ಬೆಳಗಾವಿ, ಡಿ.29-ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಒಟ್ಟು 27,470 ಶಾಲಾ ಕೊಠಡಿಗಳು ದುರಸ್ತಿಯಾಗಬೇಕಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪ್ರಸ್ತುತ 42.239 ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಸಣ್ಣ ಮಟ್ಟದ 13,107, ದೊಡ್ಡ ಮಟ್ಟದ 14,373 ಸೇರಿದಂತೆ ಒಟ್ಟು 27,480ಶಾಲೆಗಳು ದುರಸ್ತಿಯಾಗಬೇಕೆಂದು ತಿಳಿಸಿದರು.
ರಾಜ್ಯದಲ್ಲಿ 4,819 ಪ್ರೌಢಶಾಲೆಗಳಿವೆ ಇದರಲ್ಲಿ ಸಣ್ಣ ಪ್ರಮಾಣದ್ದು 1365, ದೊಡ್ಡ ಮಟ್ಟದ ದುರಸ್ತಿ 1056 ಸೇರಿದಂತೆ 2421 ಪ್ರೌಢಶಾಲೆಗಳನ್ನು ದುರಸ್ತಿ ಮಾಡಬೇಕು. ಇದರಲ್ಲಿ ಶೇ.60ರಷ್ಟು ದರುಸ್ತಿ ಕಾರ್ಯ ಆಗಬೇಕಾಗಿದೆ ಎಂದು ಮಾಹಿತಿ ನೀಡಿದರು.
7 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ಕಂದಾಯ ವ್ಯಾಪ್ತಿಗೆ
ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳ ದುರಸ್ತಿಗೆ ಒಟ್ಟು 2.68.203 ಲಕ್ಷ ಕೊಟ್ಟಿದ್ದರು. ಯುಡಿಐಎಸ್ ಮತ್ತು ಎಸ್ಎಟಿಎಸ್ ವರದಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಕೊಠಡಿಗಳ ದುರಸ್ತಿಗಳು ಆಗಾಗ ಬರುತ್ತಲೇ ಇರುತ್ತವೆ.
ಆಯಾ ಕಾಲದಲ್ಲಿ ಇವುಗಳನ್ನು ರಿಪೇರಿ ಮಾಡಿದರೆ ಹೆಚ್ಚು ದುರಸ್ತಿ ಬರುವುದಿಲ್ಲ. 2013ರಿಂದ 18ರವರೆಗೆ 4ವರ್ಷಗಳ ಕಾಲ ದುರಸ್ತಿ ನಡೆಸಲಿಲ್ಲ. 2018-19ರಿಂದ ದುರಸ್ತಿ ಕಾರ್ಯ ಆರಂಭಿಸಲಾಗಿದೆ. 3500 ದುರಸ್ತಿಯಲ್ಲಿ 3ಸಾವಿರ ಹೊಸ ಕಟ್ಟಡಗಳನ್ನು ಕಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಪ್ರಿಯಾಂಕ್ ಖರ್ಗೆ, ಶಾಲಾ ಕಟ್ಟಡಗಳಿಗೆ ದಾರಾಳವಾಗಿ ಕೇಸರಿ ಬಣ್ಣ ಬಳಿಯಿರಿ. ಅದಕ್ಕೇನು ನಮ್ಮ ತಕರಾರು ಇಲ್ಲ. ಆದರೆ, ಮೊದಲು ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಿ ಎಂದು ಮನವಿ ಮಾಡಿದರು.
ಹೊಸ ವರ್ಷಾಚರಣೆಗೆ ಕಟ್ಟೆಚ್ಚರ: 10,000 ಪೊಲೀಸರ ಕಣ್ಗಾವಲು
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕೇಸರಿ ಬಣ್ಣ ಬಳಿದಾಗ ಎಲ್ಲರ ಕಣ್ಣು ಕೆಂಪಾಗುತ್ತದೆ. ಹಸಿರು ಬಣ್ಣ ಬಳಿದಾಗ ಇಲ್ಲವೇ ಪಠ್ಯ ಪುಸ್ತಕದಲ್ಲಿ ಟಿಪ್ಪುಸುಲ್ತಾನ್ ಸೇರಿಸಿದಾಗ ಯಾರು ಮಾತನಾಡುವುದಿಲ್ಲ ಎಂದು ತಿರುಗೇಟು ನೀಡಿದರು.
27 thousand, school rooms, damaged, rain, Minister Nagesh,