2036ಕ್ಕೆ ಭೂಮಿ ಛಿದ್ರ ಛಿದ್ರ, ನಾಸಾ ಸುಳಿವು

nasa
ವಾಷಿಂಗ್ಟನ್, ನ.21-ಭೂಮಿ ಅವನತಿಯಾಗುವ ಸಾಧ್ಯತೆ ಬಗ್ಗೆ ಅನೇಕಾನೇಕ ಸಿದ್ಧಾಂತಗಳು ವಿಶ್ವಾದ್ಯಂತ ಜನರನ್ನು ಆತಂಕದಿಂದ ಕಂಗೆಡಿಸಿರುವಾಗಲೇ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, 2036ಕ್ಕೆ ಭೂಮಂಡಲ ಛಿದ್ರ ಛಿದ್ರವಾಗುವ ಸಾಧ್ಯತೆಯ ಸುಳಿವು ನೀಡಿದೆ.  ನಾಸಾ 2004ರಲ್ಲಿ ಬೃಹತ್ ಕ್ಷುದ್ರಗ್ರಹವೊಂದನ್ನು ಪತ್ತೆ ಮಾಡಿ, ಇದಕ್ಕೆ ಅಪೊಫಿಸ್ ಎಂದು ನಾಮಕರಣ ಮಾಡಿದೆ ಹಾಗೂ ಕಳೆದ 13 ವರ್ಷಗಳಿಂದ ಆ ಅಪಾಯಕಾರಿ ಆಕಾಶಕಾಯದ ಬಗ್ಗೆ ತೀವ್ರ ನಿಗಾ ವಹಿಸಿದೆ. ಬಾಹ್ಯಾಕಾಶದ ಈ ಅತ್ಯಂತ ದೊಡ್ಡ ಬಂಡೆಯು 2036ರಲ್ಲಿ ಇಳೆಗೆ ಭಯಾನಕ ರೀತಿಯಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ನಾಸಾ ವಿಶ್ಲೇಷಿಸಿದೆ.

ವಾಷಿಂಗ್ಟನ್‍ನ ನಾಸಾ ಕೇಂದ್ರ ಕಚೇರಿಯ ಉನ್ನತ ಬಾಹ್ಯಾಕಾಶ ವಿಜ್ಞಾನಿ ಡೌನ್, ಬ್ರೌನ್ ಕ್ಷುದ್ರ ಗ್ರಹ ಇನ್ನು 17 ವರ್ಷಗಳಲ್ಲಿ ಭೂಮಿಗೆ ಬಡಿಯಲಿದೆ. ಇದರಿಂದ ಧರಣಿ ಚೂರು ಚೂರಾಗಲಿದ್ದು, ಮನುಕುಲದ ಅವನತಿಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿದ್ದಾರೆ.
ಕಳೆದ ವಾರವಷ್ಟೇ ನಿಬಿರು ಕ್ಷುದ್ರಗ್ರಹವು ನ.19ರಂದು ಭಾನುವಾರ ಭೂಮಿಗೆ ಅಪ್ಪಳಿಸಿ ಪ್ರಳಯ ಸಂಭವಿಸಲಿದೆ ಎಂಬ ಸುದ್ದಿ ಜಗತ್ತಿನೆಲ್ಲೆಡೆ ಆತಂಕದ ವಾತಾವರಣ ಸೃಷ್ಟಿಸಿತ್ತು.

Sri Raghav

Admin