ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ರಾಜಕೀಯ ಬದ್ಧ ವೈರಿಗಳು

Social Share

ನವದೆಹಲಿ,ಡಿ.6- ಪ್ರತಿನಿತ್ಯ ರಾಜಕೀಯ ಕೆಸರೆರೆಚಾಟದಲ್ಲಿ ತೊಡಗುವ ರಾಜಕಾರಣಿಗಳು ಇಂದು ಎಲ್ಲ ವೈಮನಸ್ಯಗಳನ್ನು ತೊರೆದು ಒಂದೇಡೆ ಸೇರಿ ದೇಶದ ಅಭಿವೃದ್ಧಿ ಬಗ್ಗೆ ಚರ್ಚಿಸಿರುವುದು ವಿಶೇಷವಾಗಿದೆ.

ನಮ್ಮ ದೇಶಕ್ಕೆ ಜಿ-20 ಅಧ್ಯಕ್ಷ ಸ್ಥಾನ ದಕ್ಕಿರುವುದರಿಂದ ಇಂತಹ ಅದ್ಬುತ ಅವಕಾಶ ಲಭಿಸಿದೆ. ಹೌದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಎಲ್ಲ ವಿಪಕ್ಷ ನಾಯಕರು ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮತ್ತಿತರ ಘಟಾನುಘಟಿ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ರಾಜಸ್ಥಾನ, ಛತ್ತಿಸ್‍ಗಡ ಕಾಂಗ್ರೆಸ್ ಉಸ್ತುವಾರಿ ಬದಲಾವಣೆ

ವಿರೋಧ ಪಕ್ಷದ ನಾಯಕರ ಉಭಯಕುಶಲೋಪರಿ ವಿಚಾರಿಸಿದ ಮೋದಿ ಅವರು, ನಮ್ಮ ದೇಶಕ್ಕೆ ಜಿ-20 ಅಧ್ಯಕ್ಷ ಸ್ಥಾನ ದೊರೆತಿರುವುದರಿಂದ ನಮ್ಮ ದೇಶದ ಶಕ್ತಿಯನ್ನು ಇಡೀ ಜಗತ್ತಿಗೆ ಪ್ರದರ್ಶಿಸಲು ಒಂದು ಅನನ್ಯ ಅವಕಾಶವಾಗಿದೆ ಎಂದು ಹೇಳಿದರು.

ಇಂದು ಭಾರತದ ಕಡೆಗೆ ಜಾಗತಿಕ ಕುತೂಹಲ ಮತ್ತು ಆಕರ್ಷಣೆ ಹೆಚ್ಚಾಗಿದೆ. ನಮಗೆ ಸಿಕ್ಕಿರುವ ಇಂತಹ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ನೀಮ್ಮೆಲರ ಸಹಕಾರ ಅತ್ಯಗತ್ಯ ಎಂದು ಮೋದಿ ಮನವಿ ಮಾಡಿಕೊಂಡರು.

ಚೀನಿ ಹ್ಯಾಕರ್ ದಾಳಿ : ಅಮ್ನೆಸ್ಟಿ ಇಂಟರ್ ನ್ಯಾಶನಲ್ ಆಕ್ರೋಶ

ವರ್ಷವಿಡೀ ನಡೆಯುವ ಜಿ-20 ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯ ಸಂದರ್ಶಕರು ಭಾರತಕ್ಕೆ ಬರುತ್ತಾರೆ ಇಂತಹ ಸಂದರ್ಭದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ಜಿ -20 ಸಭೆಗಳನ್ನು ಆಯೋಜಿಸುವ ಸ್ಥಳಗಳ ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಮೋದಿ ಕರೆ ನೀಡಿದರು.

#2023 #G20summit, #Allparty, #Meet, PMModi,

Articles You Might Like

Share This Article