳ- ಬೈರತಿ ಸುರೇಶ್, ವಿಜಯನಗರ- ಎಂ.ಕೃಷ್ಣಪ್ಪ, ಗೋವಿಂದರಾಜನಗರ-ಪ್ರಿಯಕೃಷ್ಣ, ಆರ್ ಆರ್ ನಗರ- ಕುಸುಮಾ ಹನುಮಂತರಾಯಪ್ಪ ಅವರಿಗೆ ಟಿಕೆಟ್ ಖಚಿತ ಎಂದು ಹೇಳಲಾಗಿದೆ.
ಉಳಿದಂತೆ ಮಲ್ಲೇಶ್ವರಂ- ರಶ್ಮಿರವಿಕಿರಣ್/ ಅನೂಪ್ ಹೆಗಡೆ, ರಾಜಾಜಿನಗರ- ಎಸ್.ನಾರಾಯಣ್, ಸಾರಾ ಗೋವಿಂದ್, ಎಂಎಲ್ ಸಿ ಪುಟ್ಟಣ್ಣ, ಬಿಬಿಎಂಪಿ ಮಾಜಿ ಉಪಮೇಯರ್ ಪುಟ್ಟರಾಜು, ಸಿ.ವಿ.ರಾಮನ್ ನಗರ- ಮಾಜಿಮೇಯರ್ ಸಂಪತ್ ರಾಜ್, ಮಹಾಲಕ್ಷ್ಮಿ ಲೇಔಟ್-ನಾರಾಯಣಸ್ವಾಮಿ, ಜೆ.ಸಿ.ಚಂದ್ರಶೇಖರ್, ಪುಲಿಕೇಶಿನಗರ-ಅಖಂಡ ಶ್ರೀನಿವಾಸ್ ಮೂರ್ತಿ/ಪ್ರಸನ್ನ ಕುಮಾರ್, ಪದ್ಮನಾಭನಗರ- ರಘುನಾಥ್ ನಾಯ್ಡು, ಸಂಜಯ್ ಗೌಡ,
ಬೆಂಗಳೂರು ದಕ್ಷಿಣ- ಆರ್.ಕೆ.ರಮೇಶ್,ಸುಷ್ಮಾ ರಾಜಗೋಪಾಲ್, ಬೊಮ್ಮನಹಳ್ಳಿ- ನಿರ್ಮಾಪಕ ಉಮಾಪತಿಗೌಡ, ಮಹದೇವಪುರ-ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್,ಆನಂದ್ ಕೆ.ಆರ್.ಪುರಂ-ಮಾಜಿ ಎಂಎಲ್‍ಸಿ ನಾರಾಯಣಸ್ವಾಮಿ, ಡಿ.ಕೆ.ಮೋಹನ್ ಬಾಬು,ಯಲಹಂಕ-ಚಂದ್ರಪ್ಪ, ನಾಗರಾಜು ಆಕಾಂಕ್ಷಿಗಳಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತವರು ಜಿಲ್ಲೆ ಬೆಂಗಳೂರು ಗ್ರಾಮಾಂತರದಲ್ಲಿ ಹಾಲಿ ಶಾಸಕರಾಗಿರುವ ಆನೇಕಲ್- ಶಾಸಕ ಶಿವಣ್ಣ, ದೊಡ್ಡಬಳ್ಳಾಪುರ- ಶಾಸಕ ವೆಂಕಟರಮಣಯ್ಯ, ಹೊಸಕೋಟೆ-ಶರತ್ ಬಚ್ಚೇಗೌಡ ಅವರಿಗೆ ಟಿಕೆಟ್ ಖಚಿತವಾಗಿದೆ.
ಇನ್ನೂ ಜೆಡಿಎಸ್ ಹಿಡಿತದಲ್ಲಿರುವ ನೆಲಮಂಗಲದಲ್ಲಿ ಶ್ರೀನಿವಾಸ್, ದೇವನಹಳ್ಳಿ-ಕೆ.ಹೆಚ್.ಮುನಿಯಪ್ಪ, ಎ.ಸಿ.ಶ್ರೀನಿವಾಸ್, ಆನಂದ್ ಕುಮಾರ್ ನಡುವೆ ಪೈಪೋಟಿ ಇದೆ.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತವರು ಜಿಲ್ಲೆ ತುಮಕೂರಿನಲ್ಲಿ ಜೆಡಿಎಸ್‍ನಿಂದ ವಲಸೆ ಬರುವ ಹಾಲಿ ಶಾಸಕ ಶ್ರೀನಿವಾಸ್‍ಗೆ ಗುಬ್ಬಿ ಕ್ಷೇತ್ರ ಟಿಕೆಟ್ ಖಚಿತ ಪಡಿಸಲಾಗಿದೆ. ಉಳಿದಂತೆ ಹಾಲಿ ಶಾಸಕರಾದ ಕೊರಟಗೆರೆ- ಡಾ.ಜಿ.ಪರಮೇಶ್ವರ್, ಕುಣಿಗಲ್- ರಂಗನಾಥ್( ಶಾಸಕ), ಮಾಜಿ ಶಾಸಕರ ಪೈಕಿ ಶಿರಾ- ಜಯಚಂದ್ರ, ಮಧುಗಿರಿ- ಕೆ.ಎನ್.ರಾಜಣ್ಣ, ತುಮಕೂರು ನಗರ- ಅತೀಕ್ ಅಹ್ಮದ್,ರಫಿಕ್ ಅಹ್ಮದ್ ಅವರಿಗೆ ಟಿಕೆಟ್ ದೊರೆಯಲಿದೆ.
ತುಮಕೂರು ಗ್ರಾಮಾಂತರಕ್ಕೆ -ರಾಯಸಂದ್ರ ರವಿಕುಮಾರ್/ ಸೂರ್ಯ ಮುಕುಂದರಾಜು, ಚಿಕ್ಕನಾಯಕನಹಳ್ಳಿ- ಸುರೇಶ್ ಬಾಬು,ಸಿಎಂ ಧನಂಜಯ್, ತಿಪಟೂರು- ಷಡಕ್ಷರಿ,ಮಾಜಿ ಡಿವೈಎಪಿ ಲೊಕೇಶ್, ತುರುವೇಕೆರೆ- ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಅವರ ನಡುವೆ ಪೈಪೋಟಿ ಇದೆ. ಪಾವಗಡ ಕ್ಷೇತ್ರದಲ್ಲಿ ಹಾಲಿ ಶಾಸಕ ವೆಂಕಟರಮಣ್ಣಪ್ಪ ಬದಲು ಅವರ ಪುತ್ರ ವೆಂಕಟೇಶ್‍ಗೆ ಟಿಕೆಟ್ ನೀಡುವ ಸಾಧ್ಯತೆಗಳಿವೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಹೊಳಲ್ಕೆರೆ – ಎಚ್.ಆಂಜನೇಯ, ಹೊಸದುರ್ಗ- ಬಿ.ಜಿ.ಗೋವಿಂದಪ್ಪ, ಹಿರಿಯೂರು- ಸುಧಾಕರ್, ಚಳ್ಳಕೆರೆ- ಹಾಲಿ ಶಾಸಕ ರಘು ಮೂರ್ತಿ, ಚಿತ್ರದುರ್ಗ- ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್ ಕಣಕ್ಕಿಳಿಯಲಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಯೋಗೇಶ್ ಬಾಬು,ಮಾಜಿ ಸಂಸದ ಉಗ್ರಪ್ಪ ಲಾಬಿ ನಡೆಸುತ್ತಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರ ಹಿಡಿತದಲ್ಲಿರುವ ದಾವಣಗೆರೆ ಜಿಲ್ಲೆಯ ಪೈಕಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಕಣಕ್ಕಿಳಿಯಲು ನಿರಾಸಕ್ತಿ ತೋರಿಸಿದ್ದು, ಅವರು ಸೂಚಿಸಿದ ಕುಟುಂಬದ ಸದಸ್ಯರಿಗೆ ಟಿಕೆಟ್ ದೊರೆಯುವ ಸಾಧ್ಯತೆಗಳಿವೆ. ದಾವಣಗೆರೆ ಉತ್ತರ- ಎಸ್.ಎಸ್.ಮಲ್ಲಿಕಾರ್ಜುನ್, ಜಗಳೂರು- ಹೆಚ್.ಪಿ.ರಾಜೇಶ್, ಹರಿಹರ- ರಾಮಪ್ಪ,ದೇವೇಂದ್ರಪ್ಪ,ನಾಗೇಂದ್ರಪ್ಪ , ಹೊನ್ನಾಳಿ- ಶಾಂತನಗೌಡ, ಹೆಚ್.ಬಿ.