ಬೆಂಗಳೂರು,ಜ.3- ನಗರದ ಎಲ್ಲಾ ಶಾಲಾ ಕಾಲೇಜು ವ್ಯಾಪ್ತಿಗಳಲ್ಲಿ ಇಂದಿನಿಂದ 15 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 221 ಶಾಲೆಗಳು ಹಾಗೂ 59 ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡೋದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
221 ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 30337 ಶಾಲಾ ಮಕ್ಕಳು ಹಾಗೂ 59 ಕಾಲೇಜುಗಳಲ್ಲಿರುವ 17644 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗುವುದು. ಬೊಮ್ಮನಹಳ್ಳಿ ವಲಯದಲ್ಲಿರುವ 21 ಶಾಲೆಗಳ 3185 ಮಕ್ಕಳು, 2 ಕಾಲೇಜುಗಳ 665 ವಿದ್ಯಾರ್ಥಿಗಳು, ದಾಸರಹಳ್ಳಿ ವಲಯದ 10 ಶಾಲೆಗಳ 3000 ಶಾಲಾ ಮಕ್ಕಳು ಹಾಗೂ 2 ಕಾಲೇಜುಗಳ 400 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲು ಗುರುತಿಸಲಾಗಿದೆ.
ಪೂರ್ವ ವಲಯದ 40 ಶಾಲೆಗಳ 3669 ಹಾಗೂ 10 ಕಾಲೇಜುಗಳ 600 ವಿದ್ಯಾರ್ಥಿಗಳು, ಮಹದೇವಪುರದ 24 ಶಾಲೆಗಳ 3012 ಹಾಗೂ 3 ಕಾಲೇಜುಗಳ 783 ವಿದ್ಯಾರ್ಥಿಗಳಿಗೂ ವ್ಯಾಕ್ಸಿನ್ ಹಾಕಲಾಗುವುದು.
ಆರ್.ಆರ್.ನಗರದ 15 ಶಾಲೆಗಳ 5511, 7 ಕಾಲೇಜುಗಳ 4508 ವಿದ್ಯಾರ್ಥಿಗಳು, ದಕ್ಷಿಣ ವಲಯದ 34 ಶಾಲೆಗಳ3744, 8 ಕಾಲೇಜುಗಳ 3813, ಪಶ್ಚಿಮ ವಲಯದ 49 ಶಾಲೆಗಳ 4337, 17 ಕಾಲೇಜುಗಳ 3658, ಯಲಹಂಕದ 28 ಶಾಲೆಗಳ 3879, 19 ಕಾಲೇಜುಗಳ 3217 ವಿದ್ಯಾರ್ಥಿಗಳಿಗೂ ಲಸಿಕೆ ಹಾಕಲಾಗುವುದು.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 280 ಶಾಲಾಕಾಲೇಜುಗಳ 47981 ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ವ್ಯಾಕ್ಸಿನ್ ನೀಡಲಾಗುತ್ತದೆ ಎಂದು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
