ಪಾಸ್‍ಪೋರ್ಟ್ ಅಧಿಕಾರಿಗೆ 25 ಸಾವಿರ ದಂಡ

Social Share

ತಿರುವನಂತಪುರಂ,ಮಾ.4- ವಿಚ್ಛೇತ ಮಹಿಳೆಯೊಬ್ಬರು ತಮ್ಮ ಅಪ್ರಾಪ್ತ ವಯಸ್ಸಿನ ಮಗಳ ಪಾಸ್‍ಪೋರ್ಟ್‍ನ್ನು ಪುನಃ ಪಡೆಯಲು ನ್ಯಾಯಾಲಯದ ಕಟಕಟೆಯನ್ನು ಅನಿವಾರ್ಯವಾಗಿ ಏರುವಂತೆ ಮಾಡಿದ ಪಾಸ್‍ಪೋರ್ಟ್ ಅಧಿಕಾರಿಗೆ ಕೇರಳ ಹೈಕೋರ್ಟ್ 25 ಸಾವಿರ ದಂಡ ವಿಸಿದೆ.
ವೈವಾಹಿಕ ವ್ಯಾಜ್ಯದಲ್ಲಿರುವ ಅನೇಕ ಏಕಪೋಷಕರು ಸೂಕ್ತ ದಾಖಲೆಗಳನ್ನು ಸಲ್ಲಿಸಿದ ಬಳಿಕವೂ ತಮ್ಮ ಮಕ್ಕಳ ಪಾಸ್‍ಪೋರ್ಟ್‍ನ ಮರು ನೀಡಿಕೆಗಾಗಿ ಆದೇಶ ಪಡೆಯಲು ಬಲವಂತವಾಗಿ ನ್ಯಾಯಾಲಯದ ಕಟಕಟೆ ಏರುವಂತಾಗಿರುವುದನ್ನು ನ್ಯಾಯಮೂರ್ತಿ ಅಮಿತ್ ರಾಹುಲ್ ಅವರಿಗೆ ಏಕಸದಸ್ಯ ಪೀಠ ಗಮನಿಸಿತು.
ಪಾಸ್‍ಪೋರ್ಟ್‍ನ್ನು ನೀಡುವಂತಹ ಉನ್ನತ ಅಧಿಕಾರ ಸ್ಥಾನದಲ್ಲಿರುವ ಅಧಿಕಾರಿಗಳು ಅರ್ಜಿಗಳನ್ನು ವಾಸ್ತವಿಕ ಆಧಾರದಲ್ಲಿ ಉದಾರವಾಗಿ ಪರಿಗಣಿಸಬೇಕೆ ಹೊರತು ತಿರಸ್ಕರಿಸಬಾರದು ಎಂದು ನ್ಯಾಯಾಲಯ ಆದೇಶದ ವೇಳೆ ತಿಳಿಸಿದೆ ಅಲ್ಲದೆ ಘಟನೆಗೆ ಕಾರಣರಾದ ಪಾಸ್‍ಪೋರ್ಟ್ ಅಧಿಕಾರಿಗೆ 25 ಸಾವಿರ ದಂಡ ವಿಸಿದೆ.  ಅಲ್ಲದೆ ನ್ಯಾಯಾಲಯದ ಆದೇಶವನ್ನು ರಾಜ್ಯದ ಎಲ್ಲ ಪಾಸ್‍ಪೋರ್ಟ್ ಕಚೇರಿಗಳಿಗೂ ಕಳುಹಿಸುವಂತೆ ಸೂಚಿಸಿತು.

Articles You Might Like

Share This Article