ಬಂಗಾಳ ಸಚಿವರ ಆಪ್ತೆ ಮನೆಯಲ್ಲಿ 28 ಕೋಟಿ ರೂ, ಕೆಜಿಗಟ್ಟಲೆ ಚಿನ್ನ ವಶ

Social Share

ಕೋಲ್ಕತ್ತಾ, ಜುಲೈ 28- ಬಂಧಿತ ಪಶ್ಚಿಮ ಬಂಗಾಳದ ಕೈಗಾರಿಕಾ ಸಚಿವ ಪಾರ್ಥ ಚಟರ್ಜಿ ಅವರ ನಿಕಟವರ್ತಿಯಾಗಿರುವ ಅರ್ಪಿತಾ ಮುಖರ್ಜಿ ಅವರ ಅಪಾರ್ಟ್‍ಮೆಂಟ್‍ನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತಪಾಸಣೆ ನಡೆಸಿದಾಗ 27.9 ಕೋಟಿ ರೂಪಾಯಿ ನಗದು, ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.

ಬೆಲ್ಘಾರಿಯಾದಲ್ಲಿನ ಅಪಾರ್ಟ್‍ಮೆಂಟ್‍ನಲ್ಲಿ ಬುಧವಾರ ದಾಳಿ ನಡೆಸಿದಾಗ ನಗದು ರಾಶಿ ಕಂಡುಬಂತು ತಡ ರಾತ್ರಿವರೆಗೂ ಎಣಿಕೆಯ ನಂತರ 27.90 ಕೋಟಿ ರೂ, ಸುಮಾರು 1ಕೆಜಿಯಷ್ಟು ಚಿನ್ನಾಭರಣಗಳ ವಶಕ್ಕೆ ಪಡಯಲಾಗಿದೆ ಎಂದು ಇಡಿ ಅಧಿಕಾರಿಗಳು ಇಂದು ತಿಳಿಸಿದ್ದಾರೆ.

ದಕ್ಷಿಣ ಕೋಲ್ಕತ್ತಾದ ಟೋಲಿಗಂಜ್ ಪ್ರದೇಶದಲ್ಲಿ ಮುಖರ್ಜಿ ಅವರ ಮತ್ತೊಂದು ಫ್ಲಾಟ್ನಿಂದ 21 ಕೋಟಿ ರೂಪಾಯಿಗೂ ಹೆಚ್ಚು ನಗದು, ಆಭರಣ ಮತ್ತು ವಿದೇಶಿ ವಿನಿಮಯವನ್ನು ವಶಪಡಿಸಿಕೊಂಡ ಐದು ದಿನಗಳ ನಂತರ ಮತ್ತೆ ಭಾರಿ ಹಣ ಮತ್ತು ಚಿನ್ನ ಪತ್ತೆಯಾಗಿದೆ.

ಒಟ್ಟಾರೆಯಾಗಿ ಇದುವರೆಗೆ ಸುಮಾರು 50 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕೋಲ್ಕತ್ತಾದ ರಾಜ್ದಂಗಾ ಮತ್ತು ನಗರದ ಉತ್ತರದ ಅಂಚಿನಲ್ಲಿರುವ ಬೆಲ್ಘಾರಿಯಾದಲ್ಲಿನ ವಿವಿಧ ಆಸ್ತಿಗಳ ಮೇಲೆ ಇಡಿ ಅಧಿಕಾರಿಗಳು ಸಂಘಟಿತ ದಾಳಿ ನಡೆಸಲಾಗಿತ್ತು.

ವಿಚಾರಣೆ ವೇಳೆ ಮುಖರ್ಜಿ ಅವರು ಆಸ್ತಿಗಳ ಬಗ್ಗೆ ಇಡಿಗೆ ಮಾಹಿತಿ ನೀಡಿದ್ದಾರೆ, ಬೆಲ್ಘಾರಿಯಾದ ರತ್ತಲಾ ಪ್ರದೇಶದ ಎರಡು ಫ್ಲಾಟ್‍ಗಳನ್ನು ತೆರೆಯಲು ಕೀಲಿಗಳನ್ನು ಗುರುತಿಸಲು ಸಾಧ್ಯವಾಗದ ಕಾರಣ ಬಾಗಿಲು ಒಡೆಯಬೇಕಾಯಿತು ಎಂದು ಅವರು ತಿಳಿಸಿದ್ದಾರೆ.

ಶೋಧದ ವೇಳೆ ಹಲವಾರು ಪ್ರಮುಖ ದಾಖಲೆಗಳು ಕಂಡುಬಂದಿವೆ ಕಲ್ಕತ್ತಾ ಹೈಕೋರ್ಟ್ ನಿರ್ದೇಶನದಂತೆ ಸಿಬಿಐ, ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ ಶಿಫಾರಸ್ಸಿನ ಮೇರೆಗೆ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಗ್ರೂಪï-ಸಿ ಮತ್ತು ಡಿ ಸಿಬ್ಬಂದಿ ಮತ್ತು ಶಿಕ್ಷಕರ ನೇಮಕಾತಿಯಲ್ಲಿ ನಡೆದ ಆರೋಪದ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿದೆ. . ಇಡಿ ಹಗರಣದಲ್ಲಿ ಹಣದ ಜಾಡು ಹಿಡಿದು ಆಕ್ರಮ ಬಯಲಿಗೆಳೆಯುತ್ತಿದೆ.

Articles You Might Like

Share This Article