21 ತಿಂಗಳ ಹಿಂದೆ ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

post-martom
ಗೌರಿಬಿದೂರು, ನ.16- ತಮ್ಮ ಮಗನ ಸಾವು ಸಹಜವಾದುದಲ್ಲ. ಕೊಲೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕೆಂದು ಪೋಷಕರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಒಂದು ವರ್ಷ 9 ತಿಂಗಳ ಹಿಂದೆ ಹೊತಿದ್ದ ವ್ಯಕ್ತಿಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ವಿವೇಕಾನಂದ ಕಾಲೋನಿ ನಿವಾಸಿ ಕೃಷ್ಣಪ್ಪ -ಸುಬ್ಬಮ್ಮ ಅವರ ಮಗ ಲೋಕೇಶನ ದೇಹವನ್ನು ನಿನ್ನೆ ಪರೀಕ್ಷೆಗೆ ಒಳಪಡಿಸಲಾಯಿತು. 2012ರಲ್ಲಿ ಚಂದ್ರಶೇಖರ್ ಎಂಬುವರ ಪುತ್ರಿ ಲಾವಣ್ಯಳೊಂದಿಗೆ ಲೋಕೇಶನ ವಿವಾಹ ಮಾಡಲಾಗಿತ್ತು.

[poll id=”45″]

ವಿವರ: 6-2-2016ರಂದು ಲೋಕೇಶ್ ಮುಂಜಾನೆ ವಾಯುವಿಹಾರಕ್ಕೆ ಹೋಗಿದ್ದಾಗ ಬಿದ್ದು ರಕ್ತ ವಾಂತಿ ಮಾಡಿ ಪ್ರಜ್ಞೆ ಕಳೆದುಕೊಂಡಿದ್ದ. ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದುರೂ ಫಲಕಾರಿಯಾಗದೆ ಆತ ಮೃತಪಟ್ಟಿದ್ದ. ಅಂದು ಅಲ್ಲಿನ ವೈದ್ಯರು ಈತನಿಗೆ ಹೃದಯಾಘಾತವಾಗಿದೆ ಎಂದು ಹೇಳಿದ್ದರು. ನಂತರ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಹಲವು ದಿನಗಳು ಕಳೆದ ನಂತರ ಸೊಸೆ ಮತ್ತು ಮಾವನ ಮನೆಯವರು ವಿಷ ಹಾಕಿ ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಲೋಕೇಶ್ ಪೋಷಕರು ದೂರಿದ್ದಾರೆ.

ನನ್ನ ಮಗನ ಸಾವು ಸಹಜ ಸಾವಲ್ಲ ಕೊಲೆ ಎಂದು ಅನುಮಾನ ವ್ಯಕ್ತಪಡಿಸಿ ಲೋಕೇಶ್ ತಂದೆ ಕೃಷ್ಣಪ್ಪ ಜೈ ಭೀಮ್ ಅಖಿಲ ಭಾರತ ದಲಿತ ನಾಗರಿಕ ಸಮಿತಿ ಅಧ್ಯಕ್ಷ ನಂಜಪ್ಪ ಹಾಗೂ ಸದಸ್ಯರ ನೇತೃತ್ವದಲ್ಲಿ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೂತಿಟ್ಟ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪ್ರಯೋಗಾಲಯದಿಂದ ವರದಿ ಬಂದ ನಂತರ ಸತ್ಯಾಸತ್ಯತೆಗಳು ಹೊರಬೀಳಲಿದೆ. ತಹಸೀಲ್ದಾರ್ ನಾಗರಾಜ್, ಪುರಠಾಣೆ ಎಸ್‍ಐ ಸುಂದರ್ ಸಮ್ಮುಖದಲ್ಲಿ ತುಮಕೂರಿನ ಹಿರಿಯ ವೈದ್ಯ ಡಾ.ಎಸ್.ರುದ್ರಮೂರ್ತಿ ಮತ್ತು ಸಿಬ್ಬಂದಿ ಮರಣೋತ್ತರ ಪರೀಕ್ಷೆ ನಡೆಸಿದರು.

Sri Raghav

Admin