ನವದೆಹಲಿ, ಫೆ.15- ಭಾರತದಲ್ಲಿ ಕಳೆದ 44 ದಿನಗಳಲ್ಲೇ ಕಡಿಮೆ ಅಂದರೆ 30,000 ದೈನಿಕ ಕೊರೊನಾ ಪ್ರಕರಣಗಳು ಹೊಸದಾಗಿ ದೃಢಪಟ್ಟಿದ್ದು ದೇಶದ ಒಟ್ಟಾರೆ ಕೋವಿಡ್-19 ಸೋಂಕಿನ ಪ್ರಕರಣಗಳು 4,26,92 943ಕ್ಕೆ ತಲುಪಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳ ಅವಯಲ್ಲಿ 347 ಮಂದಿ ಕೊರೊನಾದಿಂದ ಮೃತಪಟ್ಟಿದ್ದು , ಒಟ್ಟಾರೆ ಕೋವಿಡ್-19 ಮರಣ ಪ್ರಮಾಣ 5,09,358ಕ್ಕೆ ಏರಿಕೆಯಾಗಿದೆ. ಸತತ 9 ದಿನಗಳಿಂದ ದೈನಿಕ ಕೋವಿಡ್-19 ಪ್ರಕರಣಗಳು ಒಂದು ಲಕ್ಷಕ್ಕಿಂತ ಕಡಿಮೆ ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,23,127ಕ್ಕೆ ಇಳಿದಿದ್ದು , ಒಟ್ಟಾರೆ ಸೋಕಿನ ಪೈಕಿ ಶೇ.0.99ರಷ್ಟಿದೆ.
ಕೋವಿಡ್‍ನಿಂದ ರಾಷ್ಟ್ರೀಯ ಚೇತರಿಕೆ ಪ್ರಮಾಣ ಇನ್ನಷ್ಟು ಸುಧಾರಿಸಿದ್ದು ಶೇ.97.82ಕ್ಕೇರಿದೆ. ದೈನಿಕ ಪಾಸಿಟಿವಿಟಿ ದರ ಶೇ.2.23ರಷ್ಟಿದ್ದು ವಾರದ ಪಾಸಿಟಿವಿಟಿ ದರ 3.62 ಪ್ರತಿಶತದಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಕಳೆದ 24 ಗಂಟೆಗಳ ಅವಯಲ್ಲಿ 55,755ರಷ್ಟು ಇಳಿಕೆ ಕಂಡಿದೆ.
ಕೋವಿಡ್‍ನಿಂದ ಚೇತರಿಸಿಕೊಂಡವರ ಸಂಖ್ಯೆ 4,17,60,458ಕ್ಕೇರಿದೆ.
ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕಾ ಅಭಿಯಾನದಡಿ ದೇಶದಲ್ಲಿ ಹಾಕಲಾದ ಒಟ್ಟು ಲಸಿಕೆ ಡೋಸ್‍ಗಳು 173.42 ಕೋಟಿ ದಾಟಿವೆ ಎಂದು ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ 8 ಗಂಟೆಗೆ ಅಂಕಿ-ಅಂಶ ನೀಡಿದೆ.
