27 ವಾರಗಳ ಗರ್ಭ ತೆಗೆಸಲು ಮಹಿಳೆಗೆ ಸುಪ್ರೀಂಕೋರ್ಟ್ ನಕಾರ

Pregnent--01

ನವದೆಹಲಿ, ಮಾ.27-ತೀವ್ರ ದೈಹಿಕ ನ್ಯೂನತೆಗಳ ಲಕ್ಷಣ ಹೊಂದಿದ್ದ 27 ವಾರಗಳ ತನ್ನ ಗರ್ಭವನ್ನು ತೆಗೆದು ಹಾಕಲು ಮಹಿಳೆಯೊಬ್ಬರಿಗೆ ಅನುಮತಿ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.   ಮಹಿಳೆಯನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯಕೀಯ ಮಂಡಳಿಯ ವರದಿ ಆಧಾರದ ಮೇಲೆ ನ್ಯಾಯಮೂರ್ತಿಗಳಾದ ಎಸ್.ಎ.ಬಾಬ್ಡೆ ಮತ್ತು ಎಲ್. ನಾಗೇಶ್ವರ ರಾವ್ ಅವರನ್ನು ಒಳಗೊಂಡ ಪೀಠವು ಗರ್ಭಪಾತಕ್ಕೆ ಅನುಮತಿ ನೀಡಲು ಸಹಮತ ವ್ಯಕ್ತಪಡಿಸಿಲ್ಲ.

ಈ ಹಂತದಲ್ಲಿ ಮಹಿಳೆಯ ಗರ್ಭಪಾತಕ್ಕೆ ಅವಕಾಶ ನೀಡಿದರೆ ಶಿಶುವು ಜೀವಂತವಾಗಿ ಜನಿಸಬಹುದು ಎಂಬ ವೈದ್ಯರ ಅಭಿಪ್ರಾಯವನ್ನು ನ್ಯಾಯಾಲಯ ಉಲ್ಲೇಖಿಸಿದೆ. ಮಹಿಳೆಯ ದೇಹ ಸ್ಥಿತಿ ಸಾಮಾನ್ಯವಾಗಿದೆ ಹಾಗೂ ಆಕೆಯ ಆರೋಗ್ಯಕ್ಕೆ ಯಾವುದೇ ಗಂಡಾಂತರವಿಲ್ಲ. ಹೀಗಾಗಿ ಗರ್ಭ ತೆಗೆಸಲು ಅರ್ಜಿದಾರರಿಗೆ (ಮಹಿಳೆ) ನಿರ್ದೇಶನ ನೀಡಲು ನಾವು ಪರಿಗಣಿಸುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin