ಗೋವಾ ಚುನಾವಣೆ ಉಸ್ತುವಾರಿಗೆ 26 ಮುಖಂಡರನ್ನು ವೀಕ್ಷಕರನ್ನಾಗಿ ನೇಮಕ

Social Share

ಪಣಜಿ, ಜ.25- ಗೋವಾ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈ ಕಮೆಂಡ್ ಕರ್ನಾಟಕದ 16 ಮಂದಿಯನ್ನು ಒಳಗೊಂಡಂತೆ 26 ಮುಖಂಡರನ್ನು ವೀಕ್ಷಕರನ್ನಾಗಿ ನಿಯೋಜನೆ ಮಾಡಿದೆ.
ರಾಜ್ಯದ ಮಾಜಿ ಸಚಿವರಾದ ಆರ್‍.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್‍, ಕೃಷ್ಣಬೈರೇಗೌಡ, ಸತೀಶ್ಜಾಮರಕಿಹೊಳಿ, ಸಂತೋಷ್ಲಾ ಡ್‍, ರುದ್ರಪ್ಪ ಲಮಾಣಿ, ಶಾಸಕರಾದ ಡಾ.ಅಂಜಲಿ ನಿಂಬಾಳ್ಕರ್‍, ಲಕ್ಷ್ಮೀ ಹೆಬ್ಬಾಳ್ಕರ್‍, ರಿಜ್ಞಾನ್ಅರ್ಷದ್, ಶ್ರೀನಿವಾಸ ಮಾನೆ, ಗಣೇಶ್ಹುಮಕ್ಕೇರಿ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಸತೀಶ್ಸೈದಲ್‍,
ವಿಧಾನ ಪರಿಷತ್ನು ಮಾಜಿ ಸದಸ್ಯ ಐವಾನ್ಡಿಶಸೋಜಾ, ವಿಜಯ್ಸಿಂಳಗ್‍, ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್ಅ್ವರು ಚುನಾವಣಾ ಉಸ್ತುವಾರಿ ತಂಡದಲ್ಲಿದ್ದಾರೆ. ಉಳಿದಂತೆ ಮಹಾರಾಷ್ಟ್ರದ ಪ್ರದೇಶ ಕಾಂಗ್ರೆಸ್‍ ಅಧ್ಯಕ್ಷ ನಾನಾ ಪಟೋಲೆ ಸೇರಿದಂತೆ ನೆರೆ ರಾಜ್ಯಗಳ ಅನೇಕ ನಾಯಕರು ವೀಕ್ಷಕರ ತಂಡದಲ್ಲಿದ್ದಾರೆ.
ಕರ್ನಾಟಕದ ಮಾಜಿ ಸಚಿವ ದಿನೇಶ್‍ ಗುಂಡೂರಾವ್‍ ರಾಜ್ಯ ಕಾಂಗ್ರೆಸ್‍ ನ ಉಸ್ತುವಾರಿ ನಾಯಕರಾಗಿದ್ದಾರೆ. ಬೆಳಗಾವಿಯ ಗಡಿಗೆ ಹೊಂದಿಕೊಂಡಿರುವ ಗೋವಾ ರಾಜ್ಯ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ.

Articles You Might Like

Share This Article