ಹಳಿ ತಪ್ಪಿದ ಗೂಡ್ಸ್ ರೈಲು

Social Share

ನಾಗ್ಪುರ. ಅ,24- ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಹಳಿತಪ್ಪಿದ್ದು ಇದರಿಂದ ಈ ಭಾಗದಲ್ಲಿ ರೈಲು ಸಂಚಾರ ವ್ಯತ್ಯಯವಾಗಿದೆ. ಸುಮಾರು ಇಪ್ಪತ್ತು ವ್ಯಾಗನ್‍ಗಳು ಹಳಿಯಿಂದ ಉರುಳಿದ್ದು, ಇದರಿಂದಾಗಿ ಅನೇಕ ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ, ಕೆಲವು ರೈಲಿನ ಮಾರ್ಗವನ್ನು ಬದಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ನಾಗ್ಪುರ ವಿಭಾಗದ ವಾರ್ಧಾ-ಬಡದೀರಾ ವಿಭಾಗದ ಮಲ್ಖೇಡ್ ಮತ್ತು ತಿಮಟ್ಲಾ ನಿಲ್ದಾಣಗಳ ನಡುವೆ ಕಳೆದ ರಾತ್ರಿ 11.20 ಕ್ಕೆ ಈ ಘಟನೆ ನಡೆದಿದ್ದು , ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ , ಸುಮಾರು 20ಕ್ಕೂ ಹೆಚ್ಚು ರೈಲಿನ ಮಾರ್ಗ ಬದಲಿಸಲಾಗಿದೆ.

ಸ್ಪರ್ಧೆಯಿಂದ ಹಿಂದೆ ಸರಿದ ಜಾನ್ಸನ್‌, ರಿಷಿ ಬ್ರಿಟನ್‍ ಪ್ರಧಾನಿಯಾಗೋದು ಫಿಕ್ಸ್

ವಿವಿದೆಢೆಯಿಂದ ಬಂದ ರೈಲನ್ನು ನಾಗ್ಪುರ ಮತ್ತು ಇತರ ಸ್ಥಳಗಳಲ್ಲಿ ಕೊನೆಗೊಳಿಸಲಾಗಿದೆ. ಗೂಡ್ಸ್ ರೈಲಿನ ಬೊಗಿಗಳನ್ನು ಹಳಿಯಿಂದ ಪಕ್ಕಕ್ಕೆ ಸರಿಸಲಾಗಿದ್ದು ಬಹು ಬೇಗ ರೈಲು ಸಂಚಾರ ಆರಂಭವಾಗಲಿಸದೆ.

ದಿಪಾವಳಿ ಹಿನ್ನಲೆಯಲ್ಲಿ ವಿಶೇಷ ರೈಲುಗಳು ಸಂಚರಿಸುತ್ತಿದ್ದು ಯಾವುದೇ ಅಡೆತಡೆಯಾಗದಂತೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Articles You Might Like

Share This Article