ನವದೆಹಲಿ,ಮೇ 26- ಸಚಿವ ಸಂಪುಟದ ವಿಸ್ತರಣೆಯ ಕಸರತ್ತು ಬಹುತೇಕಗೊಂಡಿದ್ದು ಮುಕ್ತಾಯ ಹಂತದಲ್ಲಿದ್ದು, ನಾಳೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಸಂಭವನೀಯರ ಪಟ್ಟಿಯೊಂದಿಗೆ ಎರಡು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಕಸರತ್ತು ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗಿನ ಸಭೆಯ ಬಳಿಕ ಮುಕ್ತಾಯಗೊಳ್ಳಲಿದೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್‍ರಿಗೆ ಪತ್ರ ಬರೆದಿದ್ದು, ನಾಳೆ 11.45ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಅಳೆದು-ತೂಗಿ ಸಚಿವ ಸಂಪುಟದ ಸದಸ್ಯರ ಪಟ್ಟಿಯನ್ನು ಹೈಕಮಾಂಡ್ ಅಖೈರುಗೊಳಿಸಿದೆ. ಲಿಂಗಾಯತ ಸಮುದಾಯದಿಂದ ಈಗಾಗಲೇ ಎಂ.ಬಿ.ಪಾಟೀಲ್ ಸಚಿವರಾಗಿದ್ದು, ಹೆಚ್ಚುವರಿಯಾಗಿ ಈಶ್ವರ್ ಖಂಡ್ರೆ, ಲಕ್ಷ್ಮಿ ಹೆಬ್ಬಾಳ್ಕರ್, ಎಸ್.ಎಸ್.ಮಲ್ಲಿಕಾರ್ಜುನ್, ಡಾ.ಶರಣ ಪ್ರಕಾಶ್ ಪಾಟೀಲ್ ಜತೆಗೆ ಶಿವಾನಂದ ಪಾಟೀಲ್ ಅಥವಾ ಶರಣಬಸಪ್ಪ ದರ್ಶನಾಪೂರ್ ಅವರು ಸಚಿವರಾಗುವ ಸಾಧ್ಯತೆ ಇದೆ.
ಸಿಂಗಾಪುರದಲ್ಲಿ 5 ಮಿಲಿಯನ್ ವಂಚಿಸಿದ ಭಾರತೀಯನಿಗೆ 30 ತಿಂಗಳ ಸಜೆ
ಒಕ್ಕಲಿಗ ಕೋಟಾದಲ್ಲಿ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿದ್ದು, ಎನ್.ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ವೆಂಕಟೇಶ್, ಡಾ.ಎಂ.ಸಿ.ಸುಧಾಕರ್ ಸಚಿವರಾಗಲಿದ್ದು, ಮಾಗಡಿಯ ಹೆಚ್.ಸಿ.ಬಾಲಕೃಷ್ಣ, ಶೃಂಗೇರಿಯ ಟಿ.ಡಿ.ರಾಜೇಗೌಡ ಸೇರಿದಂತೆ ಹಲವರ ಹೆಸರುಗಳು ಚಾಲ್ತಿಯಲ್ಲಿವೆ.
ಇನ್ನೂ ಪರಿಶಿಷ್ಟ ಸಮುದಾಯದಲ್ಲಿ ಬಲಗೈ ಸಮುದಾಯದ ಡಾ.ಹೆಚ್.ಸಿ.ಮಹದೇವಪ್ಪ, ಎಡಗೈ ಸಮುದಾಯದ ಆರ್.ಬಿ.ತಿಮ್ಮಾಪೂರ್, ಲಂಬಾಣಿ ಸಮುದಾಯದ ರುದ್ರಪ ಲಮಾಣಿ, ಬೋವಿ ಸಮುದಾಯದ ಶಿವರಾಜ್ ತಂಗಡಗಿ, ಪರಿಶಿಷ್ಟ ಪಂಗಡದಿಂದ ವಾಲ್ಮೀಕಿ ಸಮುದಾಯದ ಕೆ.ಎನ್.ರಾಜಣ್ಣ ಅವರು ರೇಸ್‍ನಲ್ಲಿದ್ದಾರೆ.
ಅಲ್ಪಸಂಖ್ಯಾತರ ಸಮುದಾಯದಿಂದ ರಹೀಂಖಾನ್, ರೆಡ್ಡಿ ಸಮುದಾಯದಿಂದ ಎಚ್.ಕೆ.ಪಾಟೀಲ್, ಕುರುಬ ಸಮುದಾಯದ ಭೈರತಿ ಸುರೇಶ್, ಉಪ್ಪಾರ ಸಮುದಾಯದ ಪುಟ್ಟರಂಗಶೆಟ್ಟಿ, ಜೈನ ಸಮುದಾಯದ ಡಿ.ಸುಧಾಕರ್, ಮರಾಠ ಸಮುದಾಯ ಸಂತೋಷ್ ಲಾಡ್, ಈಡಿಗ ಸಮುದಾಯದಿಂದ ಮಧುಬಂಗಾರಪ್ಪ, ಮೊಗೇರ ಸಮುದಾಯದ ಮಂಕಾಳವೈದ್ಯ ಮತ್ತು ಈಡಿಗ ಸಮುದಾಯದ ಎನ್.ಎಸ್.ಬೋಸರಾಜ್ ಅವರು ಸಂಪುಟ ಸೇರುವ ಸಾಧ್ಯತೆಗಳಿವೆ.
ಇನ್ನೂ ಪ್ರಾದೇಶಿಕವಾರು ಬೆಳಗಾವಿಯಿಂದ ಗಣೇಶ್ ಹುಕ್ಕೇರಿ, ಲಕ್ಷ್ಮಣ್ ಸವದಿ, ಅಶೋಕ್ ಪಟ್ಟಣ್ ಆಕಾಂಕ್ಷಿಗಳಾಗಿದ್ದರು. ಅಶೋಕ್ ಪಟ್ಟಣ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸುವ ಸಾಧ್ಯತೆಗಳಿವೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆ
ಬಾಗಲಕೋಟೆಯಿಂದ ಎಚ್.ವೈ. ಮೇಟಿ ಮತ್ತು ವಿಜಯಾನಂದ ಕಾಶಪ್ಪನವರ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ವಿಜಯಪುರ ಜಿಲ್ಲೆಯಲ್ಲಿ ಅಪ್ಪಾಜಿ ನಾಡಗೌಡ, ಯಶವಂತರಾಯಗೌಡ, ಕಲಬುರಗಿ ಜಿಲ್ಲೆಯಿಂದ ಡಾ.ಅಜಯ್ ಧರ್ಮಸಿಂಗ್, ಖನಿಜ್ ಫಾತಿಮ, ಬಿ.ಆರ್.ಪಾಟೀಲ್, ಯಾದಗಿರಿ ಜಿಲ್ಲೆಯಿಂದ ರಾಜ ವೆಂಕಟ್ಟಪ್ಪನಾಯಕ್, ರಾಯಚೂರು ಜಿಲ್ಲೆಯಿಂದ ಬಸನಗೌಡ ತುರುವಿಹಾಳ್, ಹಂಪನಗೌಡ ಬಾದರ್ಲಿ, ಕೊಪ್ಪಳ ಜಿಲ್ಲೆಯಿಂದ ಬಸವರಾಜ ರಾಯರೆಡ್ಡಿ, ರಾಘವೇಂದ್ರ ಹಿಟ್ನಾಳ್, ಗದಗ ಜಿಲ್ಲೆಯಿಂದ ಜಿ.ಎಸ್.ಪಾಟೀಲ್, ಧಾರವಾಡ ಜಿಲ್ಲೆಯಿಂದ ಪ್ರಸಾದ್ ಅಬ್ಬಯ್ಯ, ಎನ್.ಎಚ್.ಕೋನರೆಡ್ಡಿ, ವಿನಯ್ ಕುಲಕರ್ಣಿ, ಉತ್ತರ ಕನ್ನಡ ಜಿಲ್ಲೆಯಿಂದ ಆರ್.ವಿ.ದೇಶಪಾಂಡೆ, ಬಳ್ಳಾರಿ ಜಿಲ್ಲೆಯಿಂದ ಇ. ತುಕಾರಾಂ, ಚಿತ್ರದುರ್ಗ ಜಿಲ್ಲೆಯಿಂದ ಎನ್.ವೈ.ಗೋಪಾಲಕೃಷ್ಣ,ಶಿವಮೊಗ್ಗ ಜಿಲ್ಲೆಯಿಂದ ಬಿ.ಕೆ.ಸಂಗಮೇಶ್, ಗೋಪಾಲಕೃಷ್ಣ ಬೇಳೂರು, ಚಿಕ್ಕಮಗಳೂರು ಜಿಲ್ಲೆಯಿಂದ ಟಿ.ಡಿ.ರಾಜೇಗೌಡ, ನಯನ ಮೋಟಮ್ಮ, ತುಮಕೂರು ಜಿಲ್ಲೆಯಿಂದ ಟಿ.ಬಿ.ಜಯಚಂದ್ರ, ಷಡಕ್ಷರಿ, ಕೋಲಾರದಿಂದ ಕೆ.ವೈ.ನಂಜೇಗೌಡ ಅವರು ಆಕಾಂಕ್ಷಿಯಾಗಿದ್ದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನೇಶ್ ಗುಂಡೂರಾವ್, ಎನ್.ಎ.ಹ್ಯಾರೀಶ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ಮೈಸೂರು ಜಿಲ್ಲೆಯಿಂದ ತನ್ವೀರ್‍ಸೇಠ್, ಕೊಡಗು ಜಿಲ್ಲೆಯಿಂದ ಎ.ಎಸ್.ಪೊನ್ನಣ್ಣ, ಹಾಸನದಿಂದ ಕೆ.ಎಂ.ಶಿವಲಿಂಗೇಗೌಡ, ಮಂಡದ್ಯದಿಂದ ಪಿ.ಎಂ.ನರೇಂದ್ರ ಸ್ವಾಮಿ, ರಾಮನಗರದಿಂದ ಹೆಚ್.ಸಿ.ಬಾಲಕೃಷ್ಣ ಅವರು ಆಕಾಂಕ್ಷಿಗಳಾಗಿದ್ದರು.
ಈಶ್ವರ ಖಂಡ್ರೆ
ಲಕ್ಷ್ಮಿ ಹೆಬ್ಬಾಳಕರ್
ಶಿವಾನಂದ ಪಾಟೀಲ್
ದರ್ಶನಾಪುರ
ಡಾ. ಎಚ್. ಸಿ. ಮಹಾದೇವಪ್ಪ
ಪಿರಿಯಾಪಟ್ಟಣ ವೆಂಕಟೇಶ್
ಎಸ್.ಎಸ್. ಮಲ್ಲಿಕಾರ್ಜುನ
ಬೈರತಿ ಸುರೇಶ್
ಕೃಷ್ಣ ಬೈರೇಗೌಡ
ರಹೀಂ ಖಾನ್
ಪುಟ್ಟರಂಗ ಶೆಟ್ಟಿ
ಚಿಂತಾಮಣಿ ಸುಧಾಕರ್
ಎಚ್.ಕೆ. ಪಾಟೀಲ್
ಚೆಲುವರಾಯಸ್ವಾಮಿ
ಮಧುಗಿರಿ ರಾಜಣ್ಣ
ಸಂತೋಷ್ ಲಾಡ್
ಮಧು ಬಂಗಾರಪ್ಪ
ಮಾಂಕಾಳ ವೈದ್ಯ
ಶಿವರಾಜ ತಂಗಡಗಿ
ತಿಮ್ಮಾಪುರ
ರುದ್ರಪ್ಪ ಲಮಾಣಿ
ಶರಣ ಪ್ರಕಾಶ್ ಪಾಟೀಲ್
ಭೋಸರಾಜು
ನಾಗೇಂದ್ರ
24 ministers, #oath, #Saturday, #Karnataka, #Cabinetexpansion,