ನಕಲಿ ಸಿಮ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ ವಂಚಿಸುತ್ತಿದ್ದ ಆರೋಪಿ ಅರೆಸ್ಟ್

Social Share

ಬೆಂಗಳೂರು, ಸೆ.30- ನಕಲಿ ಸಿಮ್ ಕಾರ್ಡ್ಗಳನ್ನು ಬಳಸಿಕೊಂಡು ಸಾಮಾಜಿಕ ತಾಣದಲ್ಲಿ ಖಾತೆಗಳನ್ನು ತೆರೆದು ಲಿಂಕ್ ಕಳಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಆರೋಪಿಯೊಬ್ಬನನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿ 222 ಸಿಮ್ ಕಾರ್ಡ್, 10 ಮೊಬೈಲ್, 10 ಡೆಬಿಟ್ಕಾರ್ಡ್ ಮತ್ತು ಪಾಸ್ಬುಕ್, ಚೆಕ್ಬುಕ್ಗಳನ್ನು ವಶಕ್ಕೆ ಪಡೆದಿದ್ದಾರೆ.

ಕೇರಳದ ಕಣ್ಣೂರಿನ ನಿವಾಸಿ ಶಾನೀದ್ ಅಬ್ದುಲ್ ಅಮೀದ್ (29) ಬಂಧಿತ ಆರೋಪಿ.ಸಾರ್ವಜನಿಕರಿಗೆ ಮೋಸವಾಗುತ್ತಿರುವ ಬಗ್ಗೆ ಮಾಹಿತಿ ಪಡೆದು ಆರೋಪಿಯ ಮನೆಗೆ ಹೋಗಿ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಟೆಲಿಗ್ರಾಂ ಜಾಲತಾಣದಲ್ಲಿ ಗ್ರೂಪ್ ವೊಂದನ್ನು ರಚಿಸಿ ಇದರಲ್ಲಿ ಕೆಲವು ವ್ಯಕ್ತಿಗಳು ನಕಲಿ ಸಿಮ್ಕಾರ್ಡ್ಗಳ ಮೂಲಕ ಬ್ಯಾಂಕ್ ಖಾತೆಗಳನ್ನು ಪಡೆದುಕೊಂಡು ಕೊರಿಯರ್ ಮುಖಾಂತರ ಈತನಿಗೆ ಪಾಸ್ಬುಕ್ ಹಾಗೂ
ಇತರೇ ದಾಖಲೆಗಳನ್ನು ಸಲ್ಲಿಸುತ್ತಿದ್ದರು.

ಆರೋಪಿ ಶಾನೀದ್ ಅಬ್ದುಲ್ ಅಮಿದ್ ತನ್ನ ಸ್ನೇಹಿತ ಮೊಹಮ್ಮದ್ ನಿಹಾಲ್ನನ್ನು ಇದರಲ್ಲಿ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ನಂತರ ಸಾರ್ವಜನಿಕರಿಗೆ ಲಿಂಕ್ ಕಳಿಸಿ ಅವರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ಹಣ ದೋಚುತ್ತಿದ್ದರು.

ಇದಲ್ಲದೆ, ಸಾರ್ವಜನಿಕರ ಕರೆಂಟ್ ಅಕೌಂಟ್ ಹಾಗೂ ಡೆಬಿಟ್ ಕಾರ್ಡ್ಗಳು, ಸಿಮ್ಕಾರ್ಡ್ಗಳನ್ನು ಪಡೆದುಕೊಂಡು ಕ್ರಿಪೊ್ಟೀ ಕರೆನ್ಸಿ ಟ್ರೇಡಿಂಗ್ ನಡೆಸುತ್ತಿದ್ದರು. ಇದರಿಂದ ಬರುವ ಲಾಭದ ಹಣವನ್ನು ನೀಡುವುದಾಗಿ ಅವರಿಗೆ ನಂಬಿಸುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಡಿಸಿಪಿ ಡಾ. ಅನೂಪ್ ಎ. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈಶಾನ್ಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿಗಳಾದ ಸಂತೋಷ್ ರಾಮ್ ಇನ್ಸ್ಪೆಕ್ಟರ್ ರಾಮನ್ ಗೌಡ, ರಘು, ಪಿಎಸ್ಐ ರಮೇಶ್ ಮತ್ತಿತರ ಸಿಬ್ಬಂದಿಗಳು ಪ್ರಕರಣದ ಪತ್ತೆ ಹಚ್ಚಿದ್ದಾರೆ.

Articles You Might Like

Share This Article