ಕೊರೋನಾ ಹಾಟ್‌ಸ್ಪಾಟ್ ಬೆಂಗಳೂರಲ್ಲಿ ಇಂದು 23409 ಹೊಸ ಕೇಸ್..!

Social Share

ಬೆಂಗಳೂರು,ಜ.19- ನಗರದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ವೀಕೆಂಡ್ ಸಂದರ್ಭದಲ್ಲಿ ಕೊಂಚ ಮಟ್ಟಿನ ಇಳಿಕೆ ಕಂಡು ಬಂದಿತ್ತು. ಆದರೆ, ಇದೀಗ ಮತ್ತೆ ಕೊರೊನಾ ಮಹಾಮಾರಿ ಆರ್ಭಟ ಜೋರಾಗಿದೆ.ಇಂದು ಒಂದೇ ದಿನ 23409 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.ಇದರಿಂದ ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ.
ನಗರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದರ ಜತೆಗೆ ಆಸ್ಪತ್ರೆಗೆ ಸೇರದೆ ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಹೋಂ ಐಸೋಲೇಷನ್‍ನಲ್ಲಿರುವವರಿಗೆ ಮೆಡಿಕಲ್ ಕಿಟ್ ನೀಡಲಾಗುತ್ತಿದೆ.
ಗೃಹಬಂಧನದಲ್ಲಿದ್ದು ಚಿಕಿತ್ಸೆ ಪಡೆಯುತ್ತಿರುವವರಿಗೆ ಕಾಫ್ ಸಿರಫ್ ಸೇರಿದಂತೆ 7 ಮಾತ್ರೆಗಳ ಕಿಟ್ ನೀಡಲಾಗುತ್ತಿದೆ.ಸೋಂಕು ಹೊಂದಿರುವವರು ಊಟಕ್ಕೆ ಮುನ್ನ ಯಾವ ಮಾತ್ರೆ ಸೇವಿಸಬೇಕು ಹಾಗೂ ಊಟದ ನಂತರ ಯಾವ ಮಾತ್ರೆ ಸೇವಿಸಬೇಕು ಎಂಬ ಬಗ್ಗೆ ಜಿಲ್ಲಾಡಳಿತ ಭಿತ್ತಿಪತ್ರ ಹೊರಡಿಸಿದೆ. ಸೋಂಕು ಚಿಕಿತ್ಸೆ ಜೊತೆಗೆ ಜ್ವರ ಮತ್ತು ಕೆಮ್ಮು ಇದ್ದರೆ ಯಾವ ಮಾತ್ರೆ ಸೇವಿಸಬೇಕು ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುತ್ತಿದೆ.

Articles You Might Like

Share This Article