ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಗಿಲಲ್ಲಿ ಆರ್‌ಆರ್‌ಆರ್‌

Social Share

ನವದೆಹಲಿ,ಡಿ.13- ಟಾಲಿವುಡ್‍ನ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದಾ ಆರ್‌ಆರ್‌ಆರ್‌ ಚಲನಚಿತ್ರ ಗೋಲ್ಡನ್‍ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಮುಂದಿನ ವರ್ಷದ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಎರಡು ವಿಭಾಗಗಳಿಗೆ ಆರ್‌ಆರ್‌ಆರ್‌ ಚಿತ್ರ ನಾಮನಿರ್ದೇಶನಗೊಂಡಿರುವುದನ್ನು ಸ್ವತಃ ರಾಜಮೌಳಿ ಅವರೆ ಟ್ವಿಟರ್‍ನಲ್ಲಿ ಖಚಿತಪಡಿಸಿದ್ದಾರೆ.

ಇಂಗ್ಲೀಷ್ ಅಲ್ಲದ ಭಾಷಾ ಚಲನಚಿತ್ರ ಹಾಗೂ ಅತ್ಯುತ್ತಮ ಮೂಲ ಗೀತೆ ವಿಭಾಗಕ್ಕೆ ನಮ್ಮ ಚಿತ್ರ ನಾಮನಿರ್ದೇಶನಗೊಂಡಿದ್ದು, ನಮ್ಮ ಚಿತ್ರವನ್ನು ಪರಿಗಣಿಸಿದ ತೀರ್ಪುಗಾರರಿಗೆ ಹಾಗೂ ಇಡಿ ಚಿತ್ರತಂಡಕ್ಕೆ ಧನ್ಯವಾದಗಳು ಎಂದು ಅವರು ಟ್ವಿಟ್ ಮಾಡಿದ್ದಾರೆ.

ಚರ್ಮಗಂಟು ರೋಗ : ಮೃತ ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡಲು 30 ಕೋಟಿ ಬಿಡುಗಡೆ

ಆರ್‌ಆರ್‌ಆರ್‌ ಚಿತ್ರ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಎಲ್ಲರಿಗೂ ಅಭಿನಂದನೆಗಳು. ನಾವು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಎದುರು ನೋಡುತ್ತಿದ್ದೇವೆ ಎಂದು ಚಿತ್ರದ ನಾಯಕ ಜೂನಿಯರ್ ಎನ್‍ಟಿಆರ್ ಪ್ರತಿಕ್ರಿಯಿಸಿದ್ದಾರೆ.

‘ನೀವು ದೇವರು ಕೊಟ್ಟ ವರ’ ರೊನಾಲ್ಡೊ ಬಣ್ಣಿಸಿದ ಕೊಹ್ಲಿ

ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದ ಈ ಚಿತ್ರ ಜಪಾನ್ ಮತ್ತು ಯುಎಸ್‍ನಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ಮಾತ್ರವಲ್ಲ, ಮುಂದಿನ ವರ್ಷ ಆಸ್ಕರ್‍ಗಾಗಿ ವಿವಿಧ ವಿಭಾಗಗಳಿಗೆ ಈ ಚಿತ್ರವನ್ನು ಪರಿಗಣಿಸಲಾಗಿದೆ.

#2023GoldenGlobesAward #Nominations, #Announced, #RRRMovie,

Articles You Might Like

Share This Article