21 ಬಾರಿ ಎವರೆಸ್ಟ್ ಶಿಖರವೇರಿ ಹೊಸ ದಾಖಲೆ ಬರೆದ ಶೆರ್ಪಾ

Sherpa

ಕಠ್ಮಂಡು, ಮೇ 28-ವಿಶ್ವದ ಅತ್ಯಂತ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು 21 ಬಾರಿ ಆರೋಹಣ ಮಾಡುವ ಮೂಲಕ 47 ವರ್ಷದ ನೇಪಾಳಿ ಶೆರ್ಪಾ ಕಾಮಿ ರೀತಾ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಪರ್ವತವನ್ನು 21 ಸಲ ಏರಿದ ಮೂರನೇ ಪರ್ವತಾರೋಹಿ ಎಂಬ ದಾಖಲೆನ್ನು ನಿರ್ಮಿಸಿದ್ದಾರೆ. ಕಾಮಿ ರೀತಾ ಶೆರ್ಪಾ 8,848 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಪರ್ವತದ ನೆತ್ತಿಯ ಮೇಲೆ ನಿನ್ನೆ ಯಶಸ್ವಿಯಾಗಿ ಏರಿದರು ಎಂದು ಶಾಂಗ್ರೀಲಾ ನೇಪಾಳ ಚಾರಣ ಸಂಸ್ಥೆಯ ಆಡಳಿತ ನಿರ್ದೇಶಕ ಜಿಬಾನ್ ಗಿಮ್ರೆ ತಿಳಿಸಿದ್ದಾರೆ.ಈ ಹಿಂದೆ ನೇಪಾಳದವರೇ ಆದ ಅಪಾ ಶೆರ್ಪಾ ಮತ್ತು ಪೂರ್ಬಾ ತಾಕಿ ಶೆರ್ಪಾ 21 ಬಾರಿ ಎವರೆಸ್ಟ್ ಪರ್ವತಾರೋಹಣ ಮಾಡಿದ್ದರು. 1953ರಲ್ಲಿ ಎಡ್ಮಂಡ್ ಹಿಲರಿ ಮತ್ತು ತೇನ್‍ಸಿಂಗ್ ನೊರ್ಗೆ ಮೊದಲ ಬಾರಿಗೆ ಈ ಶಿಖರವೇರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin