ಕುಖ್ಯಾತ ವಾಹನ ಕಳ್ಳರ ಬಂಧನ, 24 ದ್ವಿಚಕ್ರ ವಾಹನಗಳ ವಶ

Social Share

ಬೆಂಗಳೂರು, ಡಿ.4- ಕೂಲಿಕಾರ್ಮಿಕರ ಶೆಡ್‍ಗಳಲ್ಲಿ ನೆಲಸಿ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಕುಖ್ಯಾತ ವಾಹನ ಕಳ್ಳರನ್ನು ಬಂಧಿಸಿರುವ ಜೆಪಿ ನಗರ ಠಾಣೆ ಪೊಲೀಸರು 16 ಲಕ್ಷ ಮೌಲ್ಯದ 24 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕೊಪ್ಪಳ ಮೂಲದ ರಘು ನಾಯ್ಕ್ ಅಲಿಯಾಸ್ ರಘು ಅಲಿಯಾಸ್ 220 ಮತ್ತು ದೌಲತ್‍ಖಾನ್ ಬಂಧಿತ ಆರೋಪಿಗಳು. ಕೊಪ್ಪಳದಿಂದ ನಗರಕ್ಕೆ ಬಂದ ನಂತರ ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ಬೆಳ್ಳಂದೂರು ಬಳಿಯ ಕೂಲಿ ಕಾರ್ಮಿಕರು ವಾಸಿಸುವ ಶೆಡ್‍ನಲ್ಲಿ ಉಳಿದುಕೊಂಡು ಬೆಂಗಳೂರಿನ ವಿವಿಧ ಜನನಿಬಿಡ ರಸ್ತೆಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಸೈಡ್ ಲಾಕ್‍ಗಳನ್ನು ಮುರಿದು ಆರೋಪಿಗಳು ವಾಹನಗಳನ್ನು ಕಳ್ಳತನ ಮಾಡುತ್ತಿದ್ದರು.

ಈ ವಾಹನಗಳನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಪ್ಪಳ, ಗದಗ, ರಾಯಚೂರು, ವಿಜಯನಗರ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಇವರುಗಳಿಂದ ಈಗ 16 ಲಕ್ಷ ಮೌಲ್ಯ ಬೆಲೆಬಾಳು ರಾಯಲ್ ಎನ್‍ಪಿಲ್ಡ್, ಬಜಾಜ್ ಪಲ್ಸರ್, ಅವೆಂಜರ್, ಹೊಂಡಾ ಆಕ್ಟಿವಾ, ಹೊಂಡಾ ಡಿಯೋ ಸೇರಿದಂತೆ 24 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗುಜರಾತ್‍ ಚುನಾವಣೆ : ನಾಳೆ 2ನೇ ಹಂತದ ಮತದಾನ

ಕಳೆದ ನವೆಂಬರ್ 12ರಂದು ಮಧ್ಯಾಹ್ನ 3 ಗಂಟೆ ಸಂದರ್ಭದಲ್ಲಿ ಹೊಂಡಾ ಆಕ್ಟಿವಾದಲ್ಲಿ ಬಂದ ವ್ಯಕ್ತಿಯೊಬ್ಬರು ಜೆಪಿ ನಗರ 3ನೇ ಹಂತದ ಮಾಂಡವಿ ಶೋ ರೂಂ ಪಕ್ಕದಲ್ಲಿ ನಿಲ್ಲಿಸಿ ಶೋ ರೂಂ ಒಳಗೆ ಹೋಗಿ ಕಾರಿನ ಇನ್ಸುರೆನ್ಸ್ ಬಿಲ್ ಕಟ್ಟಿ ಹೊರ ಬಂದು ನೋಡಿದಾಗ ಅವರು ನಿಲ್ಲಿಸಿದ್ದ ವಾಹನ ಕಾಣಿಸಲಿಲ್ಲ. ಅಕ್ಕಪಕ್ಕದವರನ್ನು ವಿಚಾರಿಸಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.

ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಶೋಭಯಾತ್ರೆಗೆ ಪೊಲೀಸರ ಬಿಗಿ ಬಂದೋಬಸ್ತ್

ನಂತರ ಕಳ್ಳತನವಾಗಿರುವ ಬಗ್ಗೆ ಗೊತ್ತಾಗಿ ಜೆಪಿ ನಗರ ಪೊಲೀಸ್ ಠಾಣೆಗೆ ಬಂದು ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಜೆಪಿ ನಗರ ಪೊಲೀಸರು ತನಿಖೆ ಕೈಗೊಂಡಾಗ ಈ ಕುಖ್ಯಾತ ವಾಹನ ಕಳ್ಳರು ಸಿಕ್ಕಿಬಿದ್ದಿದ್ದಾರೆ.

24 two-wheelers, thief, two, arrested,

Articles You Might Like

Share This Article