ರಾಜ್ಯದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣ ಪ್ರಕ್ರಿಯೆಗೆ ಚಾಲನೆ
ಬೆಂಗಳೂರು,ಜು.7- ತಮಿಳುನಾಡಿಗೆ ಸಡ್ಡು ಹೊಡೆದು ರಾಜ್ಯದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣಕ್ಕೆ ರಾಜ್ಯಸರ್ಕಾರ ಮುಂದಾಗಿದ್ದು, ಈಗಾಗಲೇ ಸ್ಥಳ ಆಯ್ಕೆಯೂ ಸೇರಿದಂತೆ ಹಲವು ಪ್ರಕ್ರಿಯೆಗಳಿಗೆ ಚಾಲನೆ ನೀಡಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗಿನ ಒಪ್ಪಂದದ ಪ್ರಕಾರ, 2032 ರವರೆಗೂ ಮತ್ತೊಂದು ವಿಮಾನನಿಲ್ದಾಣ ನಿರ್ಮಿಸಲು ಅವಕಾಶ ಇಲ್ಲ. 2033 ರ ನಂತರ ವಿಮಾನನಿಲ್ದಾಣ ಸ್ಥಾಪನೆಗೆ ಯಾವುದೇ ಅಡ್ಡಿ ಇಲ್ಲ ಎಂದರು. ಆದರೂ ರಾಜ್ಯಸರ್ಕಾರಕ್ಕೆ ವಿಶೇಷ ರಿಯಾಯಿತಿಗಳಿವೆ. ಎಕ್‌್ಸಕ್ಯೂಸ್ಲೀವ್ ಕ್ಲಾಸ್ ನಿಯಮಾವಳಿಗಳ ಅನುಸಾರವೇ ಎರಡನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸ್ಥಾಪನೆಗೆ ನಿರ್ಧರಿಸಲಾಗಿದೆ.ಕೆಲದಿನಗಳ ಹಿಂದೆ ಮೂಲಭೂತ ಸೌಕರ್ಯ ಇಲಾಖೆಯ ಸಭೆ ನಡೆಸಲಾಗಿದ್ದು, 2033 ರವರೆಗೂ ಕಾಯುವ ಅಗತ್ಯವಿಲ್ಲ. ಇದರ ನಡುವೆ ಭೂಸ್ವಾಧೀನ, ಸ್ಥಳ ಆಯ್ಕೆ ಸೇರಿದಂತೆ ಇತರ ಮಾನದಂಡಗಳ ಪರಿಶೀಲನೆ ಆರಂಭವಾಗಿದೆ ಎಂದರು. 2ನೇ ವಿಮಾನನಿಲ್ದಾಣದ ನಿರ್ಮಾಣಕ್ಕೆ ಈಗಾಗಲೇ ಅಸ್ತಿತ್ವದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಸಂಪರ್ಕವನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಳ್ಳಬೇಕೇ? ಅಥವಾ ಪ್ರಯಾಣಿಕರ ದಟ್ಟಣೆಯನ್ನು … Continue reading ರಾಜ್ಯದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣ ಪ್ರಕ್ರಿಯೆಗೆ ಚಾಲನೆ
Copy and paste this URL into your WordPress site to embed
Copy and paste this code into your site to embed