ಮಂಜಪ್ಪ, ಚನ್ನಗಿರಿ- ವಡ್ನಾಳ್ ರಾಜಣ್ಣ ಅಥವಾ ಅವರ ಸಹೋದರ ಅಶೋಕ್, ಮಾಯಕೊಂಡ-ದುಗ್ಗಪ್ಪ,ಬಸವರಾಜು,ಸವಿತಾ ಮಲ್ಲೇಶನಾಯ್ಕ ಅವರ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಗಣಿನಾಡು ಬಳ್ಳಾರಿ,ವಿಜಯನಗರ ಜಿಲ್ಲೆಗಳಲ್ಲೂ ಟಿಕೆಟ್‍ಗೆ ಬಾರೀ ಪೈಪೋಟಿ ನಡೆದಿದೆ. ಹಾಲಿ ಶಾಸಕರಾದ ಬಳ್ಳಾರಿ ಗ್ರಾಮಾಂತರ- ನಾಗೇಂದ್ರ, ಸಂಡೂರು- ತುಕಾರಾಂ, ಕಂಪ್ಲಿ – ಗಣೇಶ್, ಹಗರಿಬೊಮ್ಮನಹಳ್ಳಿ- ಭೀಮಾನಾಯ್ಕ್ ಮತ್ತೆ ಸ್ಪರ್ಧೆ ಮಾಡಲಿದ್ದಾರೆ. ಬಳ್ಳಾರಿ ನಗರ-ನಾರಾ ಭರತ್ ರೆಡ್ಡಿ,ದಿವಾಕರ್ ಬಾಬು, ಕೂಡ್ಲಿಗಿ- ನಾಗರಾಜು,ಶ್ರೀನಿವಾಸ್, ಹೊಸಪೇಟೆ- ಗವಿಯಪ್ಪ, ರಾಜಶೇಖರ್ ಹಿಟ್ನಾಳ್, ಘೋರ್ಪಡೆ, ಹರಪನಹಳ್ಳಿ- ಲತಾ ಮಲ್ಲಿಕಾರ್ಜುನ್, ವೀಣಾ ಮಹಾಂತೇಶ್, ಸಿರಗುಪ್ಪ- ಬಿ.ಎಂ.ನಾಗರಾಜು,ಮುರುಳಿಕೃಷ್ಣ ಅವರ ನಡುವೆ ಪೈಪೋಟಿಯಿದೆ.
ಜೆಡಿಎಸ್ ಪ್ರಾಬಲ್ಯ ಇರುವ ಹಾಸನ ಜಿಲ್ಲೆಯಲ್ಲಿ ಕಳೆದ ಬಾರಿ ಜೆಡಿಎಸ್‍ನಿಂದ ಚುನಾಯಿತರಾಗಿದ್ದ ಅರಸೀಕೆರೆ- ಶಿವಲಿಂಗೇಗೌಡ ಈ ಬಾರಿ ಕಾಂಗ್ರೆಸ್‍ನಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಅರಕಲಗೂಡು ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿರುವ ಎ.ಟಿ.ರಾಮಸ್ವಾಮಿ ಜೆಡಿಎಸ್ ತೊರೆಯುವ ಸಾಧ್ಯತೆ ಇದ್ದು, ಅವರಿಗೆ ಟಿಕೆಟ್ ನೀಡಲು ಚರ್ಚೆಗಳಾಗಿವೆ, ಇಲ್ಲವಾದರೆ ಕೃಷ್ಣೇಗೌಡ ಅಭ್ಯರ್ಥಿಯಾಗಲಿದ್ದಾರೆ. ಉಳಿದಂತೆ ಹಾಸನ-ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ.ಪಿ ಮಂಜೇಗೌಡ, ರಂಗಸ್ವಾಮಿ, ಬೇಲೂರು- ಗಂಡಸಿ ಶಿವರಾಂ,ಕೃಷ್ಣೇಗೌಡ, ಸಕಲೇಶಪುರ- ಮುರುಳೀಮೋಹನ್, ಶ್ರವಣಬೆಳಗೊಳ- ಎಂಎಲ್ ಸಿ ಗೋಪಾಲಸ್ವಾಮಿ,ವಿಜಯ್ ಲಲಿತ್ ರಾಘವ್ ಅಭ್ಯರ್ಥಿಗಳಾಗಲಿದ್ದಾರೆ.
ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ನಾಗಮಂಗಲ- ಚೆಲುವರಾಯಸ್ವಾಮಿ ಅವರಿಗೆ ಟಿಕೆಟ್ ನೀಡುವುದು ಖಚಿತವಾಗಿದ್ದು, ಮದ್ದೂರು- ಗುರುಚರಣ್, ಮಳವಳ್ಳಿ-ನರೇಂದ್ರ ಸ್ವಾಮಿ, ಮೇಲುಕೋಟೆ- ಡಾ.ರವೀಂದ್ರ, ಶ್ರೀರಂಗಪಟ್ಟಣ- ರಮೇಶ್ ಬಂಡಿ ಸಿದ್ದೇಗೌಡ, ಕೆ.ಆರ್.ಪೇಟೆ- ವಿಜಯ ರಾಮೇಗೌಡ, ಕಿಕ್ಕೇರಿ ಸುರೇಶ್, ಕೆ.ಬಿ.ಚಂದ್ರಶೇಖರ್, ಮಂಡ್ಯ-ಗಣಿಗರವಿ,ಡಾ.ಕೃಷ್ಣ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂ ಜಿಲ್ಲೆ ಮೈಸೂರಿನಲ್ಲಿ ಚಾಮುಂಡೇಶ್ವರಿ- ಸಿದ್ದರಾಮಯ್ಯ ಅವರ ಪರಮಾಪ್ತ ಮರಿಗೌಡ, ಎನ್.ಆರ್.ಮೊಹಲ್ಲಾ- ತನ್ವೀರ್ ಶೇಠ್, ಕೃಷ್ಣರಾಜ- ಸೋಮಶೇಖರ್, ಚಾಮರಾಜ ಕ್ಷೇತ್ರ- ಹರಿಶ್ ಗೌಡ, ವಾಸು, ಪಿರಿಯಾಪಟ್ಟಣ- ವೆಂಕಟೇಶ್, ಕೆ.ಆರ್.ನಗರ- ರವಿಶಂಕರ್, ಟಿ.ನರಸೀಪುರ- ಸುನೀಲ್ ಬೋಸ್, ನಂಜನಗೂಡು- ದೃವನಾರಾಯಣ್, ಹೆಚ್.ಡಿ.ಕೋಟೆ- ಅನಿಲ್ ಚಿಕ್ಕಮಾದು ಅಭ್ಯರ್ಥಿಗಳಾಗುವ ನಿರೀಕ್ಷೆ ಇದೆ.
ಸಿದ್ದರಾಮಯ್ಯ ಅವರು ಈವರೆಗೂ ಯಾವ ಕ್ಷೇತ್ರ ಎಂದು ನಿರ್ಧಾರ ಮಾಡದೇ ಇರುವುದರಿಂದ ವರುಣಾದಲ್ಲಿ ಸಿದ್ದರಾಮಯ್ಯ,ಯತೀಂದ್ರ ಸಿದ್ದರಾಮಯ್ಯ ಇಬ್ಬರ ಹೆಸರು ಪ್ರಸ್ತಾಪವಾಗಿದೆ. ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅವರ ಬದಲಿಗೆ ಅವರ ಪುತ್ರ ಸುನೀಲ್ ಬೋಸ್‍ರ ಹೆಸರು ಕೇಳಿ ಬಂದಿದೆ.
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಗುಂಡ್ಲುಪೇಟೆ- ಗಣೇಶ್ ಪ್ರಸಾದ್, ಚಾಮರಾಜನಗರ- ಪುಟ್ಟರಂಗ ಶೆಟ್ಟಿ, ಹನೂರು-ನರೇಂದ್ರ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಕೊಳ್ಳೇಗಾಲ- ಜಯಣ್ಣ,ಬಾಲರಾಜು ನಡುವೆ ಪೈಪೋಟಿಯಿದೆ.
ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಯ ವಿರಾಜಪೇಟೆ ಕ್ಷೇತ್ರದಲ್ಲಿ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೋನ್ನಣ್ಣ, ಮಡಿಕೇರಿ- ಚಂದ್ರಮಳಿ, ಜೀವಿಜಯ ಮತ್ತು ಹಾಸನ ಜಿಲ್ಲೆ ಬಿಜೆಪಿ ಮುಖಂಡ ಎ.ಮಂಜು ಅವರ ಪುತ್ರ ಮಂಥರ್ ಗೌಡ ಪೈಪೋಟಿ ನಡೆಸುತ್ತಿದ್ದಾರೆ. ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲೂ ಮಂಥರ್ ಗೌಡ ಅಭ್ಯರ್ಥಿಯಾಗಿದ್ದರು.
ಬಿಜೆಪಿಯ ಪ್ರಬಲ ಹಿಡಿತ ಇರುವ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಯಶಸ್ಸು ಗಳಿಸಲು ಕಾಂಗ್ರೆಸ್ ನಾಯಕರು ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಬಂಟ್ವಾಳ- ರಮಾನಾಥ್ ರೈ, ಪುತ್ತೂರು- ಶಂಕುಂತಲಾ ಶೆಟ್ಟಿ, ಮೂಡಬಿದರೆ- ಮಿಥುನ್ ರೈ,ರಾಜಶೇಕರ್ ಕೊಟ್ಯಾನ್, ಸುಳ್ಯ- ಡಾ.ರಘು, ಮಂಗಳೂರು ಉತ್ತರ- ಮೊಯಿನುದ್ದೀನ್ ಬಾವ,ಪ್ರತಿಬಾ ಕುಳಾಯಿ, ಮಂಗಳೂರು- ಐವಾನ್ ಡಿಸೋಜ,ಜೆ.ಆರ್.ಲೊಬೋ, ಉಲ್ಲಾಳ- ಯು.ಟಿ.ಖಾದರ್, ಬೆಳ್ತಂಗಡಿ- ರಕ್ಷಿತ್ ಶಿವರಾಂ,ವಸಂತ ಬಂಗೇರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ.
ಉಡುಪಿ ಜಿಲ್ಲೆಯ ಬೈಂದೂರು- ಗೋಪಾಲಪೂಜರಿ, ಕುಂದಾಪುರ-ಪ್ರತಾಪ್ ಚಂದ್ರ ಶೆಟ್ಟಿ, ಕಾಪು- ವಿನಯ್ ಕುಮಾರ್ ಸೊರಕೆ, ಉಡುಪಿ-ಕೃಷ್ಣಮೂರ್ತಿ ಆಚಾರ್, ದಿನೇಶ್ ಹೆಗಡೆ, ಉತ್ತರಕನ್ನಡ ಜಿಲ್ಲೆಯ ಹಳಿಯಾಳ- ಆರ್.ವಿ.ದೇಶಪಾಂಡೆ ಅವರಿಗೆ ಟಿಕೆಟ್ ಖಚಿತವಾಗಿದ್ದು, ಶಿರಸಿ-ನಿವೇದಿತ್ ಆಳ್ವಾ,ಭೀಮಣ್ಣಾ ನಾಯಕ್, ಯಲ್ಲಾಪುರ- ವಿ.ಎಸ್.ಪಾಟೀಲ್, ಕಾರವಾರ- ಸತೀಶ್ ಸೈಲ್, ಕುಮಟಾ- ಶಾರದ ಮೋಹನ್ ಶೆಟ್ಟಿ,ಮಂಜುನಾಥ್ ಪ್ರಸಾದ್, ಹೆಸರುಗಳು ಚರ್ಚೆಯಾಗಿವೆ.
ಬಹುಭಾಷಾ ನಟ ಶರತ್‍ಕುಮಾರ್ ಆಸ್ಪತ್ರೆಗೆ ದಾಖಲು
ಮತ್ತೊಂದು ಗಡಿ ಸೂಕ್ಷ್ಮ ಜಿಲ್ಲೆ ಬೆಳಗಾವಿಯಲ್ಲಿ ಹಾಲಿ ಶಾಸಕರಾದ ಖಾನಾಪುರ- ಅಂಜಲಿ ನಿಂಬಾಳ್ಕರ್, ಬೆಳಗಾವಿ ಗ್ರಾಮೀಣ- ಲಕ್ಷ್ಮೀ ಹೆಬ್ಬಾಳ್ಕರ್, ರಾಮದುರ್ಗ- ಅಶೋಕ್ ಪಟ್ಟಣ್ ಹೆಸರುಗಳು ಖಚಿತವಾಗಿದ್ದು, ಯಮಕನಮರಡಿ ಶಾಸಕರಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮಗೆ ಸವದತ್ತಿಯಲ್ಲಿ ಸ್ಪರ್ಧೆಗೆ ಅವಕಾಶ ನೀಡಬೇಕು, ಯಮಕನಮರಡಿಯಲ್ಲಿ ತಮ್ಮ ಪುತ್ರಿ ಪ್ರಿಯಾಂಕಗೆ ಟಿಕೆಟ್ ನೀಡಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ.
