25 ಕೋಟಿ ರೂ. ಹಳೆ ನೋಟು ಪರಿವರ್ತನೆ : ಕೋಲ್ಕತಾ ಉದ್ಯಮಿ ಸೆರೆ

Spread the love

Arrest

ನವದೆಹಲಿ, ಡಿ.22-ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‍ನ ಉಚ್ಛಾಟಿತ ಸದಸ್ಯ ಶೇಖರ್ ರೆಡ್ಡಿ ಮತ್ತು ಕಾಳಧನದ ಮತ್ತೊಬ್ಬ ಕುಳ ರೋಹಿತ್ ಟಂಡನ್ ಅವರ ಭಾರೀ ಅಕ್ರಮ ವಹಿವಾಟು ಪ್ರಕರಣಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಬಲೆಗೆ ಮತ್ತೆ ದೊಡ್ಡ ತಿಮಿಂಗಲವೊಂದು ಬಿದ್ದಿದೆ.  ರೆಡ್ಡಿ ಮತ್ತು ಟಂಡನ್ ಪ್ರಕರಣಗಳಲ್ಲಿ ಇಪ್ಪತ್ತೈದು ಕೋಟಿ ರೂ. ಹಳೆ ನೋಟುಗಳನ್ನು ಹೊಸ ಕರೆನ್ಸಿಗೆ ಪರಿವರ್ತನೆ ಮಾಡಿದ್ದ ದುವ್ರ್ಯವಹಾರದಲ್ಲಿ ಕೋಲ್ಕತ ಮೂಲದ ಉದ್ಯಮಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪರಸ್ ಎಂ. ಲೋಧಾ ಬಂಧಿತ ಉದ್ಯಮಿಯಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಚೆನ್ನೈನಲ್ಲಿ ಇತ್ತೀಚಿಗೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೇಖರ್ ರೆಡ್ಡಿಗೆ ಸೇರಿದ 142 ಕೋಟಿ ರೂ. ಅಕ್ರಮ ಹಣವನ್ನು ಜಪ್ತಿ ಮಾಡಿದ್ದರು. ದೆಹಲಿಯಲ್ಲಿ ರೋಹಿತ್‍ಗೆ ಸೇರಿದ್ದ ವಕೀಲರ ಕಚೇರಿ ಮೇಲೆ ದಾಳಿ ನಡೆಸಿದಾಗ 13.5 ಕೋಟಿ ರೂ. ಕಾಳಧನ ಪತ್ತೆಯಾಗಿತ್ತು.
20 ಲಕ್ಷ ರೂ. ವಶ :  ಉತ್ತರಪ್ರದೇಶದ ಸಂಭಾಲ್‍ನಲ್ಲಿ ಕಾರೊಂದನ್ನು ತಡೆದ ಪೊಲೀಸರು ಇಬ್ಬರನ್ನು ಬಂಧಿಸಿ ಅದರಲ್ಲಿ 20 ಲಕ್ಷ ರೂ. ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin