255ಕ್ಕೆ ಇಂಗ್ಲೆಂಡ್ ಸರ್ವಪತನ

England

ವಿಶಾಖಪಟ್ಟಣ, ನ.19-ಬೆನ್‍ಸ್ಟ್ರೋಕ್ಸ್ (70 ರ, 157 ಎಸೆತ, 11 ಬೌ) ಜಾನ್ ಬೆರೆಸ್ಟೋ (53 ರ, 152 ಎಸೆತ, 5 ಬೌ) ಅರ್ಧ ಶತಕಗಳ ನೆರವಿನಿಂದ ಇಂಗ್ಲೆಂಡ್ ತನ್ನ ಪ್ರಥಮ ಇನ್ನಿಂಗ್ಸ್ ಅನ್ನು 255ಕ್ಕೆ ಕೊನೆಗೊಳಿಸಿದೆ. ಇಲ್ಲಿನ ವೈ.ಎಸ್.ರಾಜಶೇಖರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದ ಮೊದಲ ಅವಧಿಯಲ್ಲಿ ಆಟ ಮುಂದುವರೆಸಿದ ಆಂಗ್ಲ ತಂಡ ಫಾಲೋ ಆನ್ ಭೀತಿಯಿಂದ ಪಾರಾಗಿದೆ.  ನಿನ್ನೆ ಬೆನ್ ಸ್ಟ್ರೋಕ್ಸ್ 12 ಮತ್ತು ಬೆರೆಸ್ಟೋ 12 ಅಜೇಯರಾಗಿ ಇಂದೂ ಆಟ ಆರಂಭಿಸಿದ ಜೋಡಿಯು ಭಾರತ ಬೌಲರ್‍ಗಳನ್ನು ಸಮರ್ಥವಾಗಿ ಎದುರಿಸಿ
ತಂಡವನ್ನು ಕುಸಿತದಿಂದ ಪಾರು ಮಾಡಿದ್ದಾರೆ.  ಮೊದಲ ಟೆಸ್ಟ್‍ನಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್‍ನಲ್ಲೂ ಮಿಂಚಿನ ಪ್ರದರ್ಶನ ನೀಡಿದ ಆಲ್‍ರೌಂಡರ್ ಸ್ಟ್ರೋಕ್ಸ್ ಭಾರತದ
ಬೌಲರ್‍ಗಳ ಸವಾಲನ್ನು ಸಮರ್ಥವಾಗಿ ಎದುರಿಸಿ ಅರ್ಧ ಶತಕ ಬಾರಿಸಿದರು.

ಸ್ಟ್ರೋಕ್ಸ್‍ಗೆ ಸಾಥ್ ನೀಡಿದ ಬೆರೆಸ್ಟೋ ಅವರು ಉಪಯುಕತ್ತ 53 ರನ್ ದಾಖಲಿಸಿ ತಂಡಕ್ಕೆ ಆಸರೆಯಾದರು. 6ನೇ ವಿಕೆಟ್ ಜೊತೆಯಾಟದಲ್ಲಿ 110 ರನ್ ದಾಖಲಿಸಿ ಫಾಲೋ ಆನ್ ಭೀತಿಯಲ್ಲಿದ್ದ ತಂಡವನ್ನು ಪಾರು ಮಾಡಿದ್ದಾರೆ.  53 ರನ್ ಗಳಿಸಿ ಆಟವಾಡುತ್ತಿದ್ದ ಬೆರೆಸ್ಟೋ ಅವರಿಗೆ ಉಮೇಶ್ ಯಾದವ್ ಪೆವಿಲಿಯನ್‍ಗೆ ದಾರಿ ತೋರಿಸಿದರೆ, ಸ್ಟ್ರೋಕ್ಸ್ (70), ಅಶ್ವಿನ್ ಅವರ ಚುರುಕಿನ ಸ್ಪಿನ್ ಬಲೆಗೆ ಎಲ್‍ಬಿಡಬ್ಲ್ಯೂ ಆದರು.  ಭೋಜನ ವಿರಾಮದ ನಂತರ ವಿರಾಟ್ ಕೊಹ್ಲಿ ತನ್ನ ಬೌಲರ್‍ಗಳನ್ನು ಬದಲಾಯಿಸಿ ನಡೆಸಿದ ತಂತ್ರಗಾರಿಕೆ ಯಶಸ್ವಿಯಾಗಿ
ಆಂಗ್ಲ ಪಡೆ ಒಂದೊಂದೆ ವಿಕೆಟ್‍ಗಳು ಉರುಳಿತು.

ಅಂತಿಮವಾಗಿ 102 ಓವರ್‍ಗಳಲ್ಲಿ 255 ರನ್‍ಗಳಿಗೆ ಇಂಗ್ಲೆಂಡ್ ಸರ್ವಪತನ ಕಂಡಿತು. ಈ ಮೂಲಕ ಭಾರತ 200 ರನ್‍ಗಳ ಮುನ್ನಡೆ ಸಾಧಿಸಿತು. ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ನೀಡಿದ ಅಶ್ವಿನ್ 5 ವಿಕೆಟ್ ಪಡೆದು ಮಿಂಚಿದರೆ, ಶಮಿ, ಉಮೇಶ್ ಯಾದವ್, ಜಡೇಜಾ ಮತ್ತು ಜಯಂತ್ ಯಾದವ್ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin