23 ಸಾವಿರ ರೂ.ವಿದ್ಯುತ್ ಬಿಲ್ ನೋಡಿ ಬಡ ಕಾರ್ಮಿಕನಿಗೆ ಶಾಕ್ ..!

Social Share

ಬೆಂಗಳೂರು,ಅ.31- ಕೂಲಿ-ನಾಲಿ ಮಾಡಿ ಬದುಕುತ್ತಿರುವ ಬಡ ಮನೆ ಮಾಲಿಕರೊಬ್ಬರಿಗೆ ಬೆಸ್ಕಾಂನವರು ಶಾಕ್ ನೀಡಿದ್ದಾರೆ.ಪ್ರತಿ ತಿಂಗಳು 200ರಿಂದ 300 ರೂ. ಕರೆಂಟ್ ಬಿಲ್ ಪಾವತಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಇದೀಗ ಬರೊಬ್ಬರಿ 22 ಸಾವಿರ ರೂ.ಗಳ ವಿದ್ಯುತ್ ಬಿಲ್ ಬಂದಿದೆ.

ಬಿಲ್ ಕಂಡೊಡನೆ ಗಾಬರಿಯಾದ ಕೂಲಿ ಕಾರ್ಮಿಕ ಮುಂದೇನೂ ಮಾಡೋದು ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.ಬನ್ನೇರುಘಟ್ಟ ರಸ್ತೆಯ ದೊಡ್ಡ ಕಮ್ಮನಹಳ್ಳಿಯಲ್ಲಿ ಶಿಟ್ ಮನೆಗೆ 22 ಸಾವಿರ ರೂ.ಗಳ ಕರೆಂಟ್ ಬಿಲ್ ಕಳುಹಿಸಲಾಗಿದೆ.

ಹಳೆ ಬಿಲ್ ನಲ್ಲಿ 219, 241,265 ರೂ ಬರ್ತಿದ್ದ ಕರೆಂಟ್ ಬಿಲ್ ದಿಢೀರ್ ಏರಿಕೆಯಾಗಿರುವುದನ್ನು ಕಂಡ ಮನೆ ಮಾಲೀಕ ತಪ್ಪಾಗಿ ಬಿಲ್ ಬಂದಿರಬಹುದು ಎಂದು ಬೆಸ್ಕಾಂ ಅಕಾರಿಗಳನ್ನು ಸಂಪರ್ಕಿಸಿದರೆ ಅವರು ಇಲ್ಲ ನೀವು ಬಿಲ್ ಪಾವತಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರಂತೆ.

ಇದುವರೆಗೂ ನಾನು 400 ರೂ.ಗಳ ಒಳಗೆ ಕರೆಂಟ್ ಬಿಲ್ ಕಟ್ತಿದ್ದೇ. ಆದರೆ, ಸೆಪ್ಟೆಂಬರ್ ತಿಂಗಳಿನಲ್ಲಿ 22 ಸಾವಿರ ರೂ. ಬಿಲ್ ಬಂದಿದೆ. ಸೆಪ್ಟೆಂಬರ್ ತಿಂಗಳಿಗೆ 22 ಸಾವಿರ ರೂಪಾಯಿ ಕರೆಂಟ್ ಬಿಲ್ ನೀಡಿದ ಬೆಸ್ಕಾಂನವರನ್ನು ಸಂಪರ್ಕಿಸಿದರೆ ಆಕ್ಟೋಬರ್ ತಿಂಗಳಿನ 500 ರೂ ಸೇರಿಸಿ 23 ಸಾವಿರ ರೂ. ಬಿಲ್ ಪಾವತಿಸಲೇಬೇಕು ಎಂದು ಹಠ ಹಿಡಿದಿದ್ದಾರೆ.

ಗುಜರಾತ್‍ನ ಮೊರ್ಬಿ ಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿಕೆ

ನಾನು ಇರೋದು ಶೀಟ್ ಮನೆಯಲ್ಲಿ ನಮ್ಮ ಕುಟುಂಬದವರು ಕರೆಂಟ್ ಬಳಕೆ ಮಾಡೋದು ಬಿಟ್ಟರೆ ನಾವು ಯಾವುದೇ ಕಮರ್ಷಿಯಲ್ ಕೆಲಸ ಮಾಡುತ್ತಿಲ್ಲ. ಹೀಗಿದ್ದರೂ 23 ಸಾವಿರ ರೂ. ಬಿಲ್ ಬರಲು ಹೇಗೆ ಸಾಧ್ಯ ಎಂದು ಮನೆ ಮಾಲಿಕ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಯಾರಿಗೋ ನೀಡಬೇಕಾದ ಬಿಲ್ ಅನ್ನು ನಮಗೆ ಕೊಟ್ಟಿರಬಹುದು ಎಂದು ನಾನು ತಿಳಿದುಕೊಂಡಿದ್ದೇ ಅಕಾರಿಗಳನ್ನು ಸಂಪರ್ಕಿಸಿದರೆ ಸಮಸ್ಯೆ ಸರಿಹೋಗಬಹುದು ಎಂದುಕೊಂಡಿದ್ದೇ ಆದರೆ, ಇದೀಗ ಬೆಸ್ಕಾಂ ಅಧಿಕಾರಿಗಳೇ ನೀವು ಪೂರ್ತಿ ಬಿಲ್ ಕಟ್ಟಲೆಬೇಕು ಎಂದು ಹೇಳುತ್ತಿರುವುದರಿಂದ ಏನು ಮಾಡೋದು ಎಂದೇ ತೋಚುತ್ತಿಲ್ಲ.

ನಾನು ಕೂಲಿ ನಾಲಿ ಬದುಕು ಸಾಗಿಸುತ್ತಿದ್ದೇನೆ 23 ಸಾವಿರ ರೂ. ಎಲ್ಲಿಂದ ತರಲಿ ಸ್ವಾಮಿ ಎಂದು ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಸಂಬಂಧಪಟ್ಟ ಹಿರಿಯ ಅಕಾರಿಗಳು ಅನ ಕೆಲಸಗಾರರು ಯಡವಟ್ಟಿನಿಂದ ಆಗಿರುವ ಸಮಸ್ಯೆಯನ್ನು ಬಗೆಹರಿಸಿ ಬಡ ಕಾರ್ಮಿಕನಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕಾಗಿದೆ.

Articles You Might Like

Share This Article