ವಿದೇಶದಿಂದ ಬೆಂಗಳೂರಿಗೆ ಬಂದ 25 ಪ್ರಯಾಣಿಕರಿಗೆ ಕೊರೊನಾ

Social Share

ಬೆಂಗಳೂರು, ಜ.5- ವಿವಿಧ ದೇಶಗಳಿಂದ ನಗರಕ್ಕೆ ಆಗಮಿಸಿದ 25 ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿವಿಧ ದೇಶಗಳಿಂದ ಆಗಮಿಸಿದ ಪ್ರಯಾಣಿಕರ ಪೈಕಿ 25 ವ್ಯಕ್ತಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಲಂಡನ್‍ನಿಂದ ಆಗಮಿಸಿದ 8 ಪ್ರಯಾಣಿಕರಲ್ಲಿ, ಫ್ರಾನ್ಸ್‍ನ 7, ಲುಕ್ತಾಸ್‍ನ 3, ಖತಾರ್, ದುಬೈನ ತಲಾ ಇಬ್ಬರು, ಕುವೈತ್, ಫ್ರಾಂಕ್‍ಫರ್ಟ್ ಹಾಗೂ ಇಥಿಯೋಡ್‍ನಿಂದ ವಿಮಾನದ ಮೂಲಕ ಆಗಮಿಸಿದ ತಲಾ ಒಬ್ಬ ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.
ಕಳೆದ ಎಂಟತ್ತು ದಿನಗಳಿಂದ ವಿವಿಧ ದೇಶಗಳಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಪತ್ತೆಯಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಪ್ರತಿದಿನವೂ ಆಗಮಿಸುವ ಪ್ರಯಾಣಿಕರ ಪೈಕಿ ಕೆಲವರಲ್ಲಿ ಕೋವಿಡ್ ಸೋಂಕು ದೃಢಪಡುತ್ತಿದೆ. ಹೀಗಾಗಿ ನಗರದಲ್ಲಿ ಕೋವಿಡ್ ಸೋಂಕು ಹೆಚ್ಚಳಕ್ಕೆ ಇದು ಅವಕಾಶ ನೀಡಲಿದೆಯೇ ಎಂಬ ಭೀತಿ ಸಾರ್ವಜನಿಕರನ್ನು ಕಾಡತೊಡಗಿದೆ.

Articles You Might Like

Share This Article