ಸವದತ್ತಿಯಲ್ಲಿ ಈಗಾಗಲೇ ಉದಯಕುಮಾರ್ ಪ್ರಚಾರ ನಡೆಸುತ್ತಿದ್ದು ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕುತೂಹಲ ಕೆರಳಿಸಿದೆ. ಬೆಳಗಾವಿ ದಕ್ಷಿಣ ಹೊರತು ಪಡಿಸಿ ಉಳಿದಂತೆ ಬೆಳಗಾವಿ ಉತ್ತರ- ಪಿರೋಜ್ ಶೇಠ್, ಬೈಲ ಹೊಂಗಲ- ಮಹಾಂತೇಶ್ ಕೌಜಲಗಿ, ಕಾಗವಾಡ- ರಾಜುಕಾಗೆ, ಅಥಣಿ- ಗಜಾನನ ಮಂಗ್ಸೂಳಿ, ಚಿಕ್ಕೋಡಿ ಸದಲಗ- ಗಣೇಶ್ ಹುಕ್ಕೇರಿ, ಹುಕ್ಕೇರಿ- ಎ.ಬಿ.ಪಾಟೀಲ್, ಗೋಕಾಕ್- ಅಶೋಕ್ ಪೂಜಾರಿ, ರಾಯಭಾಗ- ಸೆಲ್ವಕುಮಾರ್,ಶ್ಯಾಂ ಘಾಟ್ಗೆ, ಅರಬಾವಿ- ಅರವಿಂದ ದಳವಾಯಿ, ನಿಪ್ಪಾಣಿ- ಕಾಕಾ ಸಾಹೇಬ್ ಪಾಟೀಲ್, ಕಿತ್ತೂರು- ಡಿ.ಬಿ.ಇನಾಂದಾರ್ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಬಾಗಲಕೋಟೆ ಜಿಲ್ಲೆಯಲ್ಲಿಮುಧೋಳ- ಆರ್.ಬಿ.ತಿಮ್ಮಾಪೂರ, ತೇರದಾಳ- ಉಮಾಶ್ರೀ, ಹುನಗುಂದ- ವಿಜಯಾನಂದ ಕಾಶಪ್ಪ, ಬೀಳಗಿ- ಜಿ.ಟಿ.ಪಾಟೀಲ್,ಎಸ್.ಆರ್.ಪಾಟೀಲ್, ಜಮಖಂಡಿ- ಆನಂದ್ ನ್ಯಾಮಗೌಡ, ಬಾದಾಮಿ- ದೇವರಾಜ್ ಪಾಟೀಲ್, ಬಿ.ಬಿ.ಚಿಮ್ಮನಕಟ್ಟಿ, ಇಂಡಿ- ಯಶವಂತರಾಯಗೌಡ ಪಾಟೀಲ್ ಅಭ್ಯರ್ಥಿಗಳಾಗುವ ಸಾಧ್ಯತೆ ಇದೆ.
ವಿಜಯಪುರ ಜಿಲ್ಲೆಯ ಬಾವನಬಾಗೇವಾಡಿ- ಶಿವಾನಂದ ಪಾಟೀಲ್, ಸಂಯುಕ್ತ ಪಾಟೀಲ್, ಬಬಲೇಶ್ವರ-ಎಂ.ಬಿ.ಪಾಟೀಲ್, ನಾಗಠಾಣ- ಕಾಂತಾ ನಾಯಕ್,ರಾಜುಅಲಗೂರ, ಸಿಂದಗಿ- ಅಶೋಕ್ ಮನಗೂಳಿ, ದೇವರಹಿಪ್ಪರಗಿ- ಶರಣಪ್ಪ ಸುಣಗಾರ್,ಎಸ್.ಆರ್.ಪಾಟೀಲ್, ಮುದ್ದೆಬಿಹಾಳ-ಸಿ.ಎಸ್.ನಾಡಗೌಡ, ವಿಜಯಪುರ- ಎಂಆರ್ ಟಿ,ಮುಕಬುಲ್ ಭಗವಾನ್ ಹೆಸರುಗಳು ಪ್ರಸ್ತಾಪವಾಗಿವೆ.
ಬೀದರ್ ಜಿಲ್ಲೆಯಲ್ಲಿ ಬೀದರ್ ದಕ್ಷಿಣ- ಅಶೋಕ್ ಖೇಣಿ, ಬೀದರ್- ರಹೀಂ ಖಾನ್, ಬಾಲ್ಕಿ – ಈಶ್ವರ್ ಖಂಡ್ರೆ, ಬಸವಕಲ್ಯಾಣ- ವಿಜಯ್ ಸಿಂಗ್, ಹುಮ್ನಾಬಾದ್- ರಾಜಶೇಖರ್ ಪಾಟೀಲ್, ಔರಾದ್- ಭೀಮರಾವ್ ಶಿಂಧೆ ಹೆಸರುಗಳಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರೂ ಜಿಲ್ಲೆ ಕಲಬುರಗಿಯಲ್ಲಿ ಚಿತ್ತಾಪುರ- ಪ್ರಿಯಾಂಕ್ ಖರ್ಗೆ, ಜೇವರ್ಗಿ- ಅಜಯ್ ಸಿಂಗ್, ಅಪ್ಝಲಪುರ- ಎಂ.ವೈ.ಪಾಟೀಲ್, ಅಳಂದ- ಬಿ.ಆರ್.ಪಾಟೀಲ್, ಕಲಬುರಗಿ ನಗರ- ಖನಿಜಾ ಫಾತಿಮಾ, ಸೇಡಂ- ಶರಣಪ್ರಕಾಶ್ ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಚಿಂಚೋಳಿ- ಸುಭಾಷ್ ರಾಥೋಡ್, ಕಲಬುರಗಿ ಗ್ರಾಮೀಣ- ವಿಜಯ್ ಕುಮಾರ್ ಆಕಾಂಕ್ಷಿಗಳಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ- ರಾಜ ವೆಂಕಟಪ್ಪ ನಾಯಕ, ರಾಯಚೂರು- ರವಿ ಭೋಸರಾಜು,ಎನ್.ಎಸ್.ಬೋಸರಾಜು, ಗ್ರಾಮೀಣ- ಬಸನಗೌಡ ದದ್ದಲ್, ದೇವದುರ್ಗ- ಬಿ.ವಿ.ನಾಯಕ್, ಸಿಂದನೂರು- ಬಸನಗೌಡ ಬಾದರ್ಲಿ,ಹಂಪನಗೌಡ ಬಾದರ್ಲಿ, ಲಿಂಗಸುಗೂರು- ಡಿ.ಎಸ್.ಹೊಲಗೇರಿ, ಮಸ್ಕಿ-ಬಸವರಾಜ ತುರುವೀಹಾಳ, ಯಾದಗಿರಿ- ಮಾಜಿ ಸಚಿವ ಡಾ.ಮಾಲಕರೆಡ್ಡಿ ಪುತ್ರಿ ಅವರ ಹೆಸರನ್ನು ಆಕಾಂಕ್ಷಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ಗದಗ ಜಿಲ್ಲೆಯಲ್ಲಿ ರೋಣ- ಜಿ.ಎಸ್.ಪಾಟೀಲ್, ನರಗುಂದ- ಬಿ.ಆರ್.ಯಾವಗಲ್, ಸಂಗಮೇಶ್ ಕೊಳ್ಳಿ, ಶಿರಹಟ್ಟಿ- ರಾಮಕೃಷ್ಣ ದೊಡ್ಮನಿ, ನವಲಗುಂದ- ಕೋನರೆಡ್ಡಿ, ಹಾವೇರಿ- ರುದ್ರಪ್ಪ ಲಮಾಣಿ, ಹಾನಗಲ್- ಶ್ರೀನಿವಾಸ್ ಮಾನೆ,
ಗದಗ- ಹೆಚ್.ಕೆ.ಪಾಟೀಲ್ ಕಣಕ್ಕಿಳಿಯಲಿದ್ದು, ಹಾಲಿ ಮುಖ್ಯಮಂತ್ರಿ ಬವಸರಾಜ ಬೊಮ್ಮಾಯಿ ಅವರ ಕ್ಷೇತ್ರ ಶಿಗ್ಗಾಂವಿಗೆ ಸೋಮಣ್ಣ ಬೇವಿನಮರದ ಅಥವಾ ಅಜ್ಜಂಪೀರ್ ಖಾದ್ರಿ ಹೆಸರು ಕೇಳಿ ಬಂದಿವೆ.
ಮಾನ್ವಿ- ಹಂಪಯ್ಯ ನಾಯಕ್, ಕೊಪ್ಪಳ- ರಾಘವೇಂದ್ರ ಹಿಟ್ನಾಳ್, ಕನಕಗಿರಿ- ಶಿವರಾಜ್ ತಂಗಡಗಿ, ಕುಷ್ಠಗಿ- ಅಮರೇಗೌಡ, ಯಲಬುರ್ಗಾ- ರಾಯರೆಡ್ಡಿ, ಗಂಗಾವತಿ- ಇಕ್ಬಾಲ್ ಅನ್ಸಾರಿ, ಹಿರೆಕೆರೂರು- ಯು.ಬಿ.ಬಣಕಾರ್, ರಾಣೆಬೆನ್ನೂರು- ಕೋಳಿವಾಡ,ಆರ್.ಶಂಕರ್ ಹೆಸರು ಪ್ರಸ್ತಾಪವಾಗಿದೆ.
ಧಾರವಾಡ- ಹುಬ್ಬಳ್ಳಿ ಜಿಲ್ಲೆಯಲ್ಲಿ ಹುಬ್ಬಳ್ಳಿ ಪೂರ್ವ- ಪ್ರಸಾದ್ ಅಬ್ಬಯ್ಯ, ಹುಬ್ಬಳ್ಳಿ ಸೆಂಟ್ರಲ್- ಇಸ್ಮಾಯಲ್ ತಮಟಗಾರ, ಹುಬ್ಬಳ್ಳಿ ಪಶ್ಚಿಮ-ದೀಪಕ್ ಚಿಂಚೋರೆ, ಕೀರ್ತಿ ಮೊರೆ, ಕಲಘಟಕಿ- ಸಂತೋಷ್ ಲಾಡ್, ನಾಗರಾಜ್ ಛಬ್ಬಿ, ಕುಂದಗೋಳ- ಕುಸುಮಾ ಶಿವಳ್ಳಿ, ಧಾರವಾಡ ಗ್ರಾಮೀಣ- ವಿನಯ್,ವಿಜಯ್ ಕುಲಕರ್ಣಿ ಹೆಸರುಗಳಿವೆ.
ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ಸಿಟಿ- ಪ್ರಸನ್ನ ಕುಮಾರ್, ಶಿವಮೊಗ್ಗ ಗ್ರಾಮೀಣ- ಪಲ್ಲವಿ, ನಾರಾಯಣಸ್ವಾಮಿ,ಶ್ರೀನಿವಾಸ್, ಭದ್ರಾವತಿ- ಸಂಗಮೇಶ್, ಸಾಗರ- ಬೇಳೂರು ಗೋಪಾಲಕೃಷ್ಣ, ಸೊರಬ- ಮಧು ಬಂಗಾರಪ್ಪ, ತೀರ್ಥಹಳ್ಳಿ-ಕಿಮ್ಮನೆ ರತ್ನಾಕರ್, ಶಿಕಾರಿಪುರ- ಗೋಣಿ ಮಹಾಂತೇಶ್,
ಬಲವಂತದ ಮತಾಂತರ : ಪಾಕ್ ಮೌಲಾನಗಳಿಗೆ ಬ್ರಿಟನ್ ನಿಷೇಧ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ- ರಾಜೇಗೌಡ, ಕಡೂರು- ವೈ ಎಸ್ ವಿ ದತ್ತಾ, ಆನಂದ್, ತರಿಕೇರೆ- ಗೋಪಿಕೃಷ್ಣ,ಶ್ರೀನಿವಾಸ್, ಮೂಡಿಗೆರೆ- ಮೋಟಮ್ಮ, ನಯನಾ ಮೋಟಮ್ಮ , ಚಿಕ್ಕಮಗಳೂರು- ಗಾಯತ್ರಿ ಶಾಂತೇಗೌಡ,ವಿಜಯಕುಮಾರ್ ಅಭ್ಯರ್ಥಿಗಳಾಗುವ ಸಾಧ್ಯತೆಗಳಿವೆ.
ಸಿದ್ದರಾಮಯ್ಯ ಅವರ ಪ್ರವೇಶದಿಂದ ಕುತೂಹಲ ಕೆರಳಿಸಿರುವ ಕೋಲಾರ ಜಿಲ್ಲೆಯ ಪೈಕಿ ಕೆಜಿಎಫ್ – ರೂಪಾ ಶಶಿಧರ್, ಬಂಗಾರಪೇಟೆ – ನಾರಾಯಣಸ್ವಾಮಿ, ಶ್ರೀನಿವಾಸಪುರ- ರಮೇಶ್ ಕುಮಾರ್, ಕೋಲಾರ- ಸಿ.ಆರ್.ಮನೋಹರ್,ಗೋವಿಂದೇ ಗೌಡ, ಮುಳಬಾಗಿಲು-ನಾರಾಯಣಸ್ವಾಮಿ,ಕೊತ್ತನೂರು ಮಂಜು, ಮಾಲೂರು- ನಂಜೇಗೌಡ, ಶಾಸಕರ ಪುತ್ರಹೆಸರು ಪ್ರಸ್ತಾಪವಾಗಿದ್ದರೆ, ನೆರೆಯ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಶೀಡ್ಲಘಟ್ಟ- ವಿ.ಮುನಿಯಪ್ಪ ಚಿಕ್ಕಬಳ್ಳಾಪುರ- ವಿನಯ್ ಶ್ಯಾಂ,ಕೊತ್ತನೂರು ಮಂಜು, ಚಿಂತಾಮಣಿ- ಎಂ.ಸಿ.ಸುಧಾಕರ್, ಗೌರಿಬಿದನೂರು- ಎನ್.ಹೆಚ್.ಶಿವಶಂಕರರೆಡ್ಡಿ, ಬಾಗೇಪಲ್ಲಿ- ಸುಬ್ಬಾರೆಡ್ಡಿ ಹೆಸರುಗಳಿವೆ.
ರಾಮನಗರ- ಇಕ್ಬಾಲ್ ಹುಸೇನ್, ಮಾಗಡಿ-ಹೆಚ್.ಸಿ.ಬಾಲಕೃಷ್ಣ, ಚನ್ನಪಟ್ಟಣ- ಸಿಪಿವೈ ಅಥವಾ ಪ್ರಸನ್ನ, ಕನಕಪುರ- ಡಿ.ಕೆ.ಶಿವಕುಮಾರ್ ಹೆಸರುಗಳಿವೆ. ಬಿಜೆಪಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿರುವ ಸಿ.ಪಿ.ಯೋಗೇಶ್ವರ್ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿದೆ.