ಅಹಮದಾಬಾದ್, ಮೇ 28- ವಿಶ್ವದ ಅತ್ಯಂತ ಶ್ರೀಮಂತ ಲೀಗ್ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗೆ ಇಂದು ಅದ್ಧೂರಿ ತೆರೆ ಬೀಳಲಿದೆ. ಅಹಮದಾಬಾದ್‍ನ ಮೊಟೊರಾದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹದಿನಾರನೇ ಆವೃತ್ತಿಯ ಫೈನಲ್ ಪಂದ್ಯವು 4 ಬಾರಿ ಟ್ರೋಫಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡಿಫೆಂಡಿಂಗ್ ಚಾಂಪಿಯನ್ ಗುಜರಾತ್ ಟೈಟನ್ಸ್ ಟ್ರೋಫಿ ಗೆಲ್ಲಲು ಪರಸ್ಪರ ಪೈಪೋಟಿ ನೀಡಲಿದೆ.
ಕೊರೊನಾ ಮಹಾಮಾರಿಯ ಪ್ರಭಾವದಿಂದ ಕಳೆದ 2 – 3 ವರ್ಷಗಳಿಂದ ಐಪಿಎಲ್‍ನ ಅದ್ಧೂರಿ ಸಮಾರಂಭವನ್ನು ಮೊಟಕುಗೊಳಿಸಲಾಗಿತ್ತಾದರೂ ಈ ವರ್ಷದಿಂದ ಮತ್ತೆ ಹೋಮ್ ಅಂಡ್ ಹವೇ ಮಾದರಿಯಲ್ಲಿ ಟೂರ್ನಿಯು ನಡೆದಿತ್ತು.
ಖಾಲಿ ಇರುವ ಹುದ್ದೆಗಳಿಗೆ ಪಾರದರ್ಶಕವಾಗಿ ನೇಮಕ : ಡಿಸಿಎಂ
ಮಾರ್ಚ್ 31 ರಂದು 16ನೇ ಆವೃತ್ತಿಯ ಮೊದಲ ಪಂದ್ಯದಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಪೈಪೋಟಿ ನಡೆಸಿ , ಹಾರ್ದಿಕ್ ಪಾಂಡ್ಯ ಪಡೆ 5 ವಿಕೆಟ್‍ಗಳಿಂದ ಗೆಲುವು ಸಾಧಿಸಿ ಶುಭಾರಂಭ ಮಾಡಿತ್ತು.
ಆರಂಭಿಕ ಪಂದ್ಯಕ್ಕೂ ಮುನ್ನ ನಡೆದ ಅದ್ಧೂರಿ ಸಮಾರಂಭದಲ್ಲಿ ಕೊಡಗಿನ ಕುವರಿ ರಶ್ಮಿಕಾಮಂದಾನ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ಖ್ಯಾತ ಗಾಯಕ ಅರ್ಜಿತ್ ಸಿಂಗ್ ತಮ್ಮ ನೃತ್ಯ ಹಾಗೂ ಸಂಗೀತದಿಂದ ಪ್ರೇಕ್ಷಕರ ಮನರಂಜಿಸಿದ್ದರು.
ಇಂದು ನಡೆಯಲಿರುವ ಮುಕ್ತಾಯ ಕಾರ್ಯಕ್ರಮಕ್ಕೂ ಮುನ್ನ ನಡೆಯಲಿರುವ ಅದ್ದೂರಿ ಮನರಂಜನೆ ಕಾರ್ಯಕ್ರಮವು ಪ್ರೇಕ್ಷಕರನ್ನು ರಂಜಿಸಲಿದ್ದು, ಭಾರತದ ಖ್ಯಾತ ರ್ಯಾಪ್ ಸಿಂಗರ್ ಡಿವೈನೆ, ಬ್ರಿಟಿಷ್ ಗಾಯಕ ಆಶಾ ಕಿಂಗ್, ಸಂಗೀತ ನಿರ್ದೇಶಕ ನೂಲೆಯಾ, ಕೆನೆಡಿಯನ್‍ನ ಖ್ಯಾತ ಗಾಯಕ ಜೊನಿಟಾ ಗಾಂಧಿ ಸೇರಿದಂತೆ ಹಲವಾರು ಪ್ರದರ್ಶನ ನೀಡಲಿದ್ದಾರೆ.
ಹೊಸ ಸಂಸತ್ ಭವನ 140 ಕೋಟಿ ಭಾರತೀಯರ ಹೆಮ್ಮೆಯ ಪ್ರತೀಕ: PM ಮೋದಿ
ಬಾಲಿವುಡ್‍ನ ಖ್ಯಾತ ನಟ ರಣವೀರ್ ಸಿಂಗ್ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಕೂಡ ತಮ್ಮ ನೃತ್ಯ ಹಾಗೂ ಸಂಗೀತ ಮೋಡಿಯಿಂದ ಗಮನ ಸೆಳೆಯಲಿದ್ದಾರೆ.
ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಂಜೆ 6 ಗಂಟೆಗೆ ಈ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ.
2023, #IPLfinal, #GujaratTitans, #ChennaiSuperKings,