ಭಾರತದಲ್ಲಿ ಕೊರೊನಾ ಕೇಕೆ, 24 ಗಂಟೆಯಲ್ಲಿ 2,82,970 ಕೇಸ್, 441 ಸಾವು..!

Social Share

ನವದೆಹಲಿ, ಜ.19- ಕಳೆದ 24 ಗಂಟೆಗಳಲ್ಲಿ 2,82,970 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಕೋವಿಡ್-19 ಪ್ರಕರಣಗಳ ಸಂಖ್ಯೆ 3,79,01,241ಕ್ಕೇರಿದೆ. ಇವುಗಳ ಪೈಕಿ 8961 ಓಮಿಕ್ರಾನ್ ರೂಪಾಂತರಿಯ ಪ್ರಕರಣಗಳಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 18,31,000ಕ್ಕೆ ಹೆಚ್ಚಳಗೊಂಡಿದೆ. ಇದು ಕಳೆದ 232 ದಿನಗಳಲ್ಲೇ ಅತ್ಯಕ ಪ್ರಮಾಣವಾಗಿದೆ. ಕಳೆದ ವರ್ಷದ ಮೇ 31ರಂದು 18,95,520 ಸಕ್ರಿಯ ಪ್ರಕರಣಗಳಿದ್ದವು.
ನಿನ್ನೆ ಒಂದೇ ದಿನದಲ್ಲಿ 441 ಜನರು ಕೊರೊನಾದಿಂದ ಮೃತಪಟ್ಟಿದ್ದು, ಒಟ್ಟಾರೆ ಕೋವಿಡ್ ಮರಣ ಸಂಖ್ಯೆ 4,87,202ಕ್ಕೆ ಏರಿದೆ.
ಮಂಗಳವಾರದಿಂದ ಓಮಿಕ್ರಾನ್ ಪ್ರಕರಣಗಳಲ್ಲಿ ಶೇ.09.79ರಷ್ಟು ಹೆಚ್ಚಳವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಪ್ರತಿಯೊಂದು ಮಾದರಿಗಳ ಜಿನೋಮ್ ಸೀಕ್ವೆನ್ಸಿಂಗ್ ನಡೆಸಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಆದರೆ, ಪ್ರಸ್ತುತ ಅಲೆಯಲ್ಲಿ ಓಮಿಕ್ರಾನ್ ರೂಪಾಂತರಿ ಪ್ರಾಬಲ್ಯ ಸ್ಥಾಪಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Articles You Might Like

Share This